ಮನೋರಂಜನೆ

ಬಾಲಿವುಡ್ ನಟಿ ನೇಹಾ ಧುಪಿಯಾಗೆ ಮದುವೆಯಾಗಿ 6 ತಿಂಗಳಿಗೆ ಹೆಣ್ಣು ಮಗುವಿಗೆ ಜನನ

Pinterest LinkedIn Tumblr


ಮುಂಬೈ: ಬಾಲಿವುಡ್ ನಟಿ ನೇಹಾ ಧುಪಿಯಾ ಭಾನುವಾರ ಬೆಳಗ್ಗೆ ತಮ್ಮ ಮೊದಲನೇ ಮಗುವಿಗೆ ಜನ್ಮ ನೀಡಿದ್ದಾರೆ.

ನೇಹಾ ಧುಪಿಯಾ ತನ್ನ ಬಹುಕಾಲದ ಗೆಳೆಯ ಅಂಗದ್ ಬೇಡಿ ಜೊತೆ ಮೇ ತಿಂಗಳಲ್ಲಿ ಯಾರಿಗೂ ತಿಳಿಸದೇ ಖಾಸಗಿಯಾಗಿ ನವದೆಹಲಿಯ ಗುರುದ್ವಾರದಲ್ಲಿ ಮದುವೆ ಆಗಿದ್ದರು. ಮದುವೆಯಾಗಿ ಕೆಲವೇ ತಿಂಗಳಲ್ಲಿ ಅಂಗದ್ ತಮ್ಮ ಪತ್ನಿ ನೇಹಾ ಗರ್ಭಿಣಿ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು.

ನೇಹಾ ಹಾಗೂ ಅಂಗದ್ ಗೆಳತಿಯಾದ ಸೋಫಿ ಚೌಧರಿ ಅವರು, ನೇಹಾ ಅವರಿಗೆ ಹೆಣ್ಣು ಮಗು ಜನಿಸಿದೆ ಎಂದು ಮೊದಲು ಶುಭಾಶಯ ತಿಳಿಸಿ ಟ್ವೀಟ್ ಮಾಡಿದ್ದರು. ನೇಹಾ ಮದುವೆಯಾದ ಕೆಲವೇ ತಿಂಗಳಲ್ಲಿ ಅವರು ಗರ್ಭಿಣಿ ಎಂದು ಗಾಸಿಪ್ ಎಬ್ಬಿತ್ತು. ನಂತರ ಇಬ್ಬರು ತಮ್ಮ ಇನ್‍ಸ್ಟಾಗ್ರಾಂನಲ್ಲಿ ನೇಹಾ ಗರ್ಭಿಣಿಯಿರುವ ಫೋಟೋ ಹಾಕಿ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದರು.

ನವದೆಹಲಿಯಲ್ಲಿ ತುಂಬಾ ಸರಳವಾಗಿ ಪೋಷಕರು ಮತ್ತು ಆಪ್ತ ಬಂಧುಗಳು ಸಮ್ಮುಖದಲ್ಲಿ ನೇಹಾ ಹಾಗೂ ಅಂಗಧ್ ಮದುವೆ ನಡೆದಿತ್ತು.

Comments are closed.