ಮನೋರಂಜನೆ

ಲೋಕಸಭೆ ಚುನಾವಣೆ: ಸಮಾನ ಮನಸ್ಕರ ಜತೆ ಹೊಂದಾಣಿಕೆ-ಕಮಲ್‌ ಹಾಸನ್‌

Pinterest LinkedIn Tumblr


ಚೆನ್ನೈ: ಬಹುಭಾಷಾ ಚಿತ್ರ ನಟ ಕಮಲ್‌ ಹಾಸನ್‌ ಅವರ ರಾಜಕೀಯ ಪಕ್ಷ ಮಕ್ಕಲ್‌ ನೀಧಿ ಮೈಯಾಮ್‌(ಎಂಎನ್‌ಎಂ) ಲೋಕಸಭೆಯಲ್ಲಿ ಸಮಾನ ಮನಸ್ಥಿತಿಯ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ಸಿದ್ಧವಾಗಿರುವುದಾಗಿ ಘೋಷಿಸಿದೆ.

ಈ ಬಗ್ಗೆ ಸ್ವತಃ ಕಮಲ್‌ ಹಾಸನ್‌ ಅವರೇ ಮಾಹಿತಿ ನೀಡಿದ್ದು, ಚುನಾವಣೆಯಲ್ಲಿ ತಮ್ಮ ಪಕ್ಷದ ಸಿದ್ಧಾಂತ ಹಾಗೂ ಮನಸ್ಥಿತಿ ಹೊಂದಾಣಿಕೆ ಆಗುವ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುತ್ತೇವೆ ಎಂದು ಶನಿವಾರ ಮಾಹಿತಿ ನೀಡಿದ್ದಾರೆ.

ಎಲ್ಲ 40 ಲೋಕಸಭಾ ಕ್ಷೇತ್ರಗಳಲ್ಲಿ ನಮ್ಮ ಪಕ್ಷ ಅಭ್ಯರ್ಥಿಗಳನ್ನು ನಿಲ್ಲಿಸಲಿದೆ ಎಂದು ಅವರು ಸುದ್ದಿಗಾರರಿಗೆ ಹೇಳಿಕೆ ನೀಡಿದರು. ಎಂಎನ್‌ಎಂ ಪಕ್ಷವೇ ಮುಂದಾಳತ್ವ ವಹಿಸಲಿದೆಯೇ ಅಥವಾ ಇತರೆ ಪಕ್ಷದೊಂದಿಗೆ ಸೇರಿಕೊಳ್ಳುವುದೇ ಎಂಬ ಪ್ರಶ್ನೆಗೆ ಅವರು ಪ್ರತಿಕ್ರಿಯೆ ನೀಡಿಲ್ಲ. ಆದರೆ, ಈ ಬಗ್ಗೆ ಯಾವುದೇ ಪಕ್ಷದೊಂದಿಗೆ ಮಾತುಕತೆ ಆರಂಭವಾಗಿಲ್ಲ. ಹೊಂದಾಣಿಕೆ ಆಧಾರದಲ್ಲಿ ಮುಂದಾಳತ್ವ ನಿರ್ಧಾರ ಮಾಡಲಾಗುವುದು ಎಂದಷ್ಟೇ ಮಾಹಿತ ನೀಡಿದ್ದಾರೆ.

ಅಗತ್ಯ ಬಿದ್ದರೆ, ಲೋಕಸಭೆಗೆ ನಾನೂ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತೇನೆ. 2019 ಜ.30ರಂದು ಪಕ್ಷದ ಸದಸ್ಯತ್ವ ಬಗ್ಗೆ ಮಾಹಿತಿ ನೀಡಲಾಗುವುದು. ಪಕ್ಷ ಚುನಾವಣೆ ವಿಚಾರದಲ್ಲಿ ಸಾಕಷ್ಟು ಎಚ್ಚರಿಕೆ ವಹಿಸಿದ್ದು, ಮುಂದಿರುವ ವಿಧಾನಸಭಾ ಉಪಚುನಾವಣೆ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಫಲಿತಾಂಶಗಳನ್ನೂ ಗಮನಿಸಿ ಮುಂದಿನ ಹೆಜ್ಜೆ ಇಡಲಾಗುವುದು ಎಂದು ಕಮಲ್‌ಹಾಸನ್‌ ಹೇಳಿದ್ದಾರೆ.

Comments are closed.