ಮನೋರಂಜನೆ

ದೀಪಿಕಾ-ರಣ್‌ವೀರ್‌ ಕಾಂಡೋಮ್ ಬಳಸಬಹುದು ಎಂದವರು ಯಾರು?

Pinterest LinkedIn Tumblr


ಕಾಂಡೋಮ್ ಕಂಪನಿಯೊಂದು ದೀಪಿಕಾ-ರಣ್ ವೀರ್ ಗೆ ಶುಭಾಶಯ ಕೋರಿದೆ. ಡ್ಯುರೆಕ್ಸ್ ಸೋಶಿಯಲ್ ಮೀಡಿಯಾದಲ್ಲಿ ಸದಾ ಕಾರ್ಯನಿರತವಾಗಿರುತ್ತದೆ. ಕೊಂಕಣಿ ಹಾಗೂ ಸಿಂಧಿ ಸಂಪ್ರದಾಯದಂತೆ ಮದುವೆಯಾದವರಿಗೆ ಶುಭಾಶಯ ಹೇಳಿದೆ.

ಮದುವೆಯಾದ ದೀಪಿಕಾ-ರಣ್ ವೀರ್ ನವಜೋಡಿಗೆ ದೇಶ-ವಿದೇಶದಿಂದ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿವೆ. ಡ್ಯುರೆಕ್ಸ್ ಕಾಂಡೋಮ್​ ಕಂಪೆನಿಯು ಹೊಸದಾಗಿ ಮದುವೆಯಾದ ದಂಪತಿಗೆ ವಿಭಿನ್ನವಾಗಿ ಅಭಿನಂದಿಸಿದೆ. ‘ದೀಪಿಕಾ-ರಣವೀರ್ ಈಗ ಅಧಿಕೃತವಾಗಿ ಕಾಂಡೋಮ್ ಬಳಸಬಹುದು’ ಎಂದು ಟ್ವೀಟ್​ ಮಾಡಿದೆ.

ಸುಮಾರು 5 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿ ದಾಂಪತ್ಯಕ್ಕೆ ಕಾಲಿರಿಸಿದೆ. ಈ ಸ್ಟಾರ್ ಜೋಡಿ ಮದುವೆಗೆ ಕುಟುಂಬಸ್ಥರು, ತಾರೆಯರಿಗಷ್ಟೆ ಆಹ್ವಾನ ನೀಡಲಾಗಿತ್ತು. ಮೊಬೈಲ್ ಬಳಕೆ ಹಾಗೂ ಉಡುಗೊರೆಗಳಿಗೆ ಪ್ರವೇಶ ಇಲ್ಲ ಎಂದು ಮೊದಲೆ ತಿಳಿಸಲಾಗಿತ್ತು. ಅಲ್ಲದೆ ಮದುವೆ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡದಂತೆ ಹೇಳಲಾಗಿತ್ತು.

ದೀಪಿಕಾಗೆ ಬೆಂಗಳೂರಿನಲ್ಲಿ ಹಲವು ಮಂದಿ ಆಪ್ತರಿರುವ ಕಾರಣ ನವೆಂಬರ್ 21 ರಂದು ಬೆಂಗಳೂರಲ್ಲಿ ಆರತಕ್ಷತೆ ನಡೆಯಲಿದೆ. ಲೀಲಾ ಪ್ಯಾಲೇಸ್ ನಲ್ಲಿ ಇಟಾಲಿಯನ್ ರೆಸ್ಟೋರೆಂಟ್ ಆಯ್ಕೆ ಇರುವುದು ಮೊದಲ ಕಾರಣ. ದೀಪಿಕಾ ಅವರಿಗೂ ಈ ಹೊಟೇಲ್ ಮೊದಲಿನಿಂದಲೂ ಅಚ್ಚು-ಮೆಚ್ಚು. ದೀಪಿಕಾ ತಾಯಿ ಸಹ ಈ ರೆಸ್ಟೊರೆಂಟ್ ನ ರುಚಿ ಸವಿದಿದ್ದಾರೆ. ನವೆಂಬರ್ 20ಕ್ಕೆ ಹೊಟೆಲ್ ಪ್ರವೇಶ ಮಾಡುವ ಕುಟುಂಬ 22ಕ್ಕೆ ನಿರ್ಗಮಿಸಲಿದೆ. 21 ರಂದು ಆರತಕ್ಷತೆ ಹಮ್ಮಿಕೊಳ್ಳಲಾಗಿದೆ.

Comments are closed.