ಮನೋರಂಜನೆ

ಕನ್ನಡ ಉದಯೋನ್ಮುಖಕ ನಟ, ಸಾರಾ ಗೋವಿಂದು ಪುತ್ರನಿಂದ ಗೂಂಡಾಗಿರಿ

Pinterest LinkedIn Tumblr


ಬೆಂಗಳೂರು: ಚಲನಚಿತ್ರ ನಿರ್ಮಾಪಕ ಹಾಗೂ ಕನ್ನಡ ಹೋರಾಟಗಾರರಾದ ಸಾರಾ ಗೋವಿಂದು ಪುತ್ರನಿಂದ ಗೂಂಡಾಗಿರಿ ನಡೆದಿರೋ ಪ್ರಕರಣವೊಂದು ಬೆಳಕಿಗೆ ಬಂದಿದೆ.

ಸಾರಾ ಗೋವಿಂದು ಅವರ ಪುತ್ರ ಅನೂಪ್ ವಿರುದ್ಧ ಈ ಆರೋಪ ಕೇಳಿಬಂದಿದೆ. ಅನೂಪ್ ಸಾರಾ ಗೋವಿಂದು ಮನೆಯ ಕಾರು ಚಾಲಕನ ಮೇಲೆ ಹಲ್ಲೆ ನಡೆಸಿದ್ದಾರೆ.

ದೀಪಾವಳಿ ಹಬ್ಬಕ್ಕೆ ಸಂಬಳ ನೀಡದ ಹಿನ್ನೆಲೆಯಲ್ಲಿ ಕೆಲಸಕ್ಕೆ ಹೋಗದ್ದಕ್ಕೆ ಈ ಹಲ್ಲೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.

ಹರೀಶ್‍ರನ್ನು ಬಸವೇಶ್ವರನಗರಕ್ಕೆ ಕರೆಸಿಕೊಂಡು ಫರಿಸ್ತಾ ಕೆಫೆ ಮುಂಭಾಗದಲ್ಲಿ ಅನೂಪ್ ಸೇರಿ ಜೊತೆಯಿದ್ದ ಫ್ರಭಾಕರ್ ಮತ್ತು ಸತ್ಯ ಎಂಬವರು ಹರೀಶ್ ಮೇಲೆ ಹಲ್ಲೆ ನಡೆಸಿದ್ದಾರೆ.

ಅಲ್ಲದೇ ಹೊರಗಡೆ ಈ ವಿಚಾರ ಗೊತ್ತಾದ್ರೆ ಕೊಲೆ ಮಾಡೋದಾಗಿ ಕೂಡ ಗ್ಯಾಂಗ್ ಬೆದರಿಕೆ ಹಾಕಿದೆ ಎಂದು ಹಲ್ಲೆಗೊಳಗಾದ ಹರೀಶ್ ಆರೋಪಿಸಿದ್ದಾರೆ.

ಘಟನೆಯಿಂದ ಕಿವಿ ಕೇಳದ ಸ್ಥಿತಿಯಲ್ಲಿದ್ದ ಹರೀಶ್ ಕೆಸಿ ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅನೂಪ್ ಡವ್, ಮಿಸ್ಟರ್ ಫರ್ಫೆಕ್ಟ್, ಸಾಗುವ ದಾರಿಯಲ್ಲಿ ಚಿತ್ರದಲ್ಲಿ ನಾಯಕ ನಟನಾಗಿ ಅಭಿನಯಿಸಿದ್ದಾರೆ.

Comments are closed.