ಮನೋರಂಜನೆ

ಬಿಗ್ ಬಾಸ್ ಮನೆಯಿಂದ ಶನಿವಾರ ಔಟ್ ಆಗಿದ್ದು ಯಾರು..? ಹೊರ ಹೋಗುವಾಗ ಈಡೇರಿಸಿಕೊಂಡ ಕೊನೆಯ ಆಸೆ ಏನು ಗೊತ್ತೇ..?

Pinterest LinkedIn Tumblr

8ನೇ ವಾರದ ಎಂಟನೇ ಸ್ಪರ್ಧಿ ಇಂದು (ಶನಿವಾರ) ಬಿಗ್​ಬಾಸ್ ಸೀಜನ್ 6ರ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಸೇಫ್ ಗೇಮ್ ಆಡುವ ಮೂಲಕ ಎಲ್ಲರ ಗಮನ ಸೆಳೆದಿದ್ದ ನಟಿ, ನಯನ ಪುಟ್ಟಸ್ವಾಮಿ ಬಿಗ್ ಬಾಸ್ ಜರ್ನಿಯಿಂದ ಹೊರಬಿದ್ದಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಶನಿವಾರ ನಾಮಿನೇಷನ್ ಪ್ರಕ್ರಿಯೆ ಬಳಿಕ ಎಲಿಮಿನೇಶನ್ ನಡೆದಿದ್ದು, ಸ್ಪರ್ಧಿ ನಯನಾ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ. ಬಿಗ್ ಬಾಸ್ ನಿರೂಪಕ ಕಿಚ್ಚ ಸುದೀಪ್ ಮನೆಯ ಸ್ಪರ್ಧಾಳುಗಳನ್ನು ಮಾತನಾಡಿಸಿಕೊಂಡು ಬಳಿಕ ಕೊನೆಗೆ ಎಲಿಮಿನೇಟ್ ಆಗಿರುವ ಸ್ಪರ್ಧಿಯ ಹೆಸರನ್ನು ಘೋಷಿಸಿದರು.

ನವೀನ್ ಸಜ್ಜು ಜೊತೆ ನಯನ ತುಂಬಾ ಗೆಳೆತನವಿಟ್ಟುಕೊಂಡಿದ್ದು, ಔಟ್ ಆಗಿ ಹೊರಹೋಗುವಾಗ ನವೀನ್ ಕಣ್ಣೀರು ಹಾಕಿದ. ಕೊನೆಗೆ ಗೇಟಿನಿಂದ ಹೊರ ಹೋಗುವಾಗ ನಯನಳ ಕೊನೆಯ ಆಸೆಯನ್ನು ಹಾಡೊಂದನ್ನು ಹಾಡುವ ಮೂಲಕ ನವೀನ್ ನೆರವೇರಿಸಿಕೊಟ್ಟರು.

ಲೆಕ್ಕಾಚಾರಗಳನ್ನ ಇಟ್ಟುಕೊಂಡೆ ಸೇಫ್ ಆಟ ಆಡುತ್ತಿದ್ದ ನಯನಾ, ತುಂಬಾ ವಾರಗಳ ಕಾಲ ವೀಕ್ಷಕರನ್ನ ಸೆಳೆಯುವಲ್ಲಿ ವಿಫಲರಾಗಿದ್ದಾರೆ. ಹೀಗಾಗಿ 8ನೇ ವಾರಕ್ಕೆ ನಯನಾ ಪುಟ್ಟಸ್ವಾಮಿ ಬಿಗ್ ಬಾಸ್ ಮನೆಯಿಂದ ಹೊರಬಿದ್ದಿದ್ದಾರೆ.

ಇವರಿಗೆ ರಿಯಾಲಿಟಿ ಶೋಗಳೆಲ್ಲಾ ಹೊಸದೇನಲ್ಲ. ಈ ಹಿಂದೆ ‘ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು ಸೀಸನ್ 1’ ರಲ್ಲಿ ಭಾಗವಹಿಸಿ ಗೆದ್ದಿದ್ರು. ಅಷ್ಟೇ ಅಲ್ಲದೇ ಪವರ್, ಸಿದ್ಧಾರ್ಥ, ಅಲೆಮಾರಿ ಸೇರಿದಂತೆ ಕೆಲ ಸಿನಿಮಾಗಳಲ್ಲೂ ನಟಿಸಿದ್ದಾರೆ.

Comments are closed.