ರಾಷ್ಟ್ರೀಯ

ತಾಯಿ ಮನೆಯಿಂದ ಬರಲು ಒಪ್ಪದ ಹೆಂಡತಿ: ಮಗು ಜತೆ ಟವರ್ ಏರಿದ ಗಂಡ

Pinterest LinkedIn Tumblr


ಆಗ್ರಾ: ಗಂಡನೊಂದಿಗೆ ಜಗಳವಾಡಿ ತವರು ಮನೆಗೆ ತೆರಳಿದ್ದ ಪತ್ನಿ ವಾಪಸ್ ಬರುತ್ತಿಲ್ಲ ಎಂದು ಕೋಪಗೊಂಡ ವ್ಯಕ್ತಿ ತನ್ನ ಮೂರು ತಿಂಗಳ ಹಸುಗೂಸಿನ ಜತೆಗೆ ವಿದ್ಯುತ್ ಪೂರೈಸುವ ಟವರ್ ಏರಿ ಕುಳಿತು ಪ್ರತಿಭಟನೆ ನಡೆಸಿದ್ದಾನೆ.

ಉತ್ತರ ಪ್ರದೇಶದ ಆಗ್ರಾದ ಸಿಕಂದರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ. ನರೇಶ್ ಪ್ರಜಾಪತಿ ಎಂಬಾತ ಬುಧವಾರ ತನ್ನ ಪುತ್ರಿ ಜತೆ ಏಕಾಏಕಿ ಟವರ್ ಏರಿ ಕುಳಿತಿದ್ದಾನೆ. ಟವರ್ ಏರುವ ಮೊದಲು ಕುಡಿಯಲು ನೀರು ಮತ್ತು ಆಹಾರ ತೆಗೆದುಕೊಂಡು ಹೋಗಿದ್ದಾನೆ.

ನರೇಶ್ ಪತ್ನಿ ರಜನಿ ಗಂಡನೊಂದಿಗೆ ಜಗಳವಾಡಿ ತವರು ಮನೆಗೆ ಹೋದವಳು ಎರಡು ತಿಂಗಳಾದರೂ ವಾಪಸ್ ಬಂದಿಲ್ಲ. ಆಕೆಯನ್ನು ಮನೆಗೆ ವಾಪಸ್ ಬರುವಂತೆ ಕೇಳಿಕೊಂಡರೂ, ಆಕೆ ಒಪ್ಪಿರಲಿಲ್ಲ.

ಇದರಿಂದ ಬೇಸತ್ತ ನರೇಶ್ 30,000 ವೋಲ್ಟ್ಸ್‌ ವಿದ್ಯುತ್ ಸರಬರಾಜು ಮಾಡುವ ಟವರ್ ಏರಿ ಕುಳಿತಿದ್ದಾನೆ. ಪೊಲೀಸರು ಮತ್ತು ಗ್ರಾಮಸ್ಥರು ಮನವಿ ಮಾಡಿಕೊಂಡರೂ ಕೆಳಗೆ ಇಳಿದಿಲ್ಲ.

ಕೊನೆಗೆ ನಾಲ್ಕು ತಾಸು ಟವರ್‌ನಲ್ಲಿಯೇ ಇದ್ದ ಬಳಿಕ ಕೆಳಗೆ ಇಳಿದಿದ್ದಾನೆ. ಆತನ ವಿರುದ್ಧ ಯಾವುದೇ ಪ್ರಕರಣ ದಾಖಲಾಗಿಲ್ಲ, ಪೊಲೀಸರು ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ. ನರೇಶ್ ದಂಪತಿಗೆ ನಾಲ್ವರು ಮಕ್ಕಳಿದ್ದಾರೆ.

ಈ ಪ್ರದೇಶದಲ್ಲಿಕಳೆದ ಮೂರು ವರ್ಷದಲ್ಲಿ ಟವರ್ ಏರಿದ ಒಂಭತ್ತನೇ ಪ್ರಕರಣ ಇದಾಗಿದೆ.

Comments are closed.