ಮನೋರಂಜನೆ

ಕಳೆದ 3 ವರ್ಷದಿಂದ ನಿಗೂಢ ಕಣ್ಮರೆಯಾಗಿರುವ ‘ಮುನ್ನಾಭಾಯಿ ಎಂಬಿಬಿಎಸ್’ ಚಿತ್ರನಟ

Pinterest LinkedIn Tumblr

ಮುಂಬೈ: ಬಾಲಿವುಡ್ ನ ಅತ್ಯಂತ ಪ್ರಸಿದ್ದ ಚಿತ್ರಗಳಲ್ಲಿ ಒಂದಾದ “ಮುನ್ನಾಭಾಯಿ ಎಂಬಿಬಿಎಸ್” ಚಿತ್ರದ ನಟನೊಬ್ಬ ಮೂರು ವರ್ಷಗಳಿಂದ ನಾಪತ್ತೆಯಾಗಿದ್ದು ಇದುವರೆಗೆ ಒಂದೇ ಒಂದು ಸಣ್ಣ ಸುಳಿವು ಸಹ ಪತ್ತೆಯಾಗಿಲ್ಲ. ಸಂಜಯ್ ದತ್ ಅಭಿನಯದ “ಮುನ್ನಾಭಾಯಿ….” ಮೊದಲ ಭಾಗದಲ್ಲಿ ನಟಿಸಿದ್ದ ವಿಶಾಲ್ ಠಕ್ಕರ್2015ರಿಂದಲೂ ನಾಪತ್ತೆಯಾಗಿದ್ದಾರೆ.

ಡಿಸೆಂಬರ್ 31, 2015 ರಂದು ನಟ ವಿಶಾಲ್ ತಮ್ಮ ತಾಯಿ ದುರ್ಗಾ ಅವರಿಗೆ ಚಿತ್ರಮಂದಿರದಲ್ಲಿ Star Wars: The Force Awakens ಚಿತ್ರ ವೀಕ್ಷಣೆ ಮಾಡಲು ಹೇಳಿದ್ದಾರೆ. ಆಕೆ ಅದಕ್ಕೆ ಒಪ್ಪಿರಲಿಲ್ಲ. ಆತ ತಾಯಿಯಿಂದ 500 ರು. ಪಡೆದು ಮುಂಬೈ ಫ್ಲ್ಯಾಟ್ ನಿಂದ ಹೊರಬಿದ್ದಿದ್ದ. ಅದಾಗಿ ಮದ್ಯರಾತ್ರಿ 1 ಗಂಟೆ ಸುಮಾರಿಗೆ ನಟ ತಮ್ಮ ತಂದೆ, ಉದ್ಯಮಿ ಮಹೇಂದ್ರ ಅವರಿಗೆ ಸಂದೇಶ ಕಳಿಸಿ “ತಾನು ಪಾರ್ಟಿಗೆ ಹೋಗುತ್ತಿದ್ದೇನೆ, ನಾಳೆ ಸಿಗೋಣ” ಎಂದು ಹೇಳಿದ್ದಾನೆ. ಇದು ಆತ ನ ಕಡೆಯ ಸಂದೇಶವಾಗಿದ್ದು ಅಂದಿನಿಂದ ಆ ನಟ ಎಲ್ಲಿದ್ದಾನೆನ್ನುವುದು ತಿಳಿದಿಲ್ಲ.

ವಿಶಾಲ್ ಗೆ 33 ವರ್ಷ ವಯಸ್ಸು, . “ನನ್ನ ಮಗನಿಗೆ ಏನಾಯಿತು ಎಂಬುದಕ್ಕೆ ನನಗೆ ಯಾವುದೇ ಸುಳಿವು ಸಿಕ್ಕಿಲ್ಲ” ದುರ್ಗಾ ಹೇಳಿದ್ದಾರೆ. ನಟ ನಾಪತ್ತೆಯಾಗಿ ಮೂರು ವರ್ಷಗಳೇ ಕಳೆದರೂ ಪ್ರಕರಣ ಒಂದಿಂಚೂ ಮುಂದುವರಿದಿಲ್ಲ.

ಇನ್ನು ಯಾವುದೇ ಆಸ್ಪತ್ರೆಯ ದಾಖಲೆಗಳಲ್ಲಿ ಆತನನ್ನು ಹೋಲುವ ಯಾವ ಮಾಹಿತಿಯೂ ಸಿಕ್ಕಿಲ್ಲ, ಕಳೆದ ಮೂರು ವರ್ಷಗಳಿಂದ ಆತನ ಬ್ಯಾಂಕ್ ಖಾತೆಯಿಂದ ಯಾವ ವಹಿವಾಟು ಸಹ ನಡೆದಿಲ್ಲ.

ಇನ್ನು ವಿಶೇಷವೆಂದರೆ ನಟ ವಿಶಾಲ್ ಮೇಲೆ ರೂಪದರ್ಶಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿದ ಆರೋಪವಿತ್ತು. ಪ್ರಕರಣ ಸಂಬಂಧ ಅಕ್ಟೋಬರ್ 2015ರಲ್ಲಿ ಪೋಲೀಸರು ನಟನನ್ನು ಬಂಧಿಸಿದ್ದರು.ಆದರೆ ಇಬ್ಬರ ನಡುವಿನ ಮನಸ್ತಾಪವನ್ನು ತಾವೇ ಬಗೆಹರಿಸಿಕೊಳ್ಳುತ್ತೇವೆ ಎಂದು ಎರಡೂ ಕಡೆಯವರು ಹೇಳಿದ ಬಳಿಕ ವಿಶಾಲ್ ಬಿಡುಗಡೆಯಾಗಿತ್ತು.

ಆದರೆ ಈ ಘಟನೆ ವಿಶಾಲ್ ಮೇಲೆ ಅತ್ಯಂತ ಹೆಚ್ಚು ಪರಿಣಾಮ ಬೀರಿತ್ತು. ಆತ ತನ್ನಿಂದ ಕುಟುಂಬದ ಗೌರವ ಮಣ್ಣುಗೂಡಿದ್ದಕ್ಕೆ ಬಹಳ ನೊಂದಿದ್ದನೆಂದು ಹೇಳಲಾಗುತ್ತದೆ.

ಪೋಲೀಸರು ಹೇಳುವಂತೆ ಆತ ಜನವರಿ 1ರ ರಾತ್ರಿ ಗೋಧ್ಬುಂದರ್ ರಸ್ತೆಯಲ್ಲಿ ತನ್ನ ಗೆಳತಿಯೊಡನೆ ಕಡೆಯದಾಗಿ ಕಾಣಿಸಿಕೊಂಡಿದ್ದಾನೆ.ಅಂದು ರಾತ್ರಿ 12.10 ಕ್ಕೆ ಆತ ಕಡೆಯ ಫೇಸ್ ಬುಕ್ ಪೋಸ್ಟ್ ಹಾಕಿದ್ದು ‘ಹ್ಯಾಪಿ ನ್ಯೂ ಇಯರ್’ ಎಂದು ಬರೆದುಕೊಂಡಿದ್ದರು. ಆರಂಭದಲ್ಲಿ ಇದು ಆತನ ಗೆಳತಿಯ ಕೃತ್ಯವೆಂದು ಭಾವಿಸಿದ್ದರೂ ಆಕೆಯ ಹೇಳಿಕೆಯ್ಯ ಬಳಿಕ ಈ ಪ್ರಕರಣಕ್ಕೆ , ಆಕೆಗೆ ಸಂಬಂಧವಿಲ್ಲ ಎಂದು ಸ್ಪಷ್ಟವಾಗಿದೆ. ಅವರು ಕೊಲೆಯಾಗಿದ್ದಾರೆಯೆ? ಅಪಹರಿಸಲಾಗಿದೆಯೆ? ಅಥವಾ ಅವರಾಗಿಯೇ ಮನೆ ಬಿಟ್ಟು ತೆರಳಿದ್ದಾರೆಯೆ ಎಂದು ಇದುವರೆಗೆ ಪತ್ತೆಯಾಗಿಲ್ಲ ಎಂದು ಪೋಲೀಸರು ವಿವರಿಸಿದ್ದಾರೆ.

Comments are closed.