ಮನೋರಂಜನೆ

ಮತ್ತೆ ಚಿತ್ರೀಕರಣ ಶುರು ಮಾಡಿದ “ಪೊಗರು’

Pinterest LinkedIn Tumblr


ನಟ ಧ್ರುವ ಸರ್ಜಾ ಅಭಿನಯದ “ಪೊಗರು’ ಚಿತ್ರದ ಎರಡನೇ ಹಂತದ ಚಿತ್ರೀಕರಣ ನಿನ್ನೆಯಿಂದ ಮುತ್ತಿನಗರಿ ಹೈದರಾಬಾದ್‌ನಲ್ಲಿ ಆರಂಭವಾಗಿದೆ. ಎರಡನೇ ಹಂತದ ಚಿತ್ರೀಕರಣದಲ್ಲಿ “ಪೊಗರು’ ಚಿತ್ರದ ಆ್ಯಕ್ಷನ್‌ ದೃಶ್ಯಗಳು, ಪ್ರಮುಖ ಹಾಡುಗಳು ಮತ್ತು ಸನ್ನಿವೇಶಗಳ ಚಿತ್ರೀಕರಣಕ್ಕೆ ಚಿತ್ರತಂಡ ಪ್ಲಾನ್‌ ಹಾಕಿಕೊಂಡಿದೆ. ಇನ್ನೊಂದು ವಿಶೇಷವೆಂದರೆ, “ಪೊಗರು’ ಚಿತ್ರದಲ್ಲಿ ಹಿರಿಯ ನಟ ಕಂ ನಿರ್ಮಾಪಕ ರಾಘವೇಂದ್ರ ರಾಜಕುಮಾರ್‌ ಕೂಡ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದು, ಎರಡನೇ ಹಂತದ ಚಿತ್ರದಲ್ಲಿ ರಾಘಣ್ಣ ಕೂಡ “ಪೊಗರು’ ಚಿತ್ರತಂಡವನ್ನು ಸೇರಲಿದ್ದಾರೆ ಎನ್ನಲಾಗುತ್ತಿದೆ.

“ಪೊಗರು’ ಚಿತ್ರದಲ್ಲಿ ಧ್ರುವ ಸರ್ಜಾ ಹನ್ನೆರಡು ವರ್ಷದ ಹುಡುಗನಾಗಿ ಮತ್ತು ಕಾಲೇಜು ಹುಡುಗನಾಗಿ ಎರಡು ಶೇಡ್‌ನ‌ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿಕ್ಕ ಹುಡುಗನ ಪಾತ್ರಕ್ಕಾಗಿ ಮೊದಲ ಹಂತದಲ್ಲಿ ದೇಹದ ತೂಕವನ್ನು ಕಡಿಮೆ ಮಾಡಿಕೊಂಡಿದ್ದ ಧ್ರುವ, ಅದಾದ ಬಳಿಕ ಚಿತ್ರೀಕರಣದಿಂದ ಕೊಂಚ ಗ್ಯಾಪ್‌ ತೆಗೆದುಕೊಂಡು ಮತ್ತೆ ದೇಹದ ತೂಕವನ್ನು ಹೆಚ್ಚಿಸಿಕೊಂಡು ಎರಡನೇ ಹಂತದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ.

ಇನ್ನು ಚಿತ್ರೀಕರಣಕ್ಕೂ ಮುನ್ನ ಸೋಷಿಯಲ್‌ ಮೀಡಿಯಾದಲ್ಲಿ ಸೆಲ್ಫಿ ವಿಡಿಯೋ ಪೋಸ್ಟ್‌ ಮಾಡಿರುವ ಧ್ರುವ, ಹೈದರಾಬಾದ್‌ಗೆ ಶೂಟಿಂಗ್‌ಗಾಗಿ ಹೋಗುತ್ತಿರುವ ನಮ್ಮನ್ನು ಹರಸುವಂತೆ ಸಿನಿಪ್ರಿಯರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಅಂದಹಾಗೆ, ಈ ತಿಂಗಳ ಕೊನೆಯವರೆಗೂ “ಪೊಗರು’ ಚಿತ್ರದ ಚಿತ್ರೀಕರಣ ಮುಂದುವರೆಯಲಿದ್ದು, ಈ ಹಿಂದೆ ಸುದೀಪ್‌ ಅಭಿನಯದ “ರನ್ನ’, “ಮುಕುಂದ ಮುರಾರಿ’ ಚಿತ್ರವನ್ನು ನಿರ್ದೇಶಿಸಿದ್ದ ನಂದಕಿಶೋರ್‌ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.

Comments are closed.