ಕ್ರೀಡೆ

ಮದುವೆಯನ್ನು ಗುಟ್ಟಾಗಿ ಇಡಲು ಕೊಹ್ಲಿ ಹೆಸರನ್ನೇ ಬದಲಿಸಿದ ಅನುಷ್ಕಾ

Pinterest LinkedIn Tumblr


ಮುಂಬೈ: ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ 2017ರಲ್ಲಿ ಇಟಲಿಯಲ್ಲಿ ಯಾರಿಗೂ ತಿಳಿಸದೇ ಗುಟ್ಟಾಗಿ ಮದುವೆ ಆಗಿದ್ದರು. ತಮ್ಮ ಮದುವೆಯ ಸೀಕ್ರೆಟ್ ಯಾರಿಗೂ ತಿಳಿಯಬಾರದೆಂದು ಅನುಷ್ಕಾ ಕ್ಯಾಟರಿಂಗ್ ಮಾಡುವವರ ಬಳಿ ವಿರಾಟ್ ಕೊಹ್ಲಿ ಹೆಸರನ್ನೇ ಬದಲಿಸಿದ್ದಾರೆ.

ಇತ್ತೀಚೆಗೆ ಅನುಷ್ಕಾ ಶರ್ಮಾ ವೋಗ್ ಮ್ಯಾಗಜೀನ್‍ಗೆ ಸಂದರ್ಶನ ನೀಡಿದ್ದರು. ಈ ವೇಳೆ ಅವರು ತಮ್ಮ ವೃತ್ತಿಜೀವನದ ಬಗ್ಗೆ ಹಾಗೂ ತಮ್ಮ ಮದುವೆಯ ಬಗ್ಗೆ ಇದ್ದ ಸೀಕ್ರೆಟ್ ಅನ್ನು ರಿವೀಲ್ ಮಾಡಿದ್ದರು. ಮದುವೆಯ ಸಂದರ್ಭದಲ್ಲಿ ಕ್ಯಾಟರಿಂಗ್ ಮಾಡುವವರ ಬಳಿ ವಿರಾಟ್ ಹೆಸರು ಬದಲು ಬೇರೆಯವರ ಹೆಸರನ್ನು ಹೇಳಿದೆ ಎಂದು ಅನುಷ್ಕಾ ಹೇಳಿದ್ದಾರೆ.

ನನ್ನ ಮದುವೆಗೆ ಮಾಧ್ಯಮದವರು ಇರಬಾರದು ಎಂದು ನಾನು ಈ ರೀತಿ ಮಾಡಿದೆ. ಅಲ್ಲದೇ ಕುಟುಂಬಸ್ಥರ ನಡುವೆ ನನ್ನ ಮದುವೆ ನಡೆಯಬೇಕೆಂಬ ಆಸೆ ನನಗಿತ್ತು. ಹಾಗಾಗಿ ನನ್ನ ಮದುವೆಯಲ್ಲಿ ಸ್ನೇಹಿತರು ಹಾಗೂ ಕುಟುಂಬದವರು ಸೇರಿ ಕೇವಲ 42 ಮಂದಿ ಇದ್ದರು ಎಂದರು.

ನನಗೆ ನನ್ನ ಹಾಗೂ ವಿರಾಟ್ ಮದುವೆ ಬೇಕಿತ್ತೆ ಹೊರತು ದೊಡ್ಡ ಸೆಲೆಬ್ರಿಟಿ ಮದುವೆ ಅಲ್ಲ. ನನ್ನ ಮದುವೆಯಲ್ಲಿ ಬಂದಿದ್ದ ಅತಿಥಿಗಳೆಲ್ಲರೂ ತುಂಬಾನೇ ಉತ್ಸಾಹಿತರಾಗಿದ್ದರು. ಅದನ್ನು ನೋಡಿ ನನಗೆ ಖುಷಿಯಾಯಿತು. ನಾನು ವಿರಾಟ್ ಹೆಸರನ್ನು ರಾಹುಲ್ ಎಂದು ಬದಲಿಸಿದೆ ಎಂದು ಅನುಷ್ಕಾ ಹೇಳಿದ್ದಾರೆ.

ವಿರಾಟ್ ಕೊಹ್ಲಿ- ಅನುಷ್ಕಾ ಇಟಲಿಯ ಖಾಸಗಿ ರೆಸಾರ್ಟ್ ನಲ್ಲಿ ಪಂಜಾಬಿ ಸಂಪ್ರದಾಯದಂತೆ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದರು. ಇಟಲಿಯ ಟಸ್ಕನಿ ನಗರದ `ಬೋಗೋ ಫಿನೊಕಿಯೆಟೊ’ ಎಂಬ ದುಬಾರಿ ರೆಸಾರ್ಟ್ ನಲ್ಲಿ ದ್ರಾಕ್ಷಿ ಹಣ್ಣಿನ ತೋಟದ ನಡುವೆ ಇರುವ ಸ್ವರ್ಗದಂಥಹ ತಾಣದಲ್ಲಿ ವಿರುಷ್ಕಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

Comments are closed.