ಮನೋರಂಜನೆ

‘ಇಂದಿನ ಸ್ವೀಟೂ..ನಾಳಿನ ಮೀಟೂ’ ಎಂದ ಬಾಲಿವುಡ್ ನಟಿ

Pinterest LinkedIn Tumblr


ಬಾಲಿವುಡ್​ನ ಚೆಂದುಳ್ಳಿ ಚೆಲುವೆ ನಟಿ ಪ್ರೀತಿ ಜಿಂಟಾ ‘ಮೀಟೂ’ ಅಭಿಯಾನದ ಕುರಿತು ನೀಡಿರುವ ಹೇಳಿಕೆ ವಿರುದ್ದ ವ್ಯಾಪಕ ಟೀಕೆಗಳು ವ್ಯಕ್ತವಾಗಿದೆ. ಮನರಂಜನಾ ವೆಬ್​ಸೈಟ್​ವೊಂದಕ್ಕೆ ನೀಡಿದ ಸಂದರ್ಶನದ ವೇಳೆ ಮೀಟೂ ಅಭಿಯಾನವನ್ನು ವೈಯುಕ್ತಿಕ ಪ್ರಚಾರಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಪ್ರೀತಿ ಆರೋಪಿಸಿದ್ದರು.

ಬಾಲಿವುಡ್​ನಲ್ಲಿ ಮಹಿಳೆಯರಿಗೆ ಸುರಕ್ಷತೆಯಿದ್ದರೂ, ಸಣ್ಣ ಪುಟ್ಟ ಘಟನೆಗಳನ್ನು ದೊಡ್ಡದು ಮಾಡಿ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಇತರೆ ಇಂಡಸ್ಟ್ರೀಗಳಿಗೆ ಹೋಲಿಸಿದರೆ ಸಿನಿಮಾರಂಗದಲ್ಲಿ ಮೀಟೂ ಪ್ರಕರಣ ಕಡಿಮೆಯಿದೆ. ಆದರೆ ಕೆಲವರಿಗೆ ಫೇಮಸ್​ ಆಗುವ ಗೀಳಿನಿಂದ ಸಿನಿರಂಗದಲ್ಲಿ ಮಹಿಳೆಯರು ಸುರಕ್ಷಿತವಲ್ಲ ಎಂಬ ಭಾವನೆ ಮೂಡಿಸುತ್ತಿದ್ದಾರೆ ಎಂದು ಪ್ರೀತಿ ಜಿಂಟಾ ಹೇಳಿದರು.

ಸಮಾಜದಲ್ಲಿರುವ ಲಿಂಗ ತಾರತಮ್ಯ ಬಗ್ಗೆ ಶಾಲಾ ಮಕ್ಕಳಿಗೆ ಶಿಕ್ಷಣ ನೀಡುವ ಅಗತ್ಯತೆ ಇದೆ. ಈ ಮೂಲಕ ಪುರುಷ ಪ್ರಧಾನ ಸಮಾಜದ ಮನಸ್ಥಿತಿಯನ್ನು ಹೋಗಲಾಡಿಸಬಹುದು ಎಂದು ಪ್ರೀತಿ ಅಭಿಪ್ರಾಯಪಟ್ಟರು. ಅಲ್ಲದೆ ನಿಮ್ಮ ಮೇಲೆ ಚಿತ್ರರಂಗದ ವ್ಯಕ್ತಿಗಳಿಂದ ದೌರ್ಜನ್ಯವಾಗಿದೆಯೇ ಎಂಬ ಪ್ರಶ್ನೆಗೆ, ಇಲ್ಲ ಎಂದು ತಿಳಿಸಿದ ವೀರ್ ಝಾರಾ ನಟಿ, ಜನರು ನೀವು ಹೇಗೆ ವರ್ತಿಸುತ್ತೀರಿ ಎಂಬುದನ್ನು ಅವಲಂಭಿಸಿ ನಿಮ್ಮನ್ನು ನಡೆಸಿಕೊಳ್ಳುತ್ತಾರೆ ಎಂದು ತಿಳಿಸಿದರು.

ಇದನ್ನೂ ಓದಿ: MeToo ಆಯ್ತು ಈಗ WeOppose!; ಹೊಸ ಅಭಿಯಾನಕ್ಕೆ ನಾಂದಿ ಹಾಡಿದ ನಂದಿತಾ ಶ್ವೇತಾ

ಇದೇ ವೇಳೆ ಪ್ರೀತಿ ನೀಡಿರುವ ‘ಆಜ್​ ಕಿ ಸ್ವೀಟೂ ಕಲ್​ ಕಿ ಮೀಟೂ'( ಇಂದಿನ ಸ್ವೀಟೂ ನಾಳಿನ ಮೀಟೂ) ಹೇಳಿಕೆ ಭಾರೀ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಪ್ರೀತಿ ಜಿಂಟಾ ಅವರ ಈ ಹೇಳಿಕೆ ವಿರುದ್ದ ಪರ-ವಿರೋಧಗಳು ವ್ಯಕ್ತವಾಗಿದೆ.

Comments are closed.