ಕರಾವಳಿ

ಗ್ಯಾಸ್ ಟ್ಯಾಂಕರ್ ಪಲ್ಟಿ : ಗ್ಯಾಸ್ ಸೋರಿಕೆ ಶಂಕೆ! – ನಂತೂರು ಸರ್ಕಲ್ ಪರಿಸರದಲ್ಲಿ ವಿದ್ಯುತ್ ಸಂಪರ್ಕ ಸ್ಠಗಿತ

Pinterest LinkedIn Tumblr

ಮಂಗಳೂರು, ನ.21: ಅನಿಲ ತುಂಬಿದ ಟ್ಯಾಂಕರ್‌ವೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಲ್ಲೇ ಉರುಳಿಬಿದ್ದ ಘಟನೆ ನಗರದ ನಂತೂರು ಸರ್ಕಲ್ ಬಳಿ ಇಂದು ಮುಂಜಾವ ನಡೆದಿದೆ. ಘಟನೆಯಲ್ಲಿ ಟ್ಯಾಂಕರ್ ಚಾಲಕ ಗಂಭೀರ ಗಾಯಗೊಂಡಿದ್ದು, ಆತನನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆಯಿಂದ ಕುಲಶೇಖರ-ಮಂಗಳೂರು ರಸ್ತೆ ಸೇರಿದಂತೆ ಪಡೀಲ್ ಮಾರ್ಗದವರೆಗೂ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಬಳಿಕ ಸ್ಥಳಕ್ಕಾಗಮಿಸಿದ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ ಸಾರ್ವಜನಿಕರ ಸಹಕಾರದಿಂದ ಕ್ರೇನ್ ಬಳಸಿ ಟ್ಯಾಂಕರ್‌ನ್ನು ರಸ್ತೆಯಿಂದ ತೆರವುಗೊಳಿಸಿದರು.

ಇಂದು ಮುಂಜಾನ 4 ಗಂಟೆ ಸುಮಾರಿಗೆ ನಂತೂರು ಸರ್ಕಲ್ ಬಳಿ ಚಾಲಕನ ನಿಯಂತ್ರಣ ತಪ್ಪಿದ ಟ್ಯಾಂಕರ್ ಡಿವೈಡರ್‌ಗೆ ಢಿಕ್ಕಿಯಾಗಿ ಬಳಿಕ ರಸ್ತೆಯಲ್ಲೇ ಉರುಳಿಬಿದ್ದಿದೆ. ಇದರಿಂದ ಇಲ್ಲಿ ಟ್ರಾಫಿಕ್ ಸಮಸ್ಯೆ ಉಂಟಾಗಿತ್ತು. ಗ್ಯಾಸ್ ಸೋರಿಕೆ ಭೀತಿಯಿಂದ ಪರಿಸರದಲ್ಲಿ ವಿದ್ಯುತ್ ಸಂಪರ್ಕವನ್ನು ಸ್ಠಗಿತಗೊಳಿಸಲಾಗಿತ್ತು. ಅದೃಷ್ಟವಶಾತ್ ಯಾವುದೇ ಸೋರಿಕೆ ಕಂಡುಬಂದಿರಲಿಲ್ಲ.

ಕೃಪೆ: ವಾಭಾ

Comments are closed.