ರಾಷ್ಟ್ರೀಯ

ಎನ್ ಕೌಂಟರ್; 3 ಉಗ್ರರ ಹತ್ಯೆ, 7 ನಾಗರಿಕರ ಸಾವು; ಓರ್ವ ಯೋಧ ಹುತಾತ್ಮ

Pinterest LinkedIn Tumblr


ಜಮ್ಮು-ಕಾಶ್ಮೀರ:ಭಾರತೀಯ ಸೇನೆ ಹಾಗೂ ಸಿಆರ್ ಪಿಎಫ್ ಜಂಟಿಯಾಗಿ ನಡೆಸಿದ ಕಾರ್ಯಾಚರಣೆಯಲ್ಲಿ ಹಿಜ್ಬುಲ್ ಮುಜಾಹಿದೀನ್ ಉಗ್ರಗಾಮಿ ಸಂಘಟನೆಯ ಮೂವರು ಉಗ್ರರು ಬಲಿಯಾಗಿದ್ದರು.

ಎನ್ ಕೌಂಟರ್ ಘಟನೆ ನಂತರ ಜಮ್ಮು-ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಶಿರ್ನೂ ಗ್ರಾಮದಲ್ಲಿ ಯುವಕರು ಮತ್ತು ಭದ್ರತಾ ಪಡೆಗಳ ನಡುವೆ ಘರ್ಷಣೆ ಏರ್ಪಟ್ಟಿತ್ತು. ಈ ಸಂದರ್ಭದಲ್ಲಿ ಭದ್ರತಾ ಪಡೆಗಳ ಗುಂಡಿನ ದಾಳಿಗೆ 7 ಮಂದಿ ಸಾವನ್ನಪ್ಪಿರುವ ಘಟನೆ ನಡೆದಿದೆ.

ಭದ್ರತಾ ಪಡೆ ಮತ್ತು ಉಗ್ರರ ನಡುವಿನ ಗುಂಡಿನ ಕಾಳಗದಲ್ಲಿ ಮೂವರು ಉಗ್ರರು ಸಾವನ್ನಪ್ಪಿದ್ದರೆ, ಓರ್ವ ಯೋಧ ಹುತಾತ್ಮರಾಗಿದ್ದಾರೆ. ಮೂವರು ಉಗ್ರರಲ್ಲಿ ಓರ್ವ ಭಾರತೀಯ ಸೇನಾ ಪಡೆಯಲ್ಲಿ ಯೋಧನಾಗಿ ಕಾರ್ಯನಿರ್ವಹಿಸಿದ್ದ. ಕಳೆದ ವರ್ಷ ಎಕೆ 47 ರೈಫಲ್ ನೊಂದಿಗೆ ಆರ್ಮಿ ಕ್ಯಾಂಪ್ ನಿಂದ ನಾಪತ್ತೆಯಾಗಿ ಉಗ್ರಗಾಮಿ ಸಂಘಟನೆ ಸೇರಿಕೊಂಡಿದ್ದ.

ಎನ್ ಕೌಂಟರ್ ನಂತರ ನಡೆದ ಘರ್ಷಣೆಯಲ್ಲಿ ಹಲವಾರು ಯುವಕರು ಪೆಲ್ಲೆಟ್ ಗನ್ ಶಾಟ್ ನಿಂದ ಗಾಯಗೊಂಡಿದ್ದು, ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಪುಲ್ವಾಮಾದಲ್ಲಿ ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

Comments are closed.