ಮನೋರಂಜನೆ

ಅಭಿಮಾನಿಯನ್ನು ಬೈದಿದಕ್ಕೆ ಕೆಂಡಾಮಂಡಲವಾದ ರಶ್ಮಿಕಾ ಮಂದಣ್ಣ!

Pinterest LinkedIn Tumblr


ಸದ್ಯಕ್ಕೆ ಯಜಮಾನ ಚಿತ್ರದ ಬಿಡುಗಡೆಯಲ್ಲಿ ಬ್ಯುಸಿ ಇರುವ ರಶ್ಮಿಕಾ ಮತ್ತೊಮ್ಮೆ ಟಾಕ್ ಆಫ್ ದಿ ಟೌನ್ ಆಗಿದ್ದಾರೆ. ರಶ್ಮಿಕಾ ಮಂದಣ್ಣ ಕರ್ನಾಟಕ ಫ್ಯಾನ್ಸ್ ಕ್ಲಬ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಮಾಡಿದ್ದರು. ‘ಕನ್ನಡ ನಟಿಯರಲ್ಲಿ ಇವರೊಬ್ಬರೇ ಎರಡು ಹಾಡುಗಳಿಗೆ 50 ಮಿಲಿಯನ್ ವೀಕ್ಷಣೆ ಹಾಗೂ ತೆಲುಗು ಚಿತ್ರದೊಂದರ ಹಾಡಿಗೆ 100 ಮಿಲಿಯನ್ ವೀಕ್ಷಣೆ ಪಡೆದಿರುವುದು’ ಎಂದು ಫೋಟೋದೊಂದಿಗೆ ಬರೆದುಕೊಂಡಿರುವುದು.

ಇದನ್ನು ನೋಡಿ ವ್ಯಕ್ತಿಯೊಬ್ಬ ‘ Hello, ಬಾಸ್ ಕ್ವೀನ್ ಆಫ್ ಯೂಟ್ಯೂಬ್!! ಬಿಗ್ಗೆಸ್ಟ್ ಜೋಕ್. ಆಕೆ ನಿಮ್ಮ ಪೇಜಿಗೆ ಮಾತ್ರ ರಾಣಿ ಪ್ರಪಂಚಕ್ಕೆ ಅಲ್ಲ. ಅಪ್ಪಿತಪ್ಪಿ ಯೂಟ್ಯೂಬ್ ನವರು ಇದನ್ನು ನೋಡಿದ್ರೆ ಬಿಕ್ಕಿ ಬಿಕ್ಕಿ ನಗುತ್ತಾರೆ. ನಿಮ್ಮ ಟೈಂ ವೇಸ್ಟ್ ಮಾಡ್ಕೋಬೇಡಿ’ ಎಂದು ಕಮೆಂಟ್ ಮಾಡಿದ್ದರು.

ಕಮೆಂಟ್ ಗಳ ಮೂಲಕ ಜಗಳ ಶುರುವಾಗುತ್ತಿದ್ದಂತೆ ರಶ್ಮಿಕಾ ಎಂಟ್ರಿ ಕೊಟ್ಟು ‘ ಸರ್, ನೀವು ನನಗೆ ಏನು ಬೇಕಾದ್ರೂ ಹೇಳಬಹುದು ಆದರೆ ನನ್ನ ಫ್ಯಾನ್ಸ್ ಗೆ ಅಲ್ಲ. ಅಯ್ಯೋ ದೇವ! ಇದರಿಂದ ನನ್ನ ಟೈಂ ವೇಸ್ಟ್ ಮಾಡಬೇಡಿ. Chalo ok bye’ ಎಂದು ರಶ್ಮಿಕಾ ಫ್ಯಾನ್ ಪೇಜ್ ಗೆ ಸಪೋರ್ಟ್ ಮಾಡಿ ಮಾತನಾಡಿದ್ದಾರೆ. ಇದನ್ನು ಕಂಡು ಅಭಿಮಾನಿಗಳು ರಶ್ಮಿಕಾಳಿಗೆ ಥ್ಯಾಂಕ್ಸ್ ಹೇಳಿದ್ದಾರೆ.

Comments are closed.