ರಾಷ್ಟ್ರೀಯ

ಅಲ್ವಾರ್‌ : ಮೇಲ್ವರ್ಗದವರ ಕಾಲೋನಿಯಲ್ಲಿ ಮೆರವಣಿಗೆ ಸಾಗಿದ್ದಕ್ಕೆ ಆಕ್ಷೇಪ; ಮದುವೆ ದಿಬ್ಬಣಕ್ಕೆ ಅಡ್ಡಿ, ದಲಿತ ಮದುಮಗನ ಮೇಲೆ ದಾಳಿ..!

Pinterest LinkedIn Tumblr


ಅಲ್ವಾರ್‌: ಕಳವಳಕಾರಿ ಘಟನೆಯೊಂದರಲ್ಲಿ ದಿಬ್ಬಣ ಕೂಡಿಕೊಂಡು ಮೆರವಣಿಗೆಯಲ್ಲಿ ಸಾಗುತ್ತಿದ್ದ ದಲಿತ ಮದುಮಗನ ಮೇಲೆ ಮೇಲ್ವರ್ಗದ ಜನರು ದಾಳಿ ನಡೆಸಿದ ಘಟನೆ ನಡೆದಿದೆ.

ಮೇಲ್ವರ್ಗದ ಜನರ ಮನೆಗಳ ಬಳಿಯಿಂದ ಮೆರವಣಿಗೆ ತೆರಳಿದ್ದಕ್ಕಾಗಿ ಆಕ್ಷೇಪ ವ್ಯಕ್ತ ಪಡಿಸಿ ದಾಳಿ ನಡೆಸಲಾಗಿದೆ.

ದಾಳಿ ನಡೆದ ವಿಚಾರ ತಿಳಿದ ಕೂಡಲೇ ಪೊಲೀಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಕೊಂಡು ಪರಿಸ್ಥಿತಿ ತಿಳಿಗೊಳಿಸಿದ್ದಾರೆ.

ರಾಜಸ್ಥಾನದಲ್ಲಿ ನೂತನವಾಗಿ ಅಸ್ಥಿತ್ವಕ್ಕೆ ಬರುತ್ತಿರುವ ಕಾಂಗ್ರೆಸ್‌ ಸರಕಾರಕ್ಕೆ ಈ ರೀತಿಯ ಘಟನೆ ಸವಾಲಾಗಿ ಪರಿಣಮಿಸಿದೆ.

Comments are closed.