ಮನೋರಂಜನೆ

ಗಂಡನೊಂದಿಗೆ ತವರಿಗೆ ಬಂದ ದೀಪಿಕಾ ಪಡುಕೋಣೆ

Pinterest LinkedIn Tumblr


ಚಿಕ್ಕಬಳ್ಳಾಪುರ: ಬಾಲಿವುಡ್ ಡಿಂಪಲ್ ಬೆಡಗಿ ದೀಪಿಕಾ ಪಡುಕೋಣೆ ಮದುವೆಯಾದ ಬಳಿಕ ಮೊದಲ ಬಾರಿಗೆ ಪತಿ ರಣ್‍ವೀರ್ ಸಿಂಗ್ ಅವರ ಜೊತೆ ತನ್ನ ತವರೂರಿಗೆ ಆಗಮಿಸಿದ್ದಾರೆ.

ದೀಪಿಕಾ ಹಾಗೂ ರಣ್‍ವೀರ್ ಇಬ್ಬರು ಸಬ್ಯಾಸಾಚಿ ವಿನ್ಯಾಸದ ಶ್ವೇತ ವರ್ಣದ ಉಡುಗೆ ತೊಟ್ಟು ಮುಂಬೈನಿಂದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ. ದೀಪಿಕಾ ಸಬ್ಯಾಸಾಚಿ ವಿನ್ಯಾಸ ಮಾಡಿದ ಬಿಳಿ ಬಣ್ಣದ ಅನಾರ್ ಕಲಿ ಡ್ರೆಸ್ ಧರಿಸಿದ್ದಾರೆ. ಅದಕ್ಕೆ ದೊಡ್ಡದಾದ ಕಿವಿಯೊಲೆಯನ್ನು ಹಾಗೂ ಕೆಂಪು ಬಣ್ಣದ ಬಳೆಯನ್ನು ಧರಿಸಿ ಸಿಂಪಲ್ ಆಗಿರುವ ಮಂಗಲಸೂತ್ರವನ್ನು ಹಾಕಿ ಮಿಂಚಿದ್ದಾರೆ. ರಣ್‍ವೀರ್ ಬಿಳಿ ಬಣ್ಣದ ಕುರ್ತಾ ಹಾಕಿ ಅದಕ್ಕೆ ಸಬ್ಯಾ ಫ್ಲೋರಲ್ ನೆಹರು ಜಾಕೇಟ್ ಧರಿಸಿದ್ದಾರೆ.

ವಿವಾಹವಾದ ನಂತರ ಮೊದಲ ಬಾರಿಗೆ ಆಗಮಿಸಿದ ದೀಪಿಕಾ ಪಡುಕೋಣೆ-ರಣವೀರ್ ಸಿಂಗ್ ಕಣ್ತುಂಬಿಕೊಳ್ಳಲು ಅಭಿಮಾನಗಳ ದಂಡೇ ಕೆಐಎಎಲ್ ಗೆ ಆಗಮಿಸಿತ್ತು. ಸುಮಾರು 12ಗಂಟೆಗೆ ದೀಪಿಕಾ ಪಡುಕೋಣೆ ವಿಮಾನ ನಿಲ್ದಾಣಕ್ಕೆ ಕುಟುಂಬ ಸಮೇತ ಆಗಮಿಸಿದ್ದರು. ನಾಳೆ ಲೀಲಾ ಪ್ಯಾಲೇಸ್‍ನಲ್ಲಿ ನವದಂಪತಿಯ ಅದ್ಧೂರಿ ಆರತಕ್ಷತೆ ಕಾರ್ಯಕ್ರಮ ನಿಗದಿಯಾಗಿದೆ. ಹೀಗಾಗಿ ನಾಳೆ ನಡೆಯಲಿರುವ ಆರತಕ್ಷತೆ ಕಾರ್ಯಕ್ರಮದಲ್ಲಿ ದಕ್ಷಿಣ ಭಾರತದ ಸಿನಿ ತಾರೆಯರು ಹಾಗೂ ಗಣ್ಯಾತಿ ಗಣ್ಯರು ಭಾಗವಹಿಸಿಲಿದ್ದಾರೆ.

ನವೆಂಬರ್ 14 ಮತ್ತು 15ರಂದು ಇಟಲಿಯ ಕೊಮೊ ಸಿಟಿಯಲ್ಲಿ ದೀಪ್‍ವೀರ್ ಜೋಡಿ ಮದುವೆ ಆಗಿತ್ತು. ಖಾಸಗಿಯಾಗಿ ನಡೆದಿದ್ದ ಮದುವೆ ಕಾರ್ಯಕ್ರಮದಲ್ಲಿ ಎರಡು ಕುಟುಂಬಗಳ ಆಪ್ತರು ಮತ್ತು ಬಾಲಿವುಡ್ ತಾರೆಯರು ಮಾತ್ರ ಭಾಗಿಯಾಗಿದ್ದರು.

ನ. 14ರಂದು ಕೊಂಕಣಿ ಹಾಗೂ ನ. 15ರಂದು ಸಿಂಧ್ ಸಂಪ್ರದಾಯದಲ್ಲಿ ದೀಪ್‍ವೀರ್ ಮದುವೆಯಾದರು. ಮದುವೆಯಾದ ದೀಪ್‍ವೀರ್ ತಮ್ಮ ಮದುವೆಯ ಫೋಟೋವನ್ನು ರಿವೀಲ್ ಮಾಡಿರಲಿಲ್ಲ. ಬಳಿಕ ನ. 15ರ ಸಂಜೆ ದಿಪ್‍ವೀರ್ ತಮ್ಮ ಮದುವೆ ಫೋಟೋ ರಿವೀಲ್ ಮಾಡಿದರು.

Comments are closed.