ಮನೋರಂಜನೆ

ಮದುವೆ ಸಂಭ್ರಮದಲ್ಲಿ ಬಾಹುಬಲಿ ಪ್ರಭಾಸ್ – ಅನುಷ್ಕಾ ಶೆಟ್ಟಿ

Pinterest LinkedIn Tumblr


ಜೈಪುರ: ಬಾಹುಬಲಿ ಪ್ರಭಾಸ್ ಹಾಗೂ ಅನುಷ್ಕಾ ಶೆಟ್ಟಿ ಅವರು ಟಾಲಿವುಡ್ ಸ್ಟಾರ್ ನಿರ್ದೇಶಕ ಎಸ್.ಎಸ್ ರಾಜಮೌಳಿ ಅವರ ಮಗ ಕಾರ್ತಿಕೇಯಾ ಅವರ ಮದುವೆಯ ಸಂಭ್ರಮದಲ್ಲಿದ್ದಾರೆ.

ರಾಜಮೌಳಿ ಅವರ ಮಗ ಕಾರ್ತಿಕೇಯಾ ಇಂದು ಗಾಯಕಿ ಪೂಜಾ ಪ್ರಸಾದ್ ಅವರ ಜೊತೆ ರಾಜಸ್ಥಾನದ ಜೈಪುರ್ ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕಾರ್ತಿಕೇಯಾ ಹಾಗೂ ಪೂಜಾ ನವೆಂಬರ್ ತಿಂಗಳಿನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಪೂಜಾ ಗಾಯಕಿ ಆಗಿದ್ದು, ನಟ ಜಗಪತಿ ಬಾಬು ಅವರ ಸೋದರ ಸೊಸೆ ಆಗಿದ್ದಾರೆ.

ಅನುಷ್ಕಾ, ಪ್ರಭಾಸ್ ಸೇರಿದಂತೆ ಸಿನಿ ರಂಗದ ಹಲವು ಗಣ್ಯರು ಮದುವೆಯ ಸಂಭ್ರಮದಲ್ಲಿ ಭಾಗಿಯಾದರು. ಅಲ್ಲದೇ ತೆಲುಗು ಕಲಾವಿದರಾದ ಜೂ. ಎನ್‍ಟಿಆರ್, ಜಗಪತಿ ಬಾಬು, ರಾಮ್‍ಚರಣ್, ನಾನಿ ಹಾಗೂ ಬಾಲಿವುಡ್ ನಟಿ ಸುಶ್ಮಿತಾ ಸೇನ್ ಈ ಮದುವೆಯ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.

ಕಾರ್ತಿಕೇಯಾ ಅವರ ಸಂಗೀತ್ ಕಾರ್ಯಕ್ರಮದಲ್ಲಿ ರಾಜಮೌಳಿ ಜೊತೆ ಬಾಹುಬಲಿ ಚಿತ್ರತಂಡದ ಕಲಾವಿದರು ಡ್ಯಾನ್ಸ್ ಮಾಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಕಲಾವಿದರೆಲ್ಲರೂ ಡ್ಯಾನ್ಸ್ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

Comments are closed.