
ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ಮುಂದಿನ ಚಿತ್ರ ‘ಫೈಲ್ವಾನ್’ ಚಿತ್ರದ ನ್ಯೂ ಲುಕ್ ವೊಂದನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಒಂದೆಡೆ ನಟ ಸುದೀಪ್ ಅಭಿಮಾನಿಗಳ ಪ್ರತಿಕ್ರಿಯೆಗೆ ಸಿನಿಮಾ ತಂಡ ಖಷಿಕೊಟ್ಟರೇ, ಮತ್ತೊಂದೆಡೆ ಕೆಲವರ ಕಾಮೇಟುಂಗಳಿಂದ ಬೇಸರ ತರಿಸುತ್ತಿದೆ.
ಕಿಚ್ಚ ಸುದೀಪ್ ನಟಿಸಿರುವ ಪೈಲ್ವಾನ್ ಚಿತ್ರದ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ. ಸಿನಿಮಾದ ಸುದೀಪ್ ಲುಕ್ಗೆ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. ಆದರೆ, ಇನ್ನೊಂದೆಡೆ ಪೈಲ್ವಾನ್ ಪೋಸ್ಟರಿನಲ್ಲಿರೋದು ಕಿಚ್ಚ ಸುದೀಪ್ ಬಾಡಿ ಅಲ್ಲ? ಎಂಬ ಬಿಸಿ ಬಿಸಿ ಚರ್ಚೆ ಸಾಮಾಜಿಕ ಜಾಲತಾಣಗಳಲ್ಲಿ ನಡೀತಿದೆ.
ಇನ್ನು ಯಾರದ್ದೋ ಬಾಡಿಗೆ ಸುದೀಪ್ ಫೇಸ್ ಹಾಕಿ ಎಡಿಡ್ ಮಾಡಲಾಗಿದೆ ಎಂದು ಕೆಲ ಚಿತ್ರಪ್ರೇಮಿಗಳು ಕಾಮೇಂಟು ಮಾಡಿದ್ದಾರೆ. ಅಲ್ಲದೇ ನೈಸ್ ಎಡಿಟಿಂಗ್, ನೈಸ್ ಫೋಟೋಶಾಪ್ ಅಂತ ಕಮೆಂಟುಗಳ ಸುರಿಮಳೆಗೈದಿದ್ದಾರೆ ನೆಟ್ಟಿಗರು. ಇದೀಗ ಅಧಿಕೃತವಾಗಿ ಚಿತ್ರತಂಡವೇ ಬಿಡುಗಡೆ ಮಾಡಿರುವ ಪೋಸ್ಟರ್ ಫೇಕ್ ಆಗಿದೆಯಾ ಎಂಬ ಪ್ರಶ್ನೆ ಕಾಡುತ್ತಿದೆ.
ಚಿತ್ರದಲ್ಲಿ ತಮ್ಮ ನೆಚ್ಚಿನ ಫ್ಯಾನ್ಸ್ಗಳ ಬಯಕೆ ಈಡೇರಿಸುವುದು ನನ್ನ ಮೊದಲ ಆದ್ಯತೆಯೆಂದು ಭಾವಿಸಿರುವ ಸುದೀಪ್, ಇಂದು ತಮ್ಮ ಚಿತ್ರದ ನ್ಯೂ ಲುಕ್ ರಿಲೀಸ್ ಮಾಡಿದ್ದಾರೆ. ಈ ನ್ಯೂ ಲುಕ್ನಲ್ಲಿ ಸುದೀಪ್ ಥೇಟ್ ಕುಸ್ತಿ ಪಟುವಿನಂತೆ ಕಾಣಿಸಿಕೊಂಡಿದ್ದಾರೆ ಎಂಬ ಚರ್ಚೆಯೂ ನಡೆಯುತ್ತಿದೆ.
ಇನ್ನೊಂದು ವಿಶೇಷ ಏನಂದ್ರೆ ಇದುವರೆಗೆ ಸಾಕಷ್ಟು ಬಿರುದುಗಳಿಂದ ಕರೆಯಿಸಿಕೊಳ್ಳುತ್ತಿರುವ ಸುದೀಪ್ಗೆ ಈಗ ಚಿತ್ರತಂಡ ಬಾದ್ ಷಾ ಎನ್ನುವ ಹೊಸ ಬಿರುದು ನೀಡಿದೆ. ಹೆಬ್ಬುಲಿ ನಂತರ ಕೃಷ್ಣ ನಿರ್ದೇಶಿಸುತ್ತಿರುವ ಭಾರೀ ಬಜೆಟ್ ನ ಸಿನಿಮಾ ಪೈಲ್ವಾನ್ ಆಗಿದೆ.
Comments are closed.