ಮನೋರಂಜನೆ

ಕೊಂಕಣಿ ನಂತರ ಸಿಂಧಿ ಶೈಲಿಯಲ್ಲಿ ಮಿಂಚಿದ ದೀಪಿಕಾ-ರಣವೀರ್

Pinterest LinkedIn Tumblr


ಬೆಂಗಳೂರು: ದೀಪಿಕಾ ಪಡುಕೋನ್ ಮತ್ತು ರಣವೀರ್ ಸಿಂಗ್ ಯಶಸ್ವಿಯಾಗಿ ಎರಡನೇ ಮದುವೆಯಾಗಿದ್ದಾರೆ..! ಇಟಲಿಯ ಲೇಕ್ ಕೊಮೋದ ವಿಲ್ಲಾವೊಂದರಲ್ಲಿ ನಿನ್ನೆ ಕೊಂಕಣಿ ಸಂಪ್ರದಾಯದಂತೆ ವಿವಾಹವಾಗಿದ್ದ ಈ ಹಾಟ್ ಬಾಲಿವುಡ್ ಸೆಲಬ್ರಿಟಿಗಳು ಇವತ್ತು ಅದೇ ವಿಲ್ಲಾದಲ್ಲಿ ಸಿಂಧಿ ಸಂಪ್ರದಾಯದಂತೆ ನವದಾಂಪತ್ಯಕ್ಕೆ ಅಡಿ ಇಟ್ಟಿದ್ದಾರೆ. ಕರ್ನಾಟಕದ ದೀಪಿಕಾ ಪಡುಕೋನ್ ಅವರು ಕೊಂಕಣಿಯಾದರೆ, ರಣವೀರ್ ಸಿಂಗ್ ಸಿಂಧಿ ಜನಾಂಗಕ್ಕೆ ಸೇರಿದವರು. ಹೀಗಾಗಿ, ಇಬ್ಬರ ಸಂಪ್ರದಾಯದಂತೆ ಎರಡೆರಡು ಬಾರಿ ವಿವಾಹವಾಗುವ ಭಾಗ್ಯ ಅವರದ್ದಾಯಿತು. ನವದಂಪತಿಯು ತಮ್ಮ ವಿವಾಹದ ಫೋಟೋಗಳನ್ನ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.

ನಿನ್ನೆಯ ಕೊಂಕಣಿ ಶೈಲಿಯ ವಿವಾಹ ಸಮಾರಂಭದಲ್ಲಿ ದೀಪಿಕಾ ಪಡುಕೋಣೆ ಅವರು ಕೆಂಪು ಬಣ್ಣದ ಕಾಂಜೀವರಂ ಸೀರೆ ತೊಟ್ಟು ಪಕ್ಕಾ ದಕ್ಷಿಣ ಭಾರತೀಯ ಕಳೆ ಹೊತ್ತಿದ್ದರು. ರಣವೀರ್ ಕೂಡ ಬಿಳಿ ಧೋತಿ ಮತ್ತು ಕುರ್ತಾ ಧರಿಸಿ ಆಕರ್ಷಕವಾಗಿ ಕಾಣಿಸುತ್ತಿದ್ದರು.

ಸಿಂಧಿ ಶೈಲಿಯಲ್ಲಿ ನವದಾಂಪತ್ಯಕ್ಕೆ ಅಡಿ ಇಟ್ಟ ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣ್

ಇವತ್ತಿನ ಸಿಂಧಿ ಶೈಲಿಯ ವಿವಾಹದಲ್ಲಿ ಅವರ ಕೆಂಪು ಬಣ್ಣದ ಉಡುಗೆ ಗಮನ ಸೆಳೆಯಿತು. ದೀಪಿಕಾ ಕೆಂಪು ಬಣ್ಣದ ಲೆಹೆಂಗಾ ತಮ್ಮ ಟ್ರೇಡ್​ಮಾರ್ಕ್ ಸ್ಮೈಲ್ ಮೂಲಕ ಮಿರಮಿರ ಮಿಂಚಿದರು. ಅವರ ಮುಗುಳ್ನುಗೆಯ ಜೊತೆ ಮಿಂಚಿದ್ದು ಅವರ ಎಡಗೈಯಲ್ಲಿ ತೊಟ್ಟಿದ್ದ ವಜ್ರದ ಉಂಗುರ. ರಣವೀರ್ ಸಿಂಗ್ ಕೆಂಪು ಶೆರ್ವಾನಿ ತೊಟ್ಟು ತಮ್ಮ ಮನದನ್ನೆಗೆ ಸರಿಜೋಡಿಯಾದರು.

ಕೊಂಕಣಿ ಶೈಲಿಯಲ್ಲಿ ನ. 14ರಂದು ವಿವಾಹವಾದ ದೀಪಿಕಾ-ರಣವೀರ್ ಜೋಡಿ

ಈ ದೀಪ್​ವೀರ್ ಜೋಡಿ ಇಟಲಿಯಲ್ಲಿ ಮದುವೆಯಾಗಿ ತವರಿಗೆ ವಾಪಸ್ ಬಂದ ಬಳಿಕ ಎರಡು ಔತಣಕೂಟಗಳನ್ನ ಇಟ್ಟುಕೊಂಡಿದ್ದಾರೆ. ಬೆಂಗಳೂರಿನಲ್ಲಿ ನ. 22ರಂದು, ಮುಂಬೈನಲ್ಲಿ ನ. 28ರಂದು ಗ್ರ್ಯಾಂಡ್ ರಿಸಪ್ಷನ್ ಕಾರ್ಯಕ್ರಮಗಳು ನಡೆಯಲಿವೆ.

ರಣವೀರ್ ಅವರ ಇನ್​ಸ್ಟಾಗ್ರಾಂ ಪೋಸ್ಟ್

ಇದೇ ವೇಳೆ, ದೀಪಿಕಾ-ರಣವೀರ್ ಮದುವೆ ಬಗ್ಗೆ ಭಾರತೀಯರು ತೋರಿಸಿದ ಆಸಕ್ತಿ ಈ ಹಿಂದೆ ಬೇರಾವುದೇ ಬಾಲಿವುಡ್ ಸೆಲಬ್ರಿಟಿಗಳ ಮೇಲಿರಲಿಲ್ಲ. ತಮ್ಮ ಮದುವೆಯ ಫೋಟೋವನ್ನು ರಣವೀರ್ ಅವರು ಇನ್ಸ್​ಟಾಗ್ರಾಮ್​ಗೆ ಪೋಸ್ಟ್ ಮಾಡಿದ ಅವರ ಮದುವೆಯ ಫೋಟೋಗೆ ಒಂದೇ ಗಂಟೆಯಲ್ಲಿ 16 ಲಕ್ಷಕ್ಕೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ.

Comments are closed.