ಮನೋರಂಜನೆ

ಕಣ್ಣೀರಿಟ್ಟರೆ ಅಮ್ಮನಿಗೆ ನೋವಾಗುತ್ತೆಂದು ದುಖಃವನ್ನೇ ನುಂಗಿದ ಅಂಬಿ ಮಗ ಅಭಿ..!​

Pinterest LinkedIn Tumblr


ಅಪ್ಪನ ಸಾವು ಎಂತಹ ಕಲ್ಲು ಮನಸ್ಸನ್ನೂ ಕರಗಿಸುತ್ತೆ… ಹೀಗಿರುವಾಗ ಸ್ನೇಹಿತರಿಗಿಂತ ಹೆಚ್ಚಾಗಿದ್ದವರನ್ನೇ ಕಳೆದುಕೊಂಡಾಗ ಆ ವ್ಯಕ್ತಿ ಕುಸಿದು ಹೋಗುತ್ತಾನೆ. ಆದರೆ ಕಣ್ಣ ಮುಂದೆ ಶಾಶವಾಗಿ ಮೌನಕ್ಕೆ ಜಾರಿದ ಅಪ್ಪನನ್ನು ಇಟ್ಟುಕೊಂಡು ಮುಖದಲ್ಲಿ ನೋವಿನ ಬಾವನೆಯೇ ಇಲ್ಲದಂತೆ ಇರುವುದು ಎಲ್ಲರಿಗೂ ಸಾಧ್ಯವಿಲ್ಲ.

ಹೌದು, ರೆಬೆಲ್​ ಅಂಬಿ ವಿಧಿವಶರಾದಾಗ ಮಗ ಅಭಿಷೇಕ್ ವರ್ತಿಸಿದ ರೀತಿ ನೋಡಿದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಕರುಳು ಕಿತ್ತು ಬಂದಿತ್ತಂತೆ. ಅದಕ್ಕೆ ಕಾರಣ ಏನಂತೀರಾ..?

ಇದನ್ನೂ ಓದಿ: ಅಪ್ಪಾಜಿಗಾಗಿ ಮತ್ತೆ ವಿದೇಶ ಪ್ರಯಾಣವೇ ಬೇಡ ಎಂದ ದಾಸ ದರ್ಶನ್​..!

ಆಸ್ಪತ್ರೆಯಲ್ಲಿ ತಂದೆಯ ಮೃತ ದೇಹದ ಮುಂದೆ ಸುಮ್ಮನೆ ನಿಂತಿದ್ದ ಅಭಿಯನ್ನು ಕುಮಾರಸ್ವಾಮಿ ಮಾತನಾಡಿಸಿದ್ದರಂತೆ. ಅದಕ್ಕೆ ಅಭಿ ನೀಡಿದ ಉತ್ತರ ಏನೆಂದು ಅವರ ಮಾತಲ್ಲೇ ವಿವರಿಸುತ್ತೇವೆ ಓದಿ…

‘ಅಂಬಿ ಸಾವಿನ ಸುದ್ದಿ ತಿಳಿದ ತಕ್ಷಣ ನಾನು ಆಸ್ಪತ್ರೆಗೆ ಹೋದೆ. ಅಲ್ಲಿ ಅಭಿಷೇಕ್ ಸುಮ್ಮನೆ ನಿಂತಿದ್ದೇಕೆಂದು ಕೇಳಿದೆ. ನಾನು ರೋದಿಸಿದರೆ ಅಮ್ಮನಿಗೆ ನೋವಾಗುತ್ತೆ ಎಂದ ಅಭಿಷೇಕ್ ಮಾತು ಕೇಳಿ ನನಗೆ ನೋವಾಗಿತ್ತು’ ಎಂದು ರೆಬೆಲ್​ಸ್ಟಾರ್​ ಅಂಬರೀಷ್​ಗೆ ನುಡಿನಮನ ಕಾರ್ಯಕ್ರಮದಲ್ಲಿ ಸಿಎಂ ಎಚ್​.ಡಿ. ಕುಮಾರಸ್ವಾಮಿ ನೊಂದುಕೊಂಡರು.

Comments are closed.