ಕರ್ನಾಟಕ

ಮಾಜಿ ಶಾಸಕ ಭಕ್ತವತ್ಸಲಂ ಕುಟುಂಬಕ್ಕೆ ಮತ್ತೊಂದು ಆಘಾತ: ಅಣ್ಣನ ಅಂತ್ಯಕ್ರಿಯೆಗೂ ಮುನ್ನವೇ ತಮ್ಮ ನಿಧನ

Pinterest LinkedIn Tumblr


ಕೋಲಾರ: ಕೆಜಿಎಫ್​ ಮಾಜಿ ಶಾಸಕರ ಕುಟುಂಬಕ್ಕೆ ಮತ್ತೊಂದು ಆಘಾತವಾಗಿದ್ದು ಮಾಜಿ ಶಾಸಕ ಭಕ್ತವತ್ಸಲಂ ಅಂತ್ಯಕ್ರಿಯೆಗೂ ಮುನ್ನವೇ ಅವರ ಸೋದರ ಮೃತಪಟ್ಟಿದ್ದಾರೆ.

ಭಕ್ತವತ್ಸಲಂ ಸೋದರ ಗುಣಶೇಖರನ್​ ಸಹ ಅನಾರೋಗ್ಯದಿಂದ ಬಳಲುತ್ತಿದ್ದು, ಇಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಅಣ್ಣನ ಅಂತ್ಯ ಸಂಸ್ಕಾರಕ್ಕೂ ಮುಂಚೆಯೇ ಮಾಜಿ ಶಾಸಕರ ಸೋದರ ಮೃತಪಟ್ಟಿದ್ದು, ಮೊದಲೇ ಶೋಕಾಚರಣೆಯಲ್ಲಿದ್ದ ಕುಟುಂಬ ವರ್ಗಕ್ಕೆ ಮತ್ತೊಂದು ಆಘಾತ ಎದುರಾದಂತಾಗಿದೆ. ಗುಣಶೇಖರನ್​ ಕಿಡ್ನಿ ಸಮಸ್ಯೆ ಸೇರಿ ಇನ್ನಿತರ ಅನಾರೋಗ್ಯದಿಂದ ಬಳಲುತ್ತಿದ್ದರು ಎನ್ನಲಾಗಿದೆ.

ಎಂ‌.ಭಕ್ತಭತ್ಸಲಂ (60) ಅವರು ಹೃದಯ ‌ಸಂಬಂಧಿ ಕಾಯಿಲೆಯಿಂದ‌ ಬಳಲುತ್ತಿದ್ದು, ಕೋಲಾರದ ಆರ್.ಎಲ್.ಜಾಲಪ್ಪ ಆಸ್ಪತ್ರೆಯಲ್ಲಿ‌ ಬುಧವಾರ ರಾತ್ರಿ ನಿಧನರಾಗಿದ್ದರು.ಇವರು ಮೂರು ಬಾರಿ ಶಾಸಕರಾಗಿ, 5 ಬಾರಿ ಕೆಜಿಎಫ್ ‌ನಗರಸಭೆ ಅಧ್ಯಕ್ಷರಾಗಿದ್ದರು.

Comments are closed.