ಮನೋರಂಜನೆ

ಪ್ರೇಮಿಗಳ ದಿನಕ್ಕೆ ಪ್ರೇಮಪಾಠ ಹೇಳಲಿರುವ ಪಡ್ಡೆಹುಲಿ ಚಿತ್ರದ ಹಾಡು!

Pinterest LinkedIn Tumblr


ಬೆಂಗಳೂರು: ಇನ್ನೇನು ವಾರ ಕಳೆದರೆ ಪ್ರೇಮಿಗಳ ದಿನ ಬರುತ್ತೆ. ತುಸು ಕಂಪಿಸುತ್ತಲೇ ಅದೆಷ್ಟೋ ಯುವ ಮನಸುಗಳು ಆ ದಿನದ ಪ್ರೇಮ ಪರೀಕ್ಷೆಗೆ ತಯಾರಾಗುತ್ತಿವೆ. ಇಂಥಾ ಯಾವ ಭಯವೂ ಇಲ್ಲದೇ ಯಶಸ್ವಿಯಾಗಿ ಉತ್ತಮ ಶ್ರೇಣಿಯೊಂದಿಗೇ ಈ ಪರೀಕ್ಷೆ ಪಾಸು ಮಾಡಬಹುದಾದ ಸೂತ್ರವೊಂದನ್ನು ಪಡ್ಡೆಹುಲಿ ಹಾಡು ಹೊತ್ತು ತರುತ್ತಿದೆ. ಪ್ರೇಮಿಗಳಿಗೆಂದೇ ತಯಾರಾಗಿರೋ ಈ ಹಾಡಿನ ಮೂಲಕ ಪಡ್ಡೆಹುಲಿಯ ಪ್ರೇಮ ಪಾಂಡಿತ್ಯವೂ ಜಾಹೀರಾಗಲಿದೆ.

ವ್ಯಾಲೆಂಟೈನ್ಸ್ ಡೇ ಸ್ಪೆಷಲ್ ಎಂಬಂಥಾ ಈ ಹಾಡನ್ನು ಇದೇ ಫೆಬ್ರವರಿ 11ರಂದು ಸಂಜೆ 7 ಘಂಟೆಗೆ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. ಈ ವೀಡಿಯೋ ಸಾಂಗ್ ಪ್ರೇಮ ಪರೀಕ್ಷೆಯನ್ನ ಯಶಸ್ವಿಯಾಗಿ ಎದುರಿಸೋ ಸೂತ್ರಗಳು, ಅಮೂಲ್ಯವಾದ ಟಿಪ್ಸ್ ಗಳನ್ನೂ ಹೊಂದಿದೆಯಂತೆ.

ಇದು ನಿರ್ದೇಶಕ ಗುರುದೇಶಪಾಂಡೆಯವರ ಬತ್ತಳಿಕೆಯಿಂದ ಹೊರ ಬರುತ್ತಿರುವ ಮತ್ತೊಂದು ಬಾಣ. ಇದೊಂಥರಾ ಪ್ರತೀ ಯುವ ಮನಸುಗಳನ್ನು ನೇರವಾಗಿ ತಲುಪುವಂಥಾ ಪ್ರೇಮ ಬಾಣವೂ ಹೌದು. ಈಗಾಗಲೇ ಹಾಡುಗಳ ಮೂಲಕ ಪಡ್ಡೆಹುಲಿ ಯುವ ಮನಸುಗಳನ್ನ ಆವರಿಸಿಕೊಂಡಿದೆ. ಈ ಕಾರಣದಿಂದಲೇ ಈ ವರೆಗೆ ಬಿಡುಗಡೆಯಾಗಿರೋ ಎರಡು ಹಾಡುಗಳು ಯೂಟ್ಯೂಬ್ ನಲ್ಲಿ ಟ್ರೆಂಡಿಂಗ್‍ನಲ್ಲಿವೆ.

ಪ್ರೇಮಿಗಳಿಗೆ ಗಿಫ್ಟ್ ಎಂಬಂತೆ ಬಿಡುಗಡೆಗೆ ರೆಡಿಯಾಗಿರೋ ಹಾಡೂ ಕೂಡಾ ಅಂಥಾದ್ದೇ ಕಮಾಲ್ ಸೃಷ್ಟಿಸೋ ಭರವಸೆ ಚಿತ್ರತಂಡದಲ್ಲಿದೆ.

Comments are closed.