ಮನೋರಂಜನೆ

ಮಗಳ ನಿಶ್ಚಿತಾರ್ಥ; ಮದುವೆ ಸಡಗರದಲ್ಲಿ ನಟ ರವಿಚಂದ್ರನ್!

Pinterest LinkedIn Tumblr


ಬೆಂಗಳೂರು: ಸ್ಯಾಂಡಲ್​​ವುಡ್​​ ಕೇಜ್ರಿಸ್ಟಾರ್ ರವಿ ಚಂದ್ರನ್​​ ಅವರ ಮನೆಯಲ್ಲಿ ಈಗ ಮದುವೆ ಸಂಭ್ರಮ. ಕನ್ನಡ ಚಿತ್ರರಂಗದ ಕನಸುಗಾರನ ಮಗಳು ಗೀತಾಂಜಲಿಗೆ ಕಂಕಣ ಬಾಗ್ಯ ಕೂಡಿ ಬಂದಿದ್ದು, ನಿಶ್ಚಿತಾರ್ಥ ಕಾರ್ಯಕ್ರಮ ನೆರವೇರಿಸಲಾಗಿದೆ. ಇಂದು ನಗರದ ಶರ್ಟಾನ್ ಹೋಟೇಲ್​​ನಲ್ಲಿ ಅದ್ದೂರಿಯಾಗಿ ನಡೆದ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಗಣ್ಯರ ದಂಡೇ ಆಗಮಿಸಿತ್ತು. ಗೀತಾಂಜಲಿ ನಿರ್ಶಿತಾರ್ಥಕ್ಕೆ ಬಹುಭಾಷ ನಟಿ ಖುಷ್ಬು , ಹಂಸಲೇಖ, ಪುನೀತ್, ಜಗ್ಗೇಶ್, ಅಕುಲ್ ಬಾಲಾಜಿ ಸೇರಿದಂತೆ ಚಿತ್ರರಂಗದ ಸಾಕಷ್ಟು ಗಣ್ಯರು ಆಗಮಿಸಿದ್ದರು.

ಇನ್ನು ಶರ್ಟಾನ್ ಹೋಟೆಲ್​​​ನಲ್ಲಿ ನಡೆದ ಈ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಅದ್ದೂರಿಯಾಗಿ ಸೆಟ್​​ ಹಾಕಲಾಗಿತ್ತು. ಇಡೀ ಕಾರ್ಯಕ್ರಮದ ಸೆಟ್​​ ಅನ್ನು ಕಲರ್​​ಫುಲ್​​ ಹೂಗಳಿಂದ ಸಿಂಗರಿಸಲಾಗಿತ್ತು. ರವಿ ಚಂದ್ರನ್ ಅಂದ್ರೇನೆ ಬೃಹತ್​​ ಸೆಟ್​​​ ಕಣ್ಮುಂದೆ ಬರುತ್ತದೆ ಎಂದಮೇಲೆ ತಮ್ಮ ಮಗಳ ಮದುವೆ ಬಗ್ಗೆ ಕೇಳಬೇಕೆ. ಗೀತಾಂಜಲಿ ಮದುವೆಗಾಗಿಯೇ ವಿಶೇಷ ಸೆಟ್ ನಿರ್ಮಿಸಲಾಗಿದೆ.

ಏಳು ಬಿಳಿ ಆಶ್ವದ ರೀತಿಯಲ್ಲಿ​​ಯೇ​ ವೇದಿಕೆಯನ್ನು ಅಂಲಕರಿಸಲಾಗಿದೆ. ತಿಳಿ ನೀಲಿ ಮಿಶ್ರಿತ ಬಣ್ಣದ ಸ್ಯಾರಿಯಲ್ಲಿ ರವಿ ಚಂದ್ರನ್ ಪುತ್ರಿ ಗೀತಾಂಜಲಿ ಕಾಣಿಸಿಕೊಂಡರೇ, ನೀಲಿ ಬಣ್ಣದ ಸೂಟ್​​ನಲ್ಲಿ ಅಜಯ್ ಮಿಂಚಿದ್ದಾರೆ. ರವಿಚಂದ್ರನ್ ಅವರು ತಮ್ಮ ಮಗಳನ್ನ ಬಿಸಿನೆಸ್ ಮ್ಯಾನ್ ಆಗಿರುವ ಅಜಯ್ ಅವರಿಗೆ ಕೊಟ್ಟು ಮದುವೆ ಮಾಡುತ್ತಿದ್ದಾರೆ. ಅಲ್ಲದೇ ಇನ್ನು ನಿಶ್ಚಿತಾರ್ಥದ ಕೆಲಸಗಳನ್ನ ರವಿಚಂದ್ರನ್ ಅವರು ತುಂಬಾ ಗುಟ್ಟಾಗಿ ಮಾಡಿ ಮುಗಿಸಿದ್ದಾರೆ ಎನ್ನಲಾಗಿದೆ.

ರವಿಚಂದ್ರನ್ ಅವರು ತನ್ನ ಮಗಳ ನಿಶ್ಚಿತಾರ್ಥಕ್ಕೆ ತಮಗೆ ಬಹಳ ಆಪ್ತರನ್ನಾ ಮಾತ್ರ ಕರೆದಿದ್ದಾರೆ. ಬಲ್ಲ ಮೂಲಗಳ ಪ್ರಕಾರ ರವಿಚಂದ್ರನ್ ಅವರು ತಮ್ಮ ಕುಟುಂಬಸ್ಥರು, ಆಪ್ತರಿಗೆ ನಿಶ್ಚಿತಾರ್ಥ ಆಮಂತ್ರಣ ನೀಡಿದ್ದಾರೆ. ಹೀಗಾಗಿಯೇ ತಮಗೆ ತುಂಬಾ ಆಪ್ತರಾದ ಹಂಸಲೇಖ, ಸುದೀಪ್, ದರ್ಶನ್ ಸೇರಿದಂತೆ ಹಲವು ಗಣ್ಯರು ಗೀತಾಂಜಲಿ ಅವರ ನಿಶ್ಚಿತಾರ್ಥದಲ್ಲಿ ಭಾಗಿಯಾಗಿದ್ಧಾರೆ.

Comments are closed.