ಮನೋರಂಜನೆ

ಕೆಜಿಎಫ್​’ ನೋಡಿ ಮನಸೋತ ಬಾಲಿವುಡ್​ ಮಂದಿ

Pinterest LinkedIn Tumblr


‘ಕೆಜಿಎಫ್​’ ಇಂದು ಕೇವಲ ಕನ್ನಡ ಸಿನಿಮಾವಾಗಿ ಮಾತ್ರ ಉಳಿದಿಲ್ಲ. ಈ ಚಿತ್ರ ಪ್ಯಾನ್​ ಇಂಡಿಯಾ ಚಿತ್ರ ಆಗಿ ಬದಲಾಗಿದೆ. ಟಾಲಿವುಡ್​, ಕಾಲಿವುಡ್​ ಮಾತ್ರವಲ್ಲದೇ ಬಾಲಿವುಡ್​ನಿಂದಲೂ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಕೇಳಿ ಬರುತ್ತಿದೆ. ಹಿಂದಿಯಲ್ಲಿ ಕಲೆಕ್ಷನ್​ ದಿನೇ ದಿನೇ ಏರಿಕೆ ಆಗುತ್ತಿದೆ. ಹಿಂದಿ ಚಿತ್ರರಂಗದವರು ‘ಕೆಜಿಎಫ್​’ಗೆ ಮನ ಸೋತಿದ್ದಾರೆ.

ಕೆಜಿಎಫ್​ ಚಿತ್ರ ನೋಡಿದ ಪ್ರೇಕ್ಷಕರ ಪ್ರತಿಕ್ರಿಯೆಯ ವಿಡಿಯೋವನ್ನು‘ರಾಕಿಂಗ್​ ಸ್ಟಾರ್​’ ಯಶ್​ ತಮ್ಮ ಫೇಸ್​ಬುಕ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಕೆಜಿಎಫ್​ ವೀಕ್ಷಿಸಿದ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೆಲವರು ‘ನಾನು ಈ ರೀತಿ ಆ್ಯಕ್ಷನ್​ ಚಿತ್ರವನ್ನು ಬಾಲಿವುಡ್​ನಲ್ಲಿ ನೋಡೇ ಇಲ್ಲ’ ಎಂದರೆ, ಇನ್ನೂ ಕೆಲವರು ‘ಐದು ಅಂಕಕ್ಕೆ ಏಳು ಅಂಕ ಕೊಡುವುದಾಗಿ’ ಹೇಳಿದ್ದಾರೆ. ಈ ಮೂಲಕ ಕನ್ನಡ ಚಿತ್ರವನ್ನು ಮೆಚ್ಚಿಕೊಂಡಿರುವುದಾಗಿ ಹೇಳಿದ್ದಾರೆ. ವಿಶೇಷ ಎಂದರೆ ಕೆಲ ಯುವತಿಯರು ಚಿತ್ರಮಂದಿರದಲ್ಲೇ ಹೆಜ್ಜೆ ಹಾಕಿದ್ದಾರೆ.

‘ಕೆಜಿಎಫ್​’ ಎರಡೇ ದಿನಕ್ಕೆ 50 ಕೋಟಿ ರೂ. ಗಳಿಸಿದೆ. ಇನ್ನು ಹಿಂದಿಯಲ್ಲಿ ‘ಕೆಜಿಎಫ್​’ ಕಲೆಕ್ಷನ್​ ದಿನೇ ದಿನೇ ಏರಿಕೆ ಆಗತ್ತಿದೆ. ಮೊದಲ ದಿನ 2 ಕೋಟಿ ರೂ. ಕಮಾಯಿ ಮಾಡಿದ್ದ ಈ ಸಿನಿಮಾ ಎರಡನೇ ದಿನಕ್ಕೆ 3 ಕೋಟಿ ರೂ. ಬಾಚಿಕೊಂಡಿತ್ತು. ಭಾನುವಾರದ ಗಳಿಕೆ 4 ಕೋಟಿ ರೂ. ತಲುಪುವ ಮೂಲಕ ಅಚ್ಚರಿ ಮೂಡಿಸಿದೆ. ಮೂರು ದಿನಗಳಲ್ಲಿ ‘ಕೆಜಿಎಫ್​’ ಚಿತ್ರ ಹಿಂದಿಯಲ್ಲಿ 9.20 ಕೋಟಿ ರೂ. ತೆಕ್ಕೆಗೆ ಹಾಕಿಕೊಂಡಿದೆ.

ಪ್ರಶಾಂತ್​ ನೀಲ್​ ನಿರ್ದೇಶನದ’ಕೆಜಿಎಫ್​’ ಚಿತ್ರ ಶುಕ್ರವಾರ ಐದು ಭಾಷೆಗಳಲ್ಲಿ ಬಿಡುಗಡೆ ಆಗಿದೆ. ಎಲ್ಲ ಕಡೆಗಳಿಂದ ಸಿನಿಮಾಗೆ ಮೆಚ್ಚುಗೆ ಕೇಳಿ ಬಂದಿದೆ. ಚಿತ್ರದಲ್ಲಿ ಛಾಯಾಗ್ರಹಣ, ಸಂಭಾಷಣೆ ಚಿತ್ರಕ್ಕೆ ಪ್ಲಸ್​ ಪಾಯಿಂಟ್​ ಆಗಿತ್ತು.

Comments are closed.