ಮನೋರಂಜನೆ

ಉತ್ತಮ ಸಮಾಜಕ್ಕಾಗಿ ನಟ “ಉಪ್ಪಿ’ ಪ್ರಣಾಳಿಕೆ

Pinterest LinkedIn Tumblr


ಸ್ಯಾಂಡಲ್‍ವುಡ್‍ನ ರಿಯಲ್ ಸ್ಟಾರ್, ನಟ, ನಿರ್ದೇಶಕ, ಹಾಗೂ ಪ್ರಜಾಕೀಯ ಪಕ್ಷದ ಸಂಸ್ಥಾಪಕ ಉಪೇಂದ್ರ ಇದೀಗ ತಮ್ಮ ಪಕ್ಷದ ಸಂಘಟನೆಯಲ್ಲಿ ತೊಡಗಿದ್ದು, ಶುಕ್ರವಾರ ತಮ್ಮ ಟ್ವೀಟರ್ ಖಾತೆಯಲ್ಲಿ ಸಂಭಾವ್ಯ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. ಅಲ್ಲದೇ ಈ ಪ್ರಣಾಳಿಕೆಯ ಬಗ್ಗೆ ಅನಿಸಿಕೆ ತಿಳಿಸುವಂತೆ ಹಾಗೂ ಅದನ್ನು ಶೇರ್ ಮಾಡುವಂತೆ ಮನವಿ ಕೂಡಾ ಮಾಡಿದ್ದಾರೆ.

ಹೌದು, ಉಪೇಂದ್ರ ಇದೀಗ ನಟನೆಯಿಂದ ಕೊಂಚ ಬ್ರೇಕ್ ಪಡೆದಿದ್ದು, ಪಕ್ಷದ ಸಂಘಟನೆಯಲ್ಲಿ ಸಕ್ರಿಯರಾಗಿದ್ದಾರೆ. ಈ ಹಿಂದೆ ಉಪೇಂದ್ರ “ಕೆಪಿಜೆಪಿ’ ಪಕ್ಷದ ಮೂಲಕ ರಾಜ್ಯದಲ್ಲಿ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದ್ದರು. ಬಳಿಕ ಭಿನ್ನಾಭಿಪ್ರಾಯದಿಂದ ಪಕ್ಷ ತೊರೆದು “ಯುಪಿಪಿ’ (ಉತ್ತಮ ಪ್ರಜಾಕೀಯ ಪಾರ್ಟಿ) ಪಕ್ಷ ಸ್ಥಾಪಿಸಿದ್ದು, ಈಗ ಪಕ್ಷ ಸಂಘಟನೆಗಾಗಿ ಪ್ರಣಾಳಿಕೆಯನ್ನು ಟ್ವೀಟರ್ ನಲ್ಲಿ ಬಿಡುಗಡೆ ಮಾಡಿದ್ದಾರೆ.

* ನಮ್ಮದು ಪಾರದರ್ಶಕ, ಸರಳ, ಪ್ರಜೆಗಳನ್ನೊಳಗೊಂಡ ಆಡಳಿತ.
* ದೂರುಗಳನ್ನ ಸಲ್ಲಿಸಿಲು ಪ್ರಜೆಗಳಿಗಾಗಿ ಮೊಬೈಲ್​ ಅಪ್ಲಿಕೇಶನ್.​
* ಪ್ರಜೆಗಳ ನೇರ ಸಂಪರ್ಕಕ್ಕಾಗಿ, ಸರ್ಕಾರದಿಂದ ಸರ್ಕಾರದ್ದೇ ಆದ ಟೆಲಿವಿಷನ್​ ಚಾನಲ್​ ಆರಂಭ.
* ಸರ್ಕಾರಿ ಕಚೇರಿಗಳಲ್ಲಿ ಬಯೋಮೆಟ್ರಿಕ್​ ಕಡ್ಡಾಯ.
* ಕಡ್ಡಾಯವಾಗಿ ಸರ್ಕಾರಿ ನೌಕರರರು ಏಕರೂಪದ ಸಮವಸ್ತ್ರ ಧರಿಸುತ್ತಾರೆ.
* ಪ್ರತಿಯೊಂದು ಸರ್ಕಾರಿ ಯೋಜನೆಗಳು ಮತ್ತು ಟೆಂಡರ್​ಗಳ ಪ್ರಕಿಯೆ ಸಂಪೂರ್ಣ ಆನ್​ಲೈನ್​ನಲ್ಲೇ ಚರ್ಚೆ ಮತ್ತು ನಿರ್ಧಾರಗಳನ್ನು ಕೈಗೊಳ್ಳಲಾಗುತ್ತದೆ.
* ವಿಧಾನಸೌಧದಲ್ಲಿ ನಡೆಯುವಂತಹ ಪ್ರತಿಯೊಂದು ಚಟುವಟಿಕೆಗಳಿಗೆ ದಾಖಲೆ, ಪುರಾವೆ ಮತ್ತು ದೃಶ್ಯ ಮಾಧ್ಯಮಗಳು ಸಾಕ್ಷಿ.
* ಸಚಿವರು, ಶಾಸಕರು, ಕಾರ್ಪೊರೇಟರ್​ಗಳು, ಹಾಗೂ ಎಲ್ಲಾ ಸರ್ಕಾರಿ ಅಧಿಕಾರಿಗಳು ಯೋಜನೆಗಳ ಅಧಿಕೃತ ದಾಖಲೆ ಪುರಾವೆಗಳೊಂದಿಗೆ ಅಧಿವೇಶನದಲ್ಲಿ ಭಾಗವಹಿಸಬೇಕು. ಎಲ್ಲಾ ಪ್ರಕಿಯೆಗಳನ್ನು ಕಡ್ಡಾಯವಾಗಿ ನೇರ ಪ್ರಸಾರದಲ್ಲಿ ಟಿ.ವಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಬಿತ್ತರಿಸಬೇಕು.

Comments are closed.