ಬೆಂಗಳೂರು: ನಟಿ ಶ್ರುತಿ ಹರಿಹರನ್ ದಾಖಲಿಸಿದ್ದ MeToo ಎಫ್ಐಆರ್ ರದ್ದು ಕೋರಿ ನಟ ಅರ್ಜುನ್ ಸರ್ಜಾ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಮುಂದೂಡಿದೆ.
ಇಂದು [ಶುಕ್ರವಾರ] ಹೈಕೋರ್ಟ್ನ ಏಕ ಸದಸ್ಯ ಪೀಠದಲ್ಲಿ ನ್ಯಾಯಮೂರ್ತಿ ಪಿ.ದಿನೇಶ್ ಕುಮಾರ್ ನೇತೃತ್ವದಲ್ಲಿ ವಿಚಾರಣೆ ನಡೆದಿದ್ದು, ನಟ ಅರ್ಜುನ್ ಸರ್ಜಾ ಪರ ಹಿರಿಯ ವಕೀಲರಾದ ಬಿ.ವಿ.ಆಚಾರ್ಯ ಹಾಗೂ ನಟಿ ಶ್ರುತಿ ಹರಿಹರನ್ ಪರ ಬಾಲನ್ ವಾದ ಮಂಡಿಸಿದರು.
ಬಿ.ವಿ.ಆಚಾರ್ಯ ಅವರ ವಾದ ಆಲಿಸಿದ ಕೋರ್ಟ್, ನವೆಂಬರ್ 14ಕ್ಕೆ ಮುಂದೂಡಿತು. ಅಷ್ಟೇ ಅಲ್ಲದೇ ಮುಂದಿನ ವಿಚಾರಣೆವರೆಗೂ ಆರೋಪಿಯನ್ನ [ಅರ್ಜುನ್ ಸರ್ಜಾ] ಬಂಧಿಸದಂತೆ ಪೊಲೀಸರಿಗೆ ಹೈಕೋರ್ಟ್ ಆದೇಶಿಸಿದೆ.
ಶ್ರುತಿ ಹರಿಹರನ್ ಅವರು ಅರ್ಜುನ್ ಸರ್ಜಾ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದನ್ನು ರದ್ದು ಕೋರಿ ಅರ್ಜುನ್ ಸರ್ಜಾ ಹೈಕೋರ್ಟ್ ಮೇಟ್ಟಿಲೇರಿದ್ದಾರೆ.
ಎಲ್ಲಾ ವಿವಾದ ಅಕ್ಟೋಬರ್ 20 ರಿಂದ ಆರಂಭವಾಗಿದ್ದು, ಈ ಪ್ರಕರಣದಲ್ಲಿ ಅರ್ಜುನ್ ಸರ್ಜಾಗೆ ಜಯವಾಗುತ್ತಾ? ಅಥವಾ ಶೃತಿ ಹರಿಹರನ್ ಮೇಲುಗೈ ಸಾಧಿಸುತ್ತಾರಾ ಎನ್ನುವುದನ್ನ ಕಾದು ನೋಡಬೇಕಿದೆ.
Comments are closed.