ಮನೋರಂಜನೆ

ಇನ್‍ಸ್ಟಾಗ್ರಾಂನಲ್ಲಿ ತನ್ನ ನಗ್ನ ಫೋಟೋ ಪ್ರಕಟಿಸಿದ ಸನ್ನಿ ಲಿಯೋನ್

Pinterest LinkedIn Tumblr


ಮುಂಬೈ: ಬಾಲಿವುಡ್ ಹಾಟ್ ಬೆಡಗಿ ಸನ್ನಿ ಲಿಯೋನ್ ತನ್ನ ನಗ್ನ ಫೋಟೋವನ್ನು ಇನ್‍ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಸನ್ನಿ ಲಿಯೋನ್ ತಮ್ಮ ಇನ್‍ಸ್ಟಾಗ್ರಾಂನಲ್ಲಿ ನಗ್ನ ಫೋಟೋವನ್ನು ಶೇರ್ ಮಾಡಿ ಅದಕ್ಕೆ, “ಹೆಲೋ, ಇದು ನಾನೇನಾ? ನೀವು ನನ್ನ ನೋಡುತ್ತಿರುವುದು” ಎಂಬ ಸಾಲುಗಳನ್ನು ಬರೆದುಕೊಂಡಿದ್ದಾರೆ.

ಸದ್ಯ ಈ ಫೋಟೋವನ್ನು ನೋಡಿದ ಅಭಿಮಾನಿಗಳು ಕೆಲವರು ಸನ್ನಿಯನ್ನು ಹಾಟ್ ಆ್ಯಂಡ್ ಸೆಕ್ಸಿ ಎಂದು ಹೊಗಳಿದ್ದಾರೆ. ಇನ್ನೂ ಕೆಲವರು ಈ ಫೋಟೋ ನೋಡಿ ಸನ್ನಿ ಲಿಯೋನ್ ವಿರುದ್ಧ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.

ಕಳೆದ ತಿಂಗಳು ಸನ್ನಿ ತನ್ನ ಪತಿ ಹಾಗೂ ಸ್ನೇಹಿತರ ಜೊತೆ ಮೆಕ್ಸಿಕೋದಲ್ಲಿ ತನ್ನ ರಜೆಯ ದಿನಗಳನ್ನು ಕಳೆಯಲು ಹೋಗಿದ್ದರು. ಈ ವೇಳೆ ಸನ್ನಿ ಬಿಳಿ ಬಿಕಿನಿ ಧರಿಸಿ ಅದಕ್ಕೆ ಹ್ಯಾಟ್ ಹಾಕಿ ನಡೆದುಕೊಂಡು ಹೋಗುತ್ತಿರುವ ಫೋಟೋವನ್ನು ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದರು.

ಸದ್ಯಕ್ಕೆ ಸನ್ನಿ ಲಿಯೋನ್ ತಮಿಳು ಚಿತ್ರ ವೀರಮ್ಮದೇವಿಯಲ್ಲಿ ಕಾಣಿಸಿಕೊಳ್ಳಲಿದ್ದು, ಸಿನಿಮಾ ಶೂಟಿಂಗ್ ನಲ್ಲಿ ತೊಡಗಿಕೊಂಡಿದ್ದಾರೆ. ಅಲ್ಲದೇ ಇತ್ತೀಚೆಗೆ ಅವರು ಬೆಂಗಳೂರಿಗೆ ಬಂದು ‘ಸನ್ನಿ ನೈಟ್ಸ್’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Comments are closed.