ಮನೋರಂಜನೆ

1 ಗಂಟೆಗೆ 2 ಲಕ್ಷ ಕೊಡುತ್ತೇನೆ ಎಂದು ಮಂಚಕ್ಕೆ ಕರೆದ ಕಾಮುಕನಿಗೆ ಖ್ಯಾತ ನಟಿ ಕೊಟ್ಟ ಉತ್ತರವೇನು ಗೊತ್ತೇ…?

Pinterest LinkedIn Tumblr

ಕೊಚ್ಚಿ: ರಾತ್ರಿ ಕೇವಲ 1 ಗಂಟೆಗೆ 2 ಲಕ್ಷ ಕೊಡುತ್ತೇನೆ ಎಂದು ಮಂಚಕ್ಕೆ ಕರೆದ ಕಾಮುಕನಿಗೆ ಖ್ಯಾತ ನಟಿಯೊಬ್ಬರು ತಲೆ ತಿರುಗುವಂತೆ ಉತ್ತರ ನೀಡಿದ್ದಾರೆ. ನಟಿ ಕೊಟ್ಟ ಉತ್ತರ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ದೇಶದಾದ್ಯಂತ #MeToo ಅಭಿಯಾನ ಸಂಚಲನವನ್ನೇ ಸೃಷ್ಟಿ ಮಾಡಿದ್ದು, ನಟಿಯರೊಂದಿಗಿನ ಅಸಭ್ಯ ನಡವಳಿಕೆ ವಿರುದ್ಧ ವ್ಯಾಪಕ ಆಕ್ರೋಶಗಳು ವ್ಯಕ್ತವಾಗುತ್ತಿವೆ. ಇದರ ಬೆನ್ನಲ್ಲೇ ಹಲವು ನಟಿಯರು ತಮಗಾದ ಕೆಟ್ಟ ಅನುಭವಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದು, ಈ ಪಟ್ಟಿಗೆ ಇದೀಗ ಮಲಯಾಳಂನ ಖ್ಯಾತ ನಟಿ ಗಾಯತ್ರಿ ಅರುಣ್ ಅವರೂ ಕೂಡ ಸೇರ್ಪಡೆಯಾಗಿದ್ದಾರೆ.

ಇತ್ತೀಚೆಗೆ ಗಾಯತ್ರಿ ಅರುಣ್ ತಮಗೆ ಎದುರಾದ ಇಂತಹ ಅನುಭವದ ಬಗ್ಗೆ ಸಾಕ್ಷಿ ಸಮೇತ ಬಹಿರಂಗಪಡಿಸಿದ್ದು, ಒಂದು ದಿನ ರಾತ್ರಿ ತನ್ನೊಂದಿಗೆ ಕಳೆದರೆ ರೂ. 2 ಲಕ್ಷ ಆಫರ್ ಮಾಡಿದ ವಿಷಯವನ್ನು ಅವರು ಬಹಿರಂಗಪಡಿಸಿದ್ದಾರೆ. ಒಂದು ರಾತ್ರಿ ಅದೂ ಸಹ ಒಂದು ಗಂಟೆ ಆ ಸುಖ ನೀಡಿದರೆ ಸಾಕು 2 ಲಕ್ಷ ಕೊಡುತ್ತೇನೆ ಎಂದರು ಎಂದು, ಮಿಗಿಲಾಗಿ ಈ ವಿಷಯ ಯಾರಿಗೂ ಹೇಳಲ್ಲ ಎಂದೂ ಸಹ ಹೇಳಿದ್ದಾನೆ. ಅಲ್ಲದೆ ಕಾಮುಕನಿಗೆ ತಮ್ಮದೇ ಶೈಲಿಯಲ್ಲಿ ನಟಿ ತಿರುಗೇಟು ನೀಡಿದ್ದು, ನಟಿಯ ತಿರುಗೇಟು ವಿಚಾರ ಇದೀಗ ವ್ಯಾಪಕ ವೈರಲ್ ಆಗಿದೆ.

ಕಾಮುಕ ಮಾಡಿದ್ದೆ ಮೇಸೆಜ್ ಸ್ಕ್ರೀನ್ ಶಾಟ್ ತೆಗೆದು ಪೇಸ್ ಬುಕ್ ಗೆ ಹಾಕಿರುವ ನಟಿ ಗಾಯತ್ರಿ ಅರುಣ್, ‘ನಿಮ್ಮ ತಾಯಿ ಮತ್ತು ಸಹೋದರಿ ಭದ್ರತೆ ಬಗ್ಗೆ ನಾನು ಪ್ರಾರ್ಥಿಸುತ್ತೇನೆ’ ಎಂದು ತಿರುಗೇಟು ನೀಡಿದ್ದಾರೆ.

ಗಾಯತ್ರಿ ಅರುಣ್ ‘ಪರಸ್ಪರಂ’ ಎಂಬ ಮಲಯಾಳಂ ಟಿವಿ ಸೀರೀಸ್ ನಲ್ಲಿ ದೀಪ್ತಿ ಐಪಿಎಸ್ ಪಾತ್ರ ಪೋಷಿಸುವ ಮೂಲಕ ಜನಪ್ರಿಯರಾಗಿದ್ದು, ತನಗೆ ಅಸಭ್ಯ ಮೆಸೇಜ್ ಕಳುಹಿಸಲು ಅವರಿಗೆ ಭಯ ಇಲ್ಲದಿದ್ದಾಗ ಅದನ್ನು ಬಹಿರಂಗಪಡಿಸಲು ನಾನೇಕೆ ಭಯ ಬೀಳಬೇಕು ಎಂದು ಗಾಯತ್ರಿ ಅರುಣ್ ಇತ್ತೀಚೆಗೆ ಸಂದರ್ಶನದಲ್ಲಿ ಸ್ಪಷ್ಟಪಡಿಸಿದ್ದರು. ಅಲ್ಲದೆ ಆ ಯುವಕನ ವಯಸ್ಸು ಕೇವಲ 17 ವರ್ಷಗಳು ಮಾತ್ರ ಎಂದೂ, ಹಾಗಾಗಿಯೇ ಆ ಅಪ್ರಾಪ್ತನ ಮೇಲೆ ಲೈಂಗಿಕ ಕಿರುಕುಳ ಪ್ರಕರಣ ದಾಖಲಿಸಲಿಲ್ಲ. ಆತನ ತಂದೆತಾಯಿ ಮನವಿ ಮೇರೆಗೆ ಆತನನ್ನು ಬಿಟ್ಟುಬಿಟ್ಟಿದ್ದಾಗಿ ಹೇಳಿಕೊಂಡಿದ್ದಾರೆ.

Comments are closed.