ಉಡುಪಿ: ನಟಿ, ಮಂಡ್ಯದ ಮಾಜಿ ಸಂಸದೆ ರಮ್ಯಾ ಅವರು ತಮಗೆ ಹುಷಾರಿಲ್ಲ ಎಂದು ಹೇಳಿಕೊಂಡಿದ್ದಾರೆ. ಬೇರೇನೂ ರಾಜಕೀಯ ಕಾರಣ ಇರಲಿಕ್ಕಿಲ್ಲ. ಹೆಣ್ಣು ಮಕ್ಕಳಿಗೆ ಹಲವಾರು ತೊಂದರೆ ಇರುತ್ತವೆ. ನೋಡೋಣ ಅವರು ಅಂಬರೀಷ್ ಅವರ ವೈಕುಂಠ ಸಮಾರಾಧನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಹುದು ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವೆ ಜಯಮಾಲಾ ಅವರು ತಿಳಿಸಿದ್ದಾರೆ.
ಉಡುಪಿಯಲ್ಲಿ ಮಾತನಾಡಿದ ಅವರು ಅಂಬರೀಷ್ ಅವರ ಅಂತ್ಯಸಂಸ್ಕಾರದಲ್ಲಿ ರಮ್ಯಾ ಪಾಲ್ಗೊಳ್ಳದಿರುವ ಕುರಿತು ಯಾವುದೇ ಪ್ರತಿಕ್ರಿಯೆ ನೀಡದೆ ಸಾರಿ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ವಿಷ್ಣು ಸ್ಮಾರಕ ವಿವಾದದಿಂದ ಭಾರತಿ ವಿಷ್ಣುವರ್ಧನ್ಗೆ ಬೇಸರ ಆಗುವುದು ಸಹಜ. ವಿಷ್ಣುವರ್ಧನ್ ನಮ್ಮನ್ನು ಅಗಲಿ 9 ವರ್ಷಗಳಾಗಿವೆ. ಮೈಸೂರಲ್ಲಿ ಸ್ಮಾರಕ ಆಗಲಿ ಅಂತ ಭಾರತಿ ಕೇಳ್ತಿದಾರೆ. ಮೈಸೂರು ಎಂದರೆ ವಿಷ್ಣುವರ್ಧನ್ ಅವರಿಗೆ ಪ್ರಾಣ. ವಿಷ್ಣು ಆಸೆ ಏನೆಂದು ಅವರ ಕುಟುಂಬಕ್ಕೆ ಗೊತ್ತಿರುತ್ತದೆ ಎಂದು ಜಯಮಾಲಾ ತಿಳಿಸಿದರು.
ವಿಷ್ಣುವರ್ಧನ್ ಅವರ ಸ್ಮಾರಕವನ್ನು ಎಲ್ಲಿ ನಿರ್ಮಾಣ ಮಾಡಲು ಪ್ರಯತ್ನಿಸಿದರೂ ವಿವಾದವಾಗುತ್ತಿದೆ. ಏಕೆ ಹೀಗೆ ವಿವಾದ ಆಗುತ್ತಿದೆ ಎಂದು ಗೊತ್ತಾಗುತ್ತಿಲ್ಲ. ಸಿಎಂ ಕುಮಾರಸ್ವಾಮಿಯವರು ಕೂಡಾ ಸಿನಿಮಾ ರಂಗದವರೇ. ಸ್ಮಾರಕದ ಭೂಮಿಗೆ ಸಂಬಂಧಪಟ್ಟು ಸಣ್ಣ ತಕರಾರು ಇದೆ ಅನಿಸುತ್ತೆ. ನಿನ್ನೆ ಮುನಿರತ್ನ ಮತ್ತು ಮಂಜು ವಿಷ್ಣು ಕುಟುಂಬಸ್ಥರ ಜತೆ ಚರ್ಚೆ ನಡೆಸಿದ್ದಾರೆ. ಭಾರತಿ ವಿಷ್ಣುವರ್ಧನ್ ಅವರೂ ಮನವಿ ಪತ್ರ ಸಲ್ಲಿಸಿದ್ದಾರೆ ಎಂದು ತಿಳಿಸಿದರು.
Comments are closed.