ರಾಷ್ಟ್ರೀಯ

44 ನಿಮಿಷದಲ್ಲಿ 22 ಬಾರಿ ಮೋದಿ ಹೆಸರು ಹೇಳಿದ ರಾಹುಲ್

Pinterest LinkedIn Tumblr


ನರ್ಸಿಂಗ್​ಪುರ: ಕಾಂಗ್ರೆಸ್​ ಅಧ್ಯಕ್ಷನಿಗೆ ಪ್ರಧಾನಿ ಮೋದಿಯನ್ನು ಕಂಡರೆ ಹೆದರಿಕೆ ಅವರು ‘ಮೋದಿ-ಫೋಬಿಯಾ’ ದಿಂದ ಬಳಲುತ್ತಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್​ ಶಾ ವಾಗ್ದಾಳಿ ನಡೆಸಿದರು.

ಮಧ್ಯಪ್ರದೇಶದಲ್ಲಿ ಚುನಾವಣಾ ಪ್ರಚಾರ ನಡೆಸಿ ಮಾತನಾಡಿದ ಅವರು, ರಾಜಕೀಯದಲ್ಲಿ ನಾಲ್ಕು ತಲೆಮಾರುಗಳನ್ನು ಕಂಡ ನೆಹರು ಕುಟುಂಬ ದೇಶಕ್ಕೆ ಏನು ಕೊಡುಗೆ ನೀಡಿದರು ಎಂದು ಪ್ರಶ್ನಿಸಿದರು. ಅವರು ಕೇವಲ ಮೋದಿಯನ್ನು ಪ್ರಧಾನಿ ಹುದ್ದೆಯಿಂದ ಕೆಳಗಿಳಿಸಬೇಕು ಎಂದು ಕೊಂಡಿದ್ದಾರೆ. ಆದರೆ ನಾವು ಬಡತನ, ಅಸುರಕ್ಷತೆ, ವಾಯುಮಾಲಿನ್ಯದಂತಹ ಸಮಸ್ಯೆಗಳನ್ನು ಹೊಡೆದೊಡಿಸಬೇಕು ಎಂದು ಬಯಸುತ್ತೇವೆ ಎಂದರು.

ನಾಲ್ಕು ವರ್ಷಗಳಲ್ಲಿ ಬಿಜೆಪಿ ಸರ್ಕಾರ 129 ಅಭಿವೃದ್ಧಿ ಯೋಜನೆಗಳನ್ನು ಜಾರಿಗೆ ತಂದಿತು. ನೆಹರು ಕುಟುಂಬ ಯಾವ ಅಭಿವೃದ್ಧಿ ನಡೆಸಿದೆ ಎಂದು ಹೇಳಲಿ ಎಂದು ಸವಾಲು ಹಾಕಿದರು.

ಇತ್ತೀಚೆಗೆ ನಡೆದ ಕಾಂಗ್ರೆಸ್​ ಸಮಾವೇಶದಲ್ಲಿ ರಾಹುಲ್​ ಗಾಂಧಿ 44 ನಿಮಿಷದಲ್ಲಿ 22 ಬಾರಿ ಮೋದಿಯ ಹೆಸರನ್ನು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದರು. ನನಗೆ ಆಶ್ಚರ್ಯವಾಗುತ್ತದೆ. ಅವರು ಕಾಂಗ್ರೆಸ್​ ಅಥವಾ ಬಿಜೆಪಿ ಪರ ಪ್ರಚಾರ ನಡೆಸುತ್ತಿದ್ದಾರೆ ಎಂದರು.

ಮಾಜಿ ಪ್ರಧಾನಿ ಮನಮೋಹನ್​ ಸಿಂಗ್​ ಭಾರತವನ್ನು ಜಾಗತಿಕ ಆರ್ಥಿಕತೆಯಲ್ಲಿ 9ನೇ ಸ್ಥಾನದಲ್ಲಿರಿಸಿದ್ದರು. ಆದರೆ ನಾವು 6ನೇ ಸ್ಥಾನಕ್ಕೆ ಭಾರತವನ್ನು ಏರಿಸಿದ್ದೇವೆ ಎಂದರು.

ಇದೇ ವೇಳೆ ಸೇನೆಯ ಸರ್ಜಿಕಲ್​ ದಾಳಿ ಬಗ್ಗೆ ಮಾತನಾಡಿದ ಅವರು, ಉರಿ ಮೇಲೆ ದಾಳಿ ನಡೆಸಿದಾಗ ಜನರು ನಮ್ಮ ಮೇಲೆ ಸಿಟ್ಟಾದರು. ಆದರೆ ನಾವು ನಮ್ಮ ಸೈನಿಕರ ಮೇಲೆ ನಡೆದ ದಾಳಿಗೆ ಪ್ರತೀಕಾರ ತೀರಿಸಿಕೊಂಡೆವು. ಅಮೆರಿಕ, ಇಸ್ರೇಲ್​ ಬಳಿಕ ಸೈನಿಕರ ಸಾವಿಗೆ ಪ್ರತೀಕಾರ ತೀರಿಸಿಕೊಂಡಿದ್ದು ಭಾರತ ಮಾತ್ರ ಎಂದರು.

Comments are closed.