ರಾಷ್ಟ್ರೀಯ

71 ರೂ.ಗೆ 34 ರೂ. ಪೆಟ್ರೋಲ್ ಹೇಗೆ ಮಾರಾಟ ಆಗುತ್ತೆ ಗೊತ್ತಾ?

Pinterest LinkedIn Tumblr


ನವದೆಹಲಿ: ಯಾವುದೇ ತೆರಿಗೆ ಮತ್ತು ವಿತರಕರ ಕಮಿಷನ್ ಇಲ್ಲದೆ ಲೀಟರ್ ಪೆಟ್ರೋಲ್ ಕೇವಲ 34.04 ರೂ. ನೀಡಲಾಗುತ್ತದೆ ಎಂಬ ಮಾಹಿತಿಯನ್ನು ಸಂಸತ್ತಿನಲ್ಲಿ ಸರ್ಕಾರ ಬಹಿರಂಗ ಪಡಿಸಿದೆ. ಈ ಬಗ್ಗೆ ಲಿಖಿತವಾಗಿ ಉತ್ತರ ನೀಡಿರುವ ರಾಜ್ಯ ಹಣಕಾಸು ಸಚಿವ ಶಿವ ಪ್ರತಾಪ್‌ ಶುಕ್ಲಾ ವಿವರಗಳನ್ನು ವಿವರಿಸಿದೆ.

ಪೆಟ್ರೋಲ್ ಅನ್ನು 34.04 ರೂ. ಮತ್ತು ಡಿಸೇಲ್ 38.67 ರೂ.ಗೆ ಮಾರಾಟ ಮಾಡಲಾಗುತ್ತದೆ. ಇಷ್ಟೊಂದು ಅಗ್ಗದ ಪೆಟ್ರೋಲ್‌ ಮತ್ತು ಡೀಸೆಲ್‌ ದರಗಳಿಗೆ ಸೇರುವ ತೆರಿಗೆ ಮತ್ತು ಡೀಲರ್‌ ಕಮಿಷನ್‌ ಪ್ರಮಾಣ ಅನುಕ್ರಮವಾಗಿ ಶೇ.96.9 ಮತ್ತು ಶೇ.60.3 ಆಗಿರುತ್ತದೆ ಎಂಬ ವಿಷಯವನ್ನು ಲೋಕಸಭೆಯಲ್ಲಿ ಸರ್ಕಾರ ತಿಳಿಸಿದೆ.

ಪೆಟ್ರೋಲ್-ಡೀಸೆಲ್ ತೆರಿಗೆ:
ರಾಜ್ಯ ಹಣಕಾಸು ಸಚಿವ ಶಿವ ಪ್ರತಾಪ್‌ ಶುಕ್ಲಾ ಡಿಸೆಂಬರ್ 19 ರಂದು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಇದಕ್ಕೆ ಉದಾಹರಣೆಯಾಗಿ ನೀಡಿದ್ದಾರೆ. ಡಿ.19ರಂದು ದೆಹಲಿಯಲ್ಲಿ ಪೆಟ್ರೋಲ್‌ ದರ ಲೀಟರಿಗೆ 70.63 ರೂ. ಇತ್ತು. ಇದರಲ್ಲಿ 17.98 ರೂ. ಕೇಂದ್ರ ಅಬಕಾರಿ ಸುಂಕ, 15.02 ರೂ. ರಾಜ್ಯ ವ್ಯಾಟ್‌ ಮತ್ತು 3.59 ರೂ. ಡೀಲರ್‌ ಕಮಿಷನ್‌ ಸೇರಿಕೊಂಡಿದೆ. ಈ ರೀತಿಯಾಗಿ, ಎಕ್ಸೈಸ್ ಸುಂಕ, ವ್ಯಾಟ್ ಮತ್ತು ಡೀಲರ್ ಕಮಿಷನ್ ಸೇರಿ 34 ರೂ. ಪೆಟ್ರೋಲ್ 71 ರೂ.ಗೆ ಮಾರಾಟವಾಗುತ್ತದೆ. ಸ್ಪಷ್ಟವಾಗಿ ಗ್ರಾಹಕರು ಪೆಟ್ರೋಲ್ ಗಿಂತ ಹೆಚ್ಚು ತೆರಿಗೆಯನ್ನು ಪಾವತಿಸುತ್ತಿದ್ದಾರೆ ಎಂದು ಶುಕ್ಲಾ ಹೇಳಿದ್ದಾರೆ.

ಅದೇ ರೀತಿ, ಡಿಸೆಂಬರ್ 19 ರಂದು ಡೀಸೆಲ್ನ ರಿಟೇಲ್ ಬೆಲೆ 64.54 ಲೀಟರ್ಗಳಾಗಿದ್ದು, 13.83 ರೂ. ಕೇಂದ್ರ ಅಬಕಾರಿ ಸುಂಕ, 9.51 ರೂ. ರಾಜ್ಯ ವ್ಯಾಟ್‌ ಮತ್ತು 2.53 ರೂ. ಡೀಲರ್‌ ಕಮಿಷನ್‌ ಸೇರಿಕೊಂಡಿದೆ ಬೆಲೆ 65.54 ಕ್ಕೆ ಏರಿದೆ ಎಂದು ಶುಕ್ಲಾ ವಿವರಿಸಿದರು.

Comments are closed.