ರಾಷ್ಟ್ರೀಯ

ಜನಿಸಿದ 2 ಗಂಟೆಯಲ್ಲೇ ಈ ಹೆಣ್ಣು ಮಗುವಿನ ಎಲ್ಲಾ ದಾಖಲೆ ರೆಡಿ!

Pinterest LinkedIn Tumblr


ಸೂರತ್: ಮಗು ಜನಿಸಿದ 2ಗಂಟೆ ಅವಧಿಯಲ್ಲಿಯೇ ಗುಜರಾತ್ ದಂಪತಿ ತಮ್ಮ ಹೆಣ್ಣುಮಗುವಿನ ಹೆಸರನ್ನು ಎಲ್ಲಾ ಅಧಿಕೃತ ದಾಖಲೆಗಳಿಗೆ ನೋಂದಣಿ ಮಾಡಿಸುವ ಮೂಲಕ ದಾಖಲೆಗಳನ್ನು ಪಡೆದ ಅತ್ಯಂತ ಕಿರಿಯ ಭಾರತೀಯಳು ಎಂಬ ಖ್ಯಾತಿ ಪಾತ್ರವಾದಂತಾಗಿದೆ.

ಗುಜರಾತ್ ನ ಸೂರತ್ ನಲ್ಲಿ ರಮಯ್ಯಾ ಎಂಬ ಹೆಣ್ಣು ಮಗು ಹುಟ್ಟಿದ ತಕ್ಷಣವೇ ಪೋಷಕರು ತಮ್ಮ ಮಗುವಿಗೆ ಮೊದಲ ಉಡುಗೊರೆ ಎಂಬಂತೆ ಆಧಾರ್, ಪಡಿತರ ಹಾಗೂ ಪಾಸ್ ಪೋರ್ಟ್ ಗೆ ಹೆಸರನ್ನು ನೋಂದಣಿ ಮಾಡಿಸಿದ್ದಾರೆ.

ಅಂಕಿತ್ ನಾಗರಾಣಿ ಹಾಗೂ ತಾಯಿ ಭೂಮಿ ನಾಗರಾಣಿ ಅವರು ಪ್ರಧಾನಿ ನರೇಂದ್ರ ಮೋದಿಯವರ ಅಭಿಮಾನಿ. ಹೀಗಾಗಿ ಪ್ರಧಾನಿ ಮೋದಿ ಅವರ ಡಿಜಿಟಲ್ ಇಂಡಿಯಾ ಅಭಿಯಾನದಲ್ಲಿ ತಮ್ಮ ಮಗುವಿನ ಹೆಸರನ್ನು ನೊಂದಣಿ ಮಾಡಿಸಲು ಕಾತುರದಿಂದ ಕಾಯುತ್ತಿದ್ದರು. ಅಲ್ಲದೆ ಅವರ ಮಗಳು ಹುಟ್ಟಿದ ಸ್ಥಳದಲ್ಲೇ ಎಲ್ಲಾ ಅಧಿಕೃತ ದಾಖಲೆಗಳನ್ನು ಹೊಂದಿರುವ ಮೊದಲ ಮಗು ಎಂಬ ಹೆಗ್ಗಳಿಕೆ ಪಡೆಯಬೇಕು ಎಂದು ಅಂಕಿತ್ ಕನಸು ಕಂಡಿದ್ದರು.

ಅಧಿಕಾರಿಗಳ ನೆರವಿನೊಂದಿಗೆ ನನ್ನ ಬಹುದೊಡ್ಡ ಕನಸು ನನಸಾಗುವಂತೆ ಆಗಿದೆ. ಆಕೆ ಹುಟ್ಟಿದಾಗಲೇ ಈ ರೀತಿ ನೋಂದಣಿ ಮಾಡಿಸುವ ಮೂಲಕ ಡಿಜಿಟಲ್ ಇಂಡಿಯಾದ ಬಗ್ಗೆ ನಂತರ ನನ್ನ ಮಗಳು ಹೆಮ್ಮೆ ಪಡಲಿದ್ದಾಳೆ ಎಂದು ತಂದೆ ಅಂಕಿತ್ ನಾಗರಾಣಿ ಎಎನ್ ಐ ಸುದ್ದಿ ಸಂಸ್ಥೆ ಜತೆ ಮಾತನಾಡುತ್ತ ಸಂತಸ ಹಂಚಿಕೊಂಡಿದ್ದಾರೆ.

Comments are closed.