ಮನೋರಂಜನೆ

ಮದುವೆಗೂ ಮುನ್ನ ಕನ್ಯತ್ವ ಪರೀಕ್ಷೆ ಮಾಡಿಸಿಕೊಂಡ ರಾಖಿ ಸಾವಂತ್….

Pinterest LinkedIn Tumblr


ಮುಂಬೈ: ಬಾಲಿವುಡ್‌ ವಿವಾದಿತ ನಟಿ ರಾಖಿ ಸಾವಂತ್ ಮತ್ತು ದೀಪಕ್ ಕಲಾಲ್ ಅವರು ಮದುವೆಗೂ ಮುನ್ನ ಕನ್ಯತ್ವ ಪರೀಕ್ಷೆ ಮಾಡಿಸಿಕೊಂಡಿದ್ದಾರೆ. ಆ ಪ್ರಮಾಣ ಪತ್ರವನ್ನು ಜಾಲತಾಣದಲ್ಲಿ ಅಪ್‌ಲೋಡ್‌ ಮಾಡಿದ್ದಾರೆ. ಇದು ಸಾಕಷ್ಟು ವೈರಲ್‌ ಆಗಿದೆ.

ಮುಂದಿನ ತಿಂಗಳು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದು ದೀಪಕ್ ಕಲಾವ್ ಎನ್ನುವವರನ್ನು ವಿವಾಹವಾಗುತ್ತಿದ್ದಾರೆ.

ಆ ಸರ್ಟಿಫಿಕೇಟನ್ನು ಭಾವೀ ಪತಿ ದೀಪಕ್ ಕಲಾಲ್ ತಮ್ಮ ಇನ್ಸ್ ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ಕೇವಲ ರಾಖಿ ಮಾತ್ರವಲ್ಲ, ಸ್ವತಃ ದೀಪಕ್ ಅವರೂ ಕನ್ವತ್ವ ಪರೀಕ್ಷೆ ಮಾಡಿಸಿಕೊಂಡಿದ್ದಾರೆ. ದೀಪಕ್ ಕಲಾಲ್ ತಮ್ಮ ಇನ್ಸ್ ಟಾಗ್ರಾಮ್ ನಲ್ಲಿ ನೀನು ನನಗೆ ಹೆಮ್ಮೆ ಪಡುವಂತೆ ಮಾಡಿದ್ದೀಯಾ.

ನೀನು ಬಹಳ ಪವಿತ್ರವಾಗಿದ್ದೀಯಾ. ವೈದ್ಯರು 3 ಗಂಟೆಗಳ ಕಾಲ ರಾಖಿ ದೇಹವನ್ನು ಪರೀಕ್ಷಿಸಿ ಉತ್ತಮ ಫಲಿತಾಂಶ ನೀಡಿದ್ದಾರೆ ಎಂದು ಬರೆದುಕೊಂಡಿದ್ದಾರೆ. ತಮ್ಮ ಕನ್ಯತ್ವ ಪರೀಕ್ಷೆಯ ಸರ್ಟಿಫಿಕೇಟನ್ನು ಶೇರ್ ಮಾಡಿಕೊಂಡಿದ್ದು ಆರ್ ಯೂ ಹ್ಯಾಪಿ ಬೇಬಿ? ಎಂದು ಬರೆದುಕೊಂಡಿದ್ದಾರೆ.

Comments are closed.