ಕರ್ನಾಟಕ

ವಾಲ್ಮೀಕಿ ರಾಮಾಯಣದ ಕುರಿತು ನನಗೆ ಗೊತ್ತಿಲ್ಲ, ನಾನು ಓದಿಲ್ಲ: ಸಾಹಿತಿ ಚಂದ್ರಶೇಖರ್ ಪಾಟೀಲ್

Pinterest LinkedIn Tumblr


ಬೆಳಗಾವಿ(ಚಿಕ್ಕೋಡಿ): ವಾಲ್ಮೀಕಿ ರಾಮಾಯಣದ ಬಗ್ಗೆ ನನಗೆ ಗೊತ್ತಿಲ್ಲ. ನಾನು ಅದನ್ನು ಓದಿಲ್ಲ ಎಂದು ಸಾಹಿತಿ ಚಂದ್ರಶೇಖರ್ ಪಾಟೀಲ್ ಹೇಳಿದ್ದಾರೆ.

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕಾರದಗಾ ಗ್ರಾಮದಲ್ಲಿ ನಡೆದ ಕನ್ನಡ ಸಮಾವೇಶದಲ್ಲಿ ಭಾಗವಹಿಸಿ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಸಾಹಿತಿ ಚಂಪಾ, ನಾನು ನಾಸ್ತಿಕ, ದೇವರ ಬಗ್ಗೆ ನನಗೆ ನಂಬಿಕೆಯಿಲ್ಲ. ಜಗತ್ತಿನಲ್ಲಿ 300 ರಾಮಾಯಣಗಳಿವೆ. ಯಾವುದನ್ನೂ ನಾನು ಓದಿಲ್ಲ ಎಂದ ಅವರು, ನಾನು ಆಂಗ್ಲ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದವನು, ಕನ್ನಡ ಭಾಷೆ ಬಗ್ಗೆ ಗೊತ್ತು. ಸಂಸ್ಕೃತದ ಕುರಿತು ನನಗೆ ಗೊತ್ತಿಲ್ಲ ಎಂದರು. ಇದನ್ನೂ ಓದಿ: ಭಗವಾನ್ ಭದ್ರತೆಗೆ ಅರ್ಧ ಕೋಟಿಗೂ ಹೆಚ್ಚು ಖರ್ಚು ಮಾಡ್ತಿದೆ ಸರ್ಕಾರ..!

ಸಾಹಿತಿ ಎಂ.ಎಂ.ಕಲಬುರ್ಗಿ ಅವರ ಹತ್ಯೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಚಂಪಾ, ಎಂ.ಎಂ.ಕಲಬುರ್ಗಿ ನನ್ನ ಸ್ನೇಹಿತರು. ಅವರ ಕೊಲೆಯಾಗಿ ಮೂರು ವರ್ಷ ಕಳೆಯುತ್ತ ಬಂದರೂ ಎಸ್‍ಐಟಿ ಅವರು ತನಿಖೆ ಪೂರ್ಣಗೊಳಿಸಿಲ್ಲ ಎಂದ ಅವರು, ಸಾಹಿತಿಗಳಿಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಇಲ್ಲವೇ? ನಮಗ್ಯಾಕೆ ಕೆಲ ಶಕ್ತಿಗಳು ಕೊಲೆ ಬೆದರಿಕೆ ಹಾಕುತ್ತಿವೆ? ಕೊಲೆ ಬೆದರಿಕೆ ನಾವು ಹೆದರಿಲ್ಲ. ನಮಗಿಂತ ಹೆಚ್ಚು ಆತಂಕ ಸರ್ಕಾರಕ್ಕಿದೆ. ಹೀಗಾಗಿಯೇ ನಮಗೆ ಸೆಕ್ಯುರಿಟಿ ನೀಡುತ್ತಿದ್ದಾರೆ.

Comments are closed.