ಕರಾವಳಿ

ಈದ್ ಮೀಲಾದ್ ಪ್ರಯುಕ್ತ ಉಳ್ಳಾಲ ದರ್ಗಾ ಸಮಿತಿ ವತಿಯಿಂದ ಬ್ರಹತ್ ಸ್ವಲಾತ್ ಮೆರವಣಿಗೆ

Pinterest LinkedIn Tumblr

ಮಂಗಳೂರು / ಉಳ್ಳಾಲ : ಪ್ರವಾದಿ ಸಲ್ಲಲ್ಲಹು ಅಲೈಹಿವಸಲ್ಲಂರವರ ಶಾಂತಿಯ ಸಂದೇಶದ ಫಲವಾಗಿ ಪಾಶ್ಚಾತ್ಯ ರಾಷ್ಟ್ರಗಳಲ್ಲೂ ಮುಸಲ್ಮಾನರ ಸಂಖ್ಯೆ ಹೆಚ್ಚಳವಾಗುತ್ತಿದೆ,ಇಂದು ಪ್ರವಾದಿಯವರ ಹೆಸರಿನಲ್ಲಿ ಹಲವು ಕಾರ್ಯಕ್ರಮ ನಡೆಸಲಾಗುತ್ತಿದ್ದು, ಸ್ಥಳೀಯ ಪ್ರದೇಶದಲ್ಲಿ ಸೌಹಾರ್ದ, ಶಾಂತಿಯ ವಾತಾವರಣ ನಿರ್ಮಿಸಿದಾಗ ಪರಿಪೂರ್ಣಜೀವನ ಸಾದ್ಯ. ಪ್ರವಾದಿ ಸಂದೇಶ ಪಾಲಿಸಿ ದಂತಾಗುತ್ತದೆ. ಸ್ವಚ್ಚತೆಗೆ‌ಇಸ್ಲಾಮ್‌ಆದ್ಯತೆ ನೀಡಿದೆ, ಪ್ರವಾದಿಯವರ ಪ್ರೀತಿಯಿಂದ ಬಿಸಿಲನ್ನೂ ಲೆಕ್ಕಿಸದೇದೂರದ‌ಊರಿನಿಂದ ಸ್ವಲಾತ್ ಮೆರವಣಿಗೆ ನಡೆಸಲಾಗುತ್ತದೆ.ಈ ಸಂದರ್ಭದಲ್ಲಿದಾಹತೀರಿಸಲು ಬಳಸಿದ ಪ್ಲಾಸ್ಟಿಕ್ ಹೆಕ್ಕಿ ಸ್ವಚ್ಚತೆಕಾಪಾಡಬೇಕು‌ಎಂದು ಉಳ್ಳಾಲ ದರ್ಗಾ‌ಅಧ್ಯಕ್ಷರಾದ ಹಾಜಿ‌ಅಬ್ದುಲ್  ರಶೀದ್ ಹೇಳಿದರು.

ಅವರು ಉಳ್ಳಾಲ ದರ್ಗಾ ಸಮಿತಿ ವತಿಯಿಂದಜರುಗಿದ‌ಈದ್ ಮೀಲಾದ್‌ಕಾರ್ಯಕ್ರಮದಲ್ಲಿ ಮಾತಾಡುತ್ತಿದ್ದರು. ಈದ್ ಮೀಲಾದ್ ಪ್ರಯುಕ್ತ ಸಯ್ಯಿದ್ ಮದನಿ ದರ್ಗಾದಲ್ಲಿ ವಿಶೇಷ ಪ್ರಾರ್ಥನೆ, ದ್ವಜಾರೋಹಣ ಮೂಲಕ ಕೋಟೆಪುರಜುಮಾ ಮಸೀದಿಯಿಂದ‌ ಆರಂಭಗೊಂಡ ಬ್ರಹತ್ ಸ್ವಲಾತ್ ಮೆರವಣಿಗೆ‌ಅಬ್ಬಕ್ಕ ವೃತ್ತ, ಮುಕ್ಕಚ್ಚೇರಿ, ಆಝಾದ್‌ನಗರ, ಮಾಸ್ತಿಕಟ್ಟೆ ಮಾರ್ಗವಾಗಿ ದರ್ಗಾ ವಠಾರದಲ್ಲಿ ಸಮಾಪನಗೊಂಡುತು.

ಈ ಸಂದರ್ಬದಲ್ಲಿದರ್ಗಾ ಸಮಿತಿ ವತಿಯಿಂದ 2019ರ ಕ್ಯಾಲೆಂಡರ್‌ಉದ್ಘಾಟನೆ ಮಾಡಿದರು. ಉಳ್ಳಾಲ ಜುಮಾ ಮಸೀದಿ ಖತೀಬರಾದ‌ಅಬ್ದುಲ್‌ಅಝೀಝ್ ಬಾಖವಿ ದು‌ಆಗೈದರು.

ಸಚಿವರಾದಯು.ಟಿಖಾದರ್, ಅರಬಿಕ್‌ಕಾಲೇಜು ಪ್ರೊಫೆಸರುಗಳಾದ ಇಬ್ರಾಹೀಮ್ ಮದನಿ, ಉಸ್ಮಾನ್ ಪೈಝಿ, ದ‌ಅವಾಕಾಲೇಜು ಪ್ರೊಫೆಸರ್‌ಇಬ್ರಾಹೀಮ್‌ಅಹ್ಸನಿ, ದರ್ಗಾ‌ಅಧ್ಯಕ್ಷರಾದ ಹಾಜಿ‌ಅಬ್ದುಲ್ ರಶೀದ್, ಪ್ರಧಾನ ಕಾರ್ಯದರ್ಶಿ ಹಾಜಿತ್ವಾಹ ಮುಹಮ್ಮದ್, ಉಪಾಧ್ಯಕ್ಷರಾದಯು.ಕೆ ಮೋನು ಇಸ್ಮಾಯೀಲ್, ಬಾವ ಮುಹಮ್ಮದ್, ಅಡಿಟರ್‌ಯು.ಟಿ‌ಇಲ್ಯಾಸ್, ಕೋಶಾಧಿಕಾರಿಯು.ಕೆ‌ಇಲ್ಯಾಸ್, ಜತೆ ಕಾರ್ಯದರ್ಶಿ ಆಝಾದ್‌ಇಸ್ಮಾಯೀಲ್, ಸಯ್ಯಿದ್ ಮದನಿ ಅರಬಿಕ್‌ಎಜುಕೇಶನಲ್‌ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಹಾಜಿ‌ ಅಮೀರ್, ಜತೆ ಕಾರ್ಯದರ್ಶಿ ಆಸಿಫ್ ಅಬ್ದುಲ್ಲ,ಉಪಾಧ್ಯಕ್ಷರಾದ ಹಾಜಿ ಮುಹಮ್ಮದ್ ಹಳೆಕೋಟೆ, ಕೋಶಾಧಿಕಾರಿ‌ಅಬ್ಬಾಸ್ ಹಾಜಿ, ಚಾರಿಟೇಬಲ್ ಟ್ರಸ್ಟ್  ಕಾರ್ಯದರ್ಶಿ ಎ.ಕೆಮೊಹಿಯದ್ದೀನ್ ಹಾಜಿ, ಉಪಾಧ್ಯಕ್ಷ ಮುಸ್ತಫ‌ಅಬ್ದುಲ್ಲ,ಕೋಶಾಧಿಕಾರಿ ಹಮೀದ್‌ಕಲ್ಲಾಪು, ಮುಫತ್ತಿಶ್ ಸುಲೈಮಾನ್ ಸಖಾಫಿ, ಸದಸ್ಯರಾದಫಾರೂಕ್ ಉಳ್ಳಾಲ, ಮುಸ್ತಪ ಯು.ಕೆ, ಹಮೀದ್‌ಕೋಡಿ, ಅಲೀ ಮೋನು, ಜಬ್ಬಾರ್ ಮೇಲಂಗಡಿ, ಮುಸ್ತಫ ಮಂಚಿಲ, ಮೊಯ್ದೀನಬ್ಬ ಉಳ್ಳಾಲಬೈಲು, ಖಾದರ್ ಮುಸ್ಲಿಯಾರ್ ಅಕ್ಕರೆಕರೆ, ಕುಂಞಿಮೋನು ಹಿದಾಯತ್ ನಗರ, ಅಶ್ರಫ್ ಮುಕ್ಕಚ್ಚೇರಿ, ಮೊಯ್ದಿನಬ್ಬ‌ಆಝಾದ್ ನಗರ, ಕುಂಞಿ‌ಅಹ್ಮದ್ ಅಳೇಕಲ,ಅಯ್ಯೂಬ್ ಮಂಚಿಲ, ಹನೀಫ್ ಸೋಲಾರ್, ಕೋಟೆಪುರ ಮಸೀದಿ ಅಧ್ಯಕ್ಷರಾದ‌ಅಬ್ಬಾಸ್, ಮಾಜಿ ಸದಸ್ಯರಾದ ಹಾಜಿಯು.ಎಸ್‌ಅಬೂಬಕ್ಕರ್ ಹಾಜಿ, ಕಬೀರ್‌ಚಾಯಬ್ಬ, ನಾಝಿಮ್ ಮುಕ್ಕಚ್ಚೇರಿ, ಎ.ಎ ಖಾದರ್ ಹಾಜಿ, ಮತ್ತಿತ್ತರರು ಉಪಸ್ಥಿತರಿದ್ದರು.

ವರದಿ ಹಾಗೂ ಚಿತ್ರ ಕೃಪೆ : ಆರೀಫ್ ಕಲ್ಕಟ್ಟ

Comments are closed.