ಮನೋರಂಜನೆ

ಪಾಕ್ ನಟರಿಗೆ ಬಾಲಿವುಡ್ ನಿಷೇಧ, ಮೊದಲ ಅಸ್ತ್ರ ಪ್ರಯೋಗ

Pinterest LinkedIn Tumblr


ಮುಂಬೈ: ಪುಲ್ವಾಮಾ ದಾಳಿ ಹಿನ್ನೆಲೆಯಲ್ಲಿ ಪಾಕ್​ ಕಲಾವಿದರಿಗೆ ನಿಷೇಧ ಹೇರಲಾಗಿದ್ದು ಬಾಲಿವುಡ್ ಅಭಿಮಾನಿಗಳ ಒತ್ತಾಯವೂ ಕೇಳಿ ಬಂದ ನಂತರ ಸಲ್ಮಾನ್​ ಖಾನ್​ ಮೊದಲ ಹೆಜ್ಜೆ ಇಡಲು ಮುಂದಾಗಿದ್ದಾರೆ ಎಂದು ವರದಿಯಾಗಿದೆ.

ಸಲ್ಮಾನ್ ತಮ್ಮ ‘ನೋಟ್​ಬುಕ್’​ ಹಾಗೂ ‘ಭಾರತ್’​​ ಚಿತ್ರದಲ್ಲಿಯ ಸಾಂಗ್​ ರೀ-ರೆಕಾರ್ಡಿಂಗ್‌ನಲ್ಲಿ ಪಾಕ್ ಕಲಾವಿದರನ್ನು ಬಳಸಿಕೊಳ್ಳದಿರಲು ನಿರ್ಧರಿಸಿದ್ದಾರೆ. ಎರಡು ಚಿತ್ರಗಳಲ್ಲಿಯ ಒಂದೊಂದು ಹಾಡಿಗೆ ಪಾಕ್​ ಗಾಯಕ ಅತಿಫ್​ ಅಸ್ಲಾಮ್​ ಹಾಗೂ ರಹಾತ್​ ಫತೇಶ್​​ ಅಲಿ ಖಾನ್ ಧ್ವನಿ ನೀಡಿದ್ದಾರೆ. ನಿನ್ನೆಯಷ್ಟೆ ಪಾಕ್​ ಕಲಾವಿದರಿಗೆ ಬಾಲಿವುಡ್​ ಬ್ಯಾನ್ ಮಾಡಿದ್ದಕ್ಕೆ ಈ ಹಾಡುಗಳನ್ನು ಮರು ರೆಕಾರ್ಡಿಂಗ್ ಮಾಡಲು ಸಲ್ಮಾನ್ ನಿರ್ಧಾರ ಮಾಡಿದ್ದಾರೆ.

ಸುದ್ದಿಯನ್ನು ಅಧಿಕೃತವಾಗಿ ಪ್ರಕಟಮಾಡಿಲ್ಲವಾದರೂ ಸಲ್ಲು ಈ ಹೆಜ್ಜೆ ಇಡಲು ಸಿದ್ಧರಾಗಿರುವುದನ್ನು ಅವರ ಆಪ್ತ ವಲಯ ಹೇಳಿದೆ. ಒಟ್ಟಿನಲ್ಲಿ ಬಾಲಿವುಡ್ ತೆಗೆದುಕೊಂಡ ನಿರ್ಧಾರ ಪಾಕ್ ಕಲಾವಿದರ ಮೇಲೆ ಪರಿಣಾಮ ಬೀರುವುದೆಂತೂ ಸುಳ್ಳಲ್ಲ.

Comments are closed.