ರಾಷ್ಟ್ರೀಯ

ಉಗ್ರರಿಂದ ಮೂವರು ನಾಗರೀಕರ ಅಪಹರಣ, ಓರ್ವ ಹತ್ಯೆ!

Pinterest LinkedIn Tumblr


ನವದೆಹಲಿ: ಕಾಶ್ಮೀರದಲ್ಲಿ ಮೂವರು ನಾಗರಿಕರನ್ನು ಉಗ್ರರು ಅಪಹರಿಸಿದ್ದು, ಓರ್ವನನ್ನು ಕ್ರೂರವಾಗಿ ಕೊಂದ ಘಟನೆ ನಡೆದಿದೆ. ದಕ್ಷಿಣ ಕಾಶ್ಮೀರದ ಸೋಫಿಯಾನ್‌ ಜಿಲ್ಲೆ ಮೂಲದ ಮೂವರು ನಾಗರಿಕರನ್ನು ಉಗ್ರರು ಅಪಹರಿಸಿದ್ದು, ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದ ಶಾಹೀದ್‌ ಅಹ್ಮದ್‌ ಗಾನೇ, ಫಾರೂಕ್ ಅಹ್ಮದ್‌, ಹುಜೈಫ್‌ ಅಹ್ಮದ್‌ ಕುಟೈ ಅಪಹರಣಕ್ಕೊಳಗಾದವರು ಎನ್ನಲಾಗಿದೆ.

ದಕ್ಷಿಣ ಕಾಶ್ಮೀರದ ಸೋಫಿಯಾನ್‌ ಜಿಲ್ಲೆಯಲ್ಲಿ ಅಪಹರಿಸಿದ ಉಗ್ರರು ಹುಜೈಫ್‌ ಅಹ್ಮದ್‌ ಕುಟೈ ಎಂಬಾತನನ್ನು ಹತ್ಯಗೈದಿದ್ಧಾರೆ ಎನ್ನಲಾಗಿದೆ. ಧಿಡೀರನೆ ಕಾರಿನಲ್ಲಿ ಬಂದ ಉಗ್ರರು ಬಂದೂಕು ತೋರಿಸಿ ಇವರನ್ನು ಅಪಹರಿಸಿದ್ದಾರೆ. ಈ ಸಂಬಂಧ ಪೊಲೀಸ್​ದ ಠಾಣೆಯಲ್ಲಿ ದೂರು ದಾಖಲಾಗಿದ್ದು, ಬಲಿಪಶುಗಳಿಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ.

ಎರಡು ದಿನಗಳ ಹಿಂದೆಯೂ ಉಗ್ರರಿಂದ ಅಪಹರಣಕ್ಕೊಳಗಾಗಿದ್ದ ಯುವಕನ ಶವ ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ರಾತ್ರೋರಾತ್ರಿ ಪತ್ತೆಯಾಗಿತ್ತು. ಯುವಕನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದ್ದು, ಕೊಲೆಯಾದ ವ್ಯಕ್ತಿಯನ್ನು ಸೋಫಿಯಾ ಜಿಲ್ಲೆಯ ಸಫ್ನಾಗ್ರಿ ನಿವಾಸಿ ನದೀಮ್ ಮಂಜೂರು ಎಂದು ಪೊಲೀಸರು ಗುರುತಿಸಿದ್ದರು.

ಪುಲ್ವಾಮಾ ಜಿಲ್ಲೆಯ ಕಿಲೋರ ಪ್ರದೇಶದಲ್ಲಿ ಶವವನ್ನು ವಶಕ್ಕೆ ಪಡೆದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ‘ರಾತ್ರಿ ವೇಳೆ ನದೀಂ ಮಂಜೂರು ಎಂಬಾತನನ್ನು ಅಪಹರಿಸಿದ್ದ ಉಗ್ರರು ಬಳಿಕ ಹತ್ಯೆಗೈಯ್ಯುವ ಮೂಲಕ ಕ್ರೌರ್ಯ ಮೆರೆದಿದ್ದಾರೆ. ಈ ಕುರಿತು ಪೊಲೀಸರು ಸ್ಥಳದಲ್ಲೇ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಪ್ರಗತಿಯಲ್ಲಿದೆ’ ಎಂದು ಪೊಲೀಸ್‌ ಇಲಾಖೆ ಮೂಲಗಳು ತಿಳಿಸಿವೆ.

Comments are closed.