ಮನೋರಂಜನೆ

ತಾಳಿ ಕಟ್ಟುವ ಮುನ್ನ ಭಾವಿ ಗಂಡನ ಮೀಸೆಗೆ ಕತ್ತರಿ ಹಾಕಿದ್ದ ಬಾಲಿವುಡ್ ನಟಿ

Pinterest LinkedIn Tumblr


ಈಗ ಎಲ್ಲಿ ನೋಡಿದರೆ ಅಲ್ಲಿ ದೀಪ್​ವೀರ್​ ಮದುವೆ ಸದ್ದು. ದೂರದ ಇಟಲಿಯಲ್ಲಿ ಮದುವೆಯಾದ ಈ ಜೋಡಿ ಭಾನುವಾರ ತವರಿಗೆ ಆಗಮಿಸಿದ್ದಾರೆ. ಈ ದಂಪತಿಯ ಮದುವೆ ಫೋಟೊ ನೋಡಲು ಇವರ ಮದುವೆ ಕಥೆ ಕೇಳಲು ಅವರ ಸಾಮಾಜಿಕ ಜಾಲತಾಣದಲ್ಲಿ ಜನರು ಹುಡುಕಾಟ ನಡೆಸುತ್ತಲೆ ಇದ್ದಾರೆ. ಈ ನಡುವೆ ದೀಪಿಕಾ ರಣವೀರ್​ ಅವರ ಲುಕ್​ಗೆ ಕತ್ತರಿ ಹಾಕಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಿದ್ದು, ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ.

‘ರಾಮ್​ ಲೀಲಾ’ ಚಿತ್ರದೊಂದಿಗೆ ಆರಂಭವಾದ ಇವರ ಪ್ರೀತಿ ಬಳಿಕ ‘ಬಾಜೀರಾವ್​ ಮಸ್ತಾನಿ’ ಚಿತ್ರದ ಅಮರ ಪ್ರೇಮದ ಮೂಲಕ ಇವರ ಪ್ರೀತಿ ಇನ್ನಷ್ಟು ಗಟ್ಟಿಯಾಗಿತ್ತು. ಈ ಚಿತ್ರದಲ್ಲಿ ಡಿಫರೆಂಟ್​ ಮೀಸೆ ಹೊಂದಿದ್ದ ರಣವೀರ್​ ಲುಕ್​ ಆತನ ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ಇಷ್ಟವಾಗಿತ್ತು. ಆದರೆ, ಈ ಲುಕ್​ ದೀಪಿಕಾಗೆ ಮಾತ್ರ ಹಿಡಿಸಿರಲಿಲ್ಲವಂತೆ. ಅದಕ್ಕಾಗಿ ಅವನ ಮೀಸೆಗೆ ಸ್ವತಃ ದೀಪಿಕಾನೇ ಕತ್ತರಿ ಹಾಕಿದ್ದರು. ಈ ಹಳೆ ವಿಡಿಯೋ ಈಗ ಮತ್ತೊಮ್ಮೆ ಸಿಕ್ಕಾಪಟ್ಟೆ ವೈರಲ್​ ಆಗಿದೆ.

ಮದುವೆಯಾಗುತ್ತಿದ್ದಂತೆ ಹುಡುಗಿಯರು ಗಂಡನಿಗೆ ಹೇಗೆ ತಮ್ಮ ವರಸೆ ತೋರಿಸುತ್ತಾರೆ ಎಂಬ ಹೆಸರಿನಲ್ಲಿ ಈ ವಿಡಿಯೋ ಮತ್ತೆ ಜನಪ್ರಿಯವಾಗುತ್ತಿದೆ. ಮಹಿಳೆಯರು ಮದುವೆಯಾದ ಬಳಿಕ ಗಂಡ ಹೀಗೆ ಇರಬೇಕು. ಅವರ ಇಷ್ಟ-ಕಷ್ಟ ಇದೆ ಆಗಬೇಕು ಎಂದು ಬಯಸುತ್ತಾರೆ ಎಂಬುದಕ್ಕೆ ಈ ವಿಡಿಯೋ ಸಾಕ್ಷಿ ಎಂದು ಜನರು ಟ್ರೋಲ್​ ಮಾಡುತ್ತಿದ್ದಾರೆ.

ಈ ಹಿಂದೆ ಈ ಸ್ಟೈಲ್​ ಇಷ್ಟವಾಗಿಲ್ಲ ಎಂದು ರಣವೀರ್ ಸಿಂಗ್​​ ಮೀಸೆಗೆ ದೀಪಿಕಾ ಕತ್ತರಿ ಹಾಕಿದ್ದರು. ವಿಪರ್ಯಾಸ ಎನ್ನುವಂತೆ ದೀಪಿಕಾ ಜೊತೆ ಸಪ್ತಪದಿ ತುಳಿಯುವಾಗ ರಣಬೀರ್​ ತಮ್ಮ ಅದೇ ಹಳೆ ಸ್ಟೈಲ್​ನಲ್ಲಿ ರಾಜರಂತೆ ಚಿಗುರು ಮೀಸೆ ಬಿಟ್ಟಿದ್ದಾರೆ.

Comments are closed.