ಮನೋರಂಜನೆ

ಹನಿಮೂನ್‍ಗೆ ಹೊರಟ ಬಾಲಿವುಡ್ ಹಾಟ್ ಕಪಲ್ ದೀಪಿಕಾ ಪಡುಕೋಣೆ ಹಾಗೂ ರಣ್‍ವೀರ್ ಸಿಂಗ್

Pinterest LinkedIn Tumblr


ಮುಂಬೈ: ಬಾಲಿವುಡ್ ಹಾಟ್ ಕಪಲ್ ದೀಪಿಕಾ ಪಡುಕೋಣೆ ಹಾಗೂ ರಣ್‍ವೀರ್ ಸಿಂಗ್ ನವೆಂಬರ್ ತಿಂಗಳಿನಲ್ಲಿ ಇಟಲಿಯಲ್ಲಿ ಅದ್ಧೂರಿಯಾಗಿ ಮದುವೆ ಮಾಡಿಕೊಂಡಿದ್ದರು. ಈಗ ಈ ಜೋಡಿ ಹನಿಮೂನ್‍ಗೆ ಹೊರಟ್ಟಿದ್ದಾರೆ.

ರಣ್‍ವೀರ್ ಹಾಗೂ ದೀಪಿಕಾ ಇಟಲಿಯ ಲೇಕ್ ಕೋಮೋದಲ್ಲಿ ನವೆಂಬರ್ 14 ಕೊಂಕಣಿ ಸಂಪ್ರದಾಯ ಹಾಗೂ ಹಾಗೂ ನವೆಂಬರ್ 15ರಂದು ಸಿಖ್ ಸಂಪ್ರದಾಯದಂತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಬಳಿಕ ಬೆಂಗಳೂರಿನಲ್ಲಿ ಒಂದು ಬಾರಿ ಹಾಗೂ ಮುಂಬೈನಲ್ಲಿ ಎರಡೂ ಬಾರಿ ಈ ಜೋಡಿ ಅದ್ಧೂರಿಯಾಗಿ ಆರತಕ್ಷತೆಯನ್ನು ಮಾಡಿಕೊಂಡಿತ್ತು.

ಮದುವೆ ನಂತರ ದೀಪಿಕಾ ಹಾಗೂ ರಣ್‍ವೀರ್ ತಮ್ಮ ಕೆಲಸಗಳಲ್ಲಿ ಬ್ಯುಸಿಯಾಗಿದ್ದರು. ಅವರು ತಮ್ಮ ಹನಿಮೂನ್‍ಗೂ ಕೂಡ ಪ್ಲಾನ್ ಮಾಡಿರಲಿಲ್ಲ. ಈಗ ದೀಪ್‍ವೀರ್ ತಮ್ಮ ಹನಿಮೂನ್‍ಗೆ ಹೋಗುತ್ತಿದ್ದು, ಯಾವ ದೇಶಕ್ಕೆ ಹೋಗುತ್ತಿದ್ದಾರೆ ಎಂಬ ಮಾಹಿತಿ ದೊರೆತಿಲ್ಲ.

ದೀಪಿಕಾ ಹಾಗೂ ರಣ್‍ವೀರ್ ಇಬ್ಬರು ಕಪ್ಪು ಬಣ್ಣದ ಉಡುಪಿನಲ್ಲಿ ಒಟ್ಟಿಗೆ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಕ್ಯಾಮೆರಕ್ಕೆ ಸೆರೆಸಿಕ್ಕಿದ್ದಾರೆ. ದೀಪಿಕಾ ಹಾಗೂ ರಣ್‍ವೀರ್ ಒಬ್ಬರನೊಬ್ಬರ ಕೈ ಹಿಡಿದುಕೊಂಡು ಹೋಗುತ್ತಿದ್ದರು.

ಮದುವೆಯಾದ ನಂತರ ದೀಪಿಕಾ ಅವರಿಗೆ ತಮ್ಮ ಹನಿಮೂನ್ ಬಗ್ಗೆ ಪ್ರಶ್ನೆ ಕೇಳಲಾಗಿತ್ತು. ಈ ಬಗ್ಗೆ ದೀಪಿಕಾ ಅವರನ್ನು ಕೇಳಿದ್ದಾಗ ಈ ಬಗ್ಗೆ ನನಗೆ ಏನೂ ಗೊತ್ತಿಲ್ಲ. ನಾವು ಇದುವರೆಗೂ ಯಾವುದೇ ಹನಿಮೂನ್ ಪ್ಲಾನ್ ಮಾಡಿಲ್ಲ ಎಂದು ಪ್ರತಿಕ್ರಿಯಿಸಿದ್ದರು.

Comments are closed.