ಕ್ರೀಡೆ

ಮಹಿಳೆಯರ ಬಗ್ಗೆ ಅಸಭ್ಯ ಹೇಳಿಕೆ; ಜಾಹಿರಾತು ಒಪ್ಪಂದದಿಂದ ಪಾಂಡ್ಯ ಔಟ್

Pinterest LinkedIn Tumblr

ಬಾಲಿವುಡ್ ನಿರ್ದೇಶಕ ಕರಣ್ ಜೋಹರ್ ಜೊತೆಗಿನ ಟಿವಿ ಷೋನಲ್ಲಿ ಮಹಿಳೆಯರ ಬಗ್ಗೆ ಅಸಭ್ಯ ನೀಡಿ ಆಸ್ಟ್ರೇಲಿಯಾ ಏಕದಿನ ಪಂದ್ಯದಿಂದ ಅಮಾನತುಗೊಂಡಿರುವ ಟೀಂ ಇಂಡಿಯಾ ಆಟಗಾರರಾದ ಹಾರ್ದಿಕ್ ಪಾಂಡ್ಯ ಹಾಗೂ ಕೆಎಲ್ ರಾಹುಲ್ ಅವರ ತಾರಾ ಮೌಲ್ಯಕ್ಕೂ ಹೊಡೆತ ಬಿದಿದ್ದೆ.

ವಿವಾದದ ಕೇಂದ್ರ ಬಿಂದುವಾಗಿದ್ದ ಹಾರ್ದಿಕ್ ಪಾಂಡ್ಯ ಅವರನ್ನು ಗಿಲೆಟ್ ಮ್ಯಾಕ್ 3 ಪುರುಷರ ಶೇವಿಂಗ್ ರೆಜರ್ ಜಾಹಿರಾತು ಒಪ್ಪಂದದಿಂದ ಕೈ ಬಿಡಲಾಗಿದೆ.

ಹಾರ್ದಿಕ್ ಪಾಂಡ್ಯ ಅವರು ಇತ್ತೀಚಿಗೆ ನೀಡಿದ ಹೇಳಿಕೆ ಗಿಲೆಟ್ ಮೌಲ್ಯದ ಮೇಲೆ ಯಾವುದೇ ಪರಿಣಾಮ ಬೀರಲ್ಲ. ಆದರೂ, ಹಾರ್ದಿಕ್ ಜೊತೆಗಿನ ಸಹಭಾಗಿತ್ವವನ್ನು ಅಮಾನತುಪಡಿಸಿದ್ದೇವೆ. ಮುಂದಿನ ಕ್ರಮ ಕುರಿತು ಚರ್ಚಿಸಲಾಗುವುದು ಎಂದು ಕಂಪನಿಯ ವಕ್ತಾರರರು ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.

ಕಳೆದ ಭಾನುವಾರ ಬಾಲಿವುಡ್ ನಿರ್ದೇಶಕ ಕರಣ್ ಜೋಹರ್ ನಡೆಸಿಕೊಡುವ ಕಾಫಿ ವಿತ್ ಜೋಹರ್ ಕಾರ್ಯಕ್ರಮದಲ್ಲಿ ಹಾರ್ದಿಕ್ ಪಾಂಡ್ಯ ಹಾಗೂ ಕೆಎಲ್ ರಾಹುಲ್ ಮಹಿಳೆಯರ ಬಗ್ಗೆ ಅಸಭ್ಯ ಹೇಳಿಕೆ ನೀಡಿದ್ದರು. ಹಲವು ಹೆಂಗಸರೊಂದಿಗೆ ಸಂಬಂಧ ಹೊಂದಿರುವುದಾಗಿ ಪಾಂಡ್ಯ ಮುಕ್ತವಾಗಿ ಹೇಳಿಕೆ ನೀಡಿದ್ದರು. ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ,ವ್ಯಾಪಕ ಟೀಕೆಗೆ ಗುರಿಯಾಗಿತ್ತು.

ಹಾರ್ದಿಕ್ ಪಾಂಡ್ಯ ಟಿವಿ ಜಾಹಿರಾತು ಮಾತ್ರವಲ್ಲದೆ, ಓಪೊ, ಗಲ್ಫ್ ಆಯಿಲ್, ಸಿನ್ ಡೆನಿಮ್, ಡಿಎಫ್ ವೈ ಸ್ಪೋರ್ಟ್, ಮತ್ತು ಇಯುಎಂಇ ಕಂಪನಿಗಳ ಬ್ರಾಂಡ್ ರಾಯಬಾರಿಯಾಗಿದ್ದಾರೆ. ಕರ್ನಾಟಕದ ಕೆಎಲ್ ರಾಹುಲ್ , ರಾಯಲ್ ಸ್ಟಾಗ್, ಪುಮಾ ಮತ್ತಿತರ ಕಂಪನಿಗಳ ಪ್ರಚಾರಕರಾಗಿದ್ದಾರೆ.

Comments are closed.