ಮನೋರಂಜನೆ

ಬುದ್ಧಿ ಜೀವಿಗಳನ್ನು ದೇಶದಿಂದ ಓಡಿಸಿ: ಹುತಾತ್ಮ ಯೋಧ ಗುರು ಮನೆಗೆ ತೆರಳಿ ನಿರ್ದೇಶಕ ರಿಷಬ್ ಶೆಟ್ಟಿ

Pinterest LinkedIn Tumblr


ಮಂಡ್ಯ: ಬುದ್ಧಿ ಜೀವಿಗಳನ್ನು ದೇಶದಿಂದ ಓಡಿಸಿದ್ರೆ ಎಲ್ಲವೂ ಚೆನ್ನಾಗಿರುತ್ತದೆ. ಅವರು ನಾನ್ ಸೆನ್ಸ್ ಮಾಡುತ್ತಿದ್ದಾರೆ ಎಂದು ನಟ, ನಿರ್ದೇಶಕ ರಿಷಬ್ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹುತಾತ್ಮ ಯೋಧ ಗುರು ಮನೆಗೆ ತೆರಳಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಬಳಿಕ ಮಾತನಾಡಿದ ಅವರು, ಬುದ್ಧಿ ಜೀವಿಗಳು ಮಾತುಕತೆಯ ಬಗ್ಗೆ ಮಾತನಾಡುತ್ತಿದ್ದಾರೆ. ಅವರನ್ನು ಓಡಿಸಿದ್ರೆ ದೇಶ ಚೆನ್ನಾಗಿರುತ್ತದೆ. ಇದಕ್ಕೆ ತಕ್ಕ ಉತ್ತರ ಕೊಡಬೇಕು. ದೊಡ್ಡ ಮಟ್ಟದ ವಾರ್ ಡಿಕ್ಲೇರ್ ಮಾಡಬೇಕು. ಐಡೆಂಟಿಟಿ ಕ್ರೈಸಿಸ್‍ನಿಂದ ಕೆಲವರು ಮಾತಾಡ್ತಾರೆ. ವಂದೇ ಮಾತರಂ ಅಂದ್ರೆ ಗುಂಡಾಕ್ತಾರೆ. ಪಾಕಿಸ್ತಾನಕ್ಕೆ ಜೈಕಾರ ಕೂಗುವವರಿಗೆ ಹುಚ್ಚು ಹಿಡಿದಿದೆ. ಇದಕ್ಕೆ ಕೆಲವೊಂದು ರಾಜಕಾರಣ ಕಾರಣವಾಗಿದೆ. ಈ ರೀತಿ ಕೂಗಿದ್ರೆ ಗುರುತಿಸಿಕೊಳ್ಳಬಹುದು ಅಂದುಕೊಂಡಿದ್ದಾರೆ. ಅವರನ್ನು ಮಟ್ಟ ಹಾಕಬೇಕು ಎಂದು ವಾಗ್ದಾಳಿ ನಡೆಸಿದ್ರು.

ಗುರು ಕುಟುಂಬದವರಿಗೆ ಸಮಾಧಾನ ಹೇಳೋದು ಬಿಟ್ಟರೆ ನಮ್ಮ ಕೈಯಲ್ಲಿ ಏನೂ ಮಾಡಲು ಸಾಧ್ಯವಿಲ್ಲ. ನಾವು ನಿಮ್ಮ ಜೊತೆ ಇದ್ದೇವೆ ಎಂದು ಹೇಳೋದಕ್ಕೆ ಹೆಮ್ಮೆಯಾಗುತ್ತಿದೆ. ನಾವಂತೂ ಬಾರ್ಡರ್ ನಲ್ಲಿ ಹೋಗಿ ದೇಶ ಕಾಯೋ ಕೆಲಸ ಮಾಡಿಲ್ಲ. ಇಲ್ಲಿ ಆರಾಮಾಗಿದ್ದೇವೆ. ಅವರು ನಮ್ಮನ್ನು ಕಾಯುತ್ತಿರುವುದರಿಂದ ನಾವು ಆರಾಮವಾಗಿರಲು ಕಾರಣ ಎಂದು ಅವರು ಹೇಳಿದ್ರು. ಇದನ್ನೂ ಓದಿ; ಯೋಧ ಗುರು ಮನೆಗೆ ಹೋಗಿ ತಂದೆಯನ್ನು ನೆನೆದು ಹರಿಪ್ರಿಯಾ ಕಣ್ಣೀರು

ನಾವೆಲ್ಲ ಹೋಗಿ ನಿಮ್ಮ ಜೊತೆ ಇದ್ದೇವೆ ಅಂದ್ರೆ ಅವರಿಗೂ ಸ್ವಲ್ಪ ಧೈರ್ಯ ಬರುತ್ತದೆ. ಯಾಕಂದ್ರೆ ಅವರಿಗೆ ನನ್ನ ಮಗನನ್ನು ಯಾಕಾದ್ರೂ ಸೇನೆಗೆ ಕಳುಹಿಸಿದೆ ಎಂಬಂತಾಗಬಾರದು. ಹೀಗಾಗಿ ಇಡೀ ದೇಶ, ರಾಜ್ಯ ನಮ್ಮ ಜೊತೆಗಿದೆ ಅನ್ನೋ ಭಾವನೆ ತರಿಸಬೇಕು. ಅವರು ಯಾವತ್ತೂ ಮುಂದೆ ನೊಂದುಕೊಳ್ಳಬಾರದು ಎಂದು ಅವರು ತಿಳಿಸಿದ್ರು.

ನಾನು ಕೂಡ ರಿಕ್ಕಿ ಸಿನಿಮಾದ ಶೂಟಿಂಗ್ ಗೆ ಜಮ್ಮು-ಕಾಶ್ಮೀರಕ್ಕೆ ಹೋಗಿದ್ದೆ. ಅಲ್ಲಿ ಹೋಗಿದ್ದ ನಾನು ಅವರನ್ನು ಗಮನಿಸಿದಂತೆ ಅವರೂ ದಿನದ 24 ಗಂಟೆಯೂ ಅಲರ್ಟ್ ಆಗಿ ಕೆಲಸ ಮಾಡುತ್ತಿದ್ದರು. ಪ್ರತಿಯೊಂದನ್ನು ಚೆಕ್ ಮಾಡುತ್ತಿದ್ದರು. ಅಲ್ಲಿ ಏನೇ ಸ್ವಲ್ಪ ಹೆಚ್ಚು ಕಮ್ಮಿಯಾದ್ರೂ ಅವರ ಗಮನ ಇರುತ್ತಿತ್ತು. ಇದನ್ನೂ ಮೀರಿ ಕೆಲವರು ನಮ್ಮ ದೇಶದ ಒಳಗೆ ನುಗಿ ಇಂತಹ ಹೇಯ ಕೃತ್ಯಗಳನ್ನು ನಡೆಸುತ್ತಾರೆ ಅಂದ್ರೆ ಒಳಗೆನೂ ಅವರಿಗೆ ಬೆಂಬಲ ಇರಬಹುದು ಎಂದು ದೇಶದ್ರೋಹಿಗಳ ವಿರುದ್ಧ ಗರಂ ಆದ್ರು.

ಗುರು ಇಡೀ ದೇಶದ ಹೆಮ್ಮೆ. ಏನೇ ಸಹಾಯ ಮಾಡಿದ್ರು ನೋವನ್ನು ಬರಿಸಲು ಆಗಲ್ಲ. ಇಡೀ ದೇಶ ಜೊತೆ ಇದೆ ಎಂಬುದನ್ನು ತೋರಿಸಿದ್ರೆ ತಾಯಿಗೆ ಧೈರ್ಯ ಇರುತ್ತೆ. ಪರಿಹಾರ ಕೊಟ್ಟರೆ ನೋವನ್ನು ಬರಿಸಲು ಆಗಲ್ಲ. ನಾನು ನೀಡಿದ ಹಣ ನನ್ನದಲ್ಲ. ಸರ್ಕಾರಿ ಶಾಲೆ ಸಿನಿಮಾ ನೋಡಿ ಜನ ಕೊಟ್ಟ ಹಣ. ಅದನ್ನು ಈ ರೀತಿಯ ಸೇವೆಗೆ ಬಳಸುತ್ತಿದ್ದೇನೆ. ಉಗ್ರರ ಕೃತ್ಯಕ್ಕೆ ತಕ್ಕ ಉತ್ತರ ಕೊಡಬೇಕು ಎಂದು ಆಗ್ರಹಿಸಿದ್ರು.

ಬಳಿಕ ಬೆಲ್‍ಬಾಟಂ ಚಿತ್ರ ತಂಡ ಗುರು ಅವರನ್ನು ಅಂತ್ಯಸಂಸ್ಕಾರ ಮಾಡಿದ ಸ್ಥಳಕ್ಕೆ ಭೇಟಿ ನೀಡಿ ವಂದನೆ ಸಲ್ಲಿಸಿತ್ತು. ಇದೇ ವೇಳೆ ನಟಿ ಹರಿಪ್ರಿಯ ಅವರು ಹುತಾತ್ಮ ಯೋಧ ಗುರು ಮನೆಯವರ ದುಃಖ ನೋಡಿ, ತಂದೆಯ ಸಾವನ್ನು ನೆನೆದು ಕಣ್ಣೀರಿಟ್ಟರು.

Comments are closed.