ರಾಷ್ಟ್ರೀಯ

ರಾಮಮಂದಿರಕ್ಕಾಗಿ 1999ರ ಮಾದರಿ ಹೋರಾಟ: ಆರೆಸ್ಸೆಸ್

Pinterest LinkedIn Tumblr


ನವದೆಹಲಿ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸಲು ಅಗತ್ಯಬಿದ್ದಲ್ಲಿ 1999 ರ ಮಾದರಿಯ ಹೋರಾಟ ರೂಪಿಸಲು ಸಿದ್ಧರಿದ್ದೇವೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರೆಸ್ಸೆಸ್) ಎಚ್ಚರಿಕೆ ನೀಡಿದೆ. ಕೇಂದ್ರ ಸರ್ಕಾರ ಮಂದಿರ ನಿರ್ಮಾಣದ ಬಗ್ಗೆ ಯೋಚಿಸಬೇಕು. ನಾವು ಬೇಕಾದ್ದಲ್ಲಿ ಮತ್ತೊಮ್ಮೆ ಹೋರಾಟ ರೂಪಿಸಲು ಸಿದ್ಧ ಎಂದು ಆರೆಸ್ಸೆಸ್ ಹೇಳಿದೆ.

ಈ ಹಿಂದೆ 1992 ರಲ್ಲಿ ಆರೆಸ್ಸೆಸ್ ಸಂಘಪರಿವಾರ ದೇಶಾದ್ಯಂತ ರಥಯಾತ್ರೆಯನ್ನು ಕೊಂಡೊಯ್ಯುವ ಮೂಲಕ ಹಿಂದೂ ಸಮಾಜವನ್ನು ಜಾಗೃತಿಗೊಳಸಿತ್ತು. ನಾವು ಅಂದೇ ಹಿಂದೂ ಧರ್ಮದ ಮಹತ್ವವನ್ನು ದೇಶಕ್ಕೆ ಸಾರಿದ್ದೇವೆ. ಇದೀಗ ಮತ್ತೊಮ್ಮೆ ಅಯೋಧ್ಯೆಯಲ್ಲಿ ಮಂದಿರ ಕಟ್ಟಲು ಅವಶ್ಯಕತೆಯಿದ್ದರೆ ಅದೇ ಮಾದರಿಯ ಬೃಹತ್​​ ಹೋರಾಟವನ್ನು ರೂಪಿಸುತ್ತೇವೆ ಎಂದು ಆರೆಸ್ಸೆಸ್ ತಿಳಿಸಿದೆ.

ಭಾರತ ಜನತಾ ಪಕ್ಷದ ಹಿರಿಯ ನಾಯಕ ಎಲ್​​ಕೆ ಅಡ್ವಾನಿ ಅವರ ನೇತೃತ್ವದಲ್ಲಿ ನಡೆದ ರಥಯಾತ್ರೆಯ ಸಂದರ್ಭದಲ್ಲಿ ದೇಶಕ್ಕೆ ರಾಮಂದಿರ ಬಗೆಗಿನ ಮಹತ್ವವನ್ನು ಸಾರಲಾಗಿತ್ತು. ರಥೆಯಾತ್ರೆ ಕೈಗೊಂಡ ಬಳಿಕವೇ ಮಂದಿರ ನಿರ್ಮಾಣ ವಿಚಾರ ಮುನ್ನಲೆಗೆ ಬಂತು. ದೇಶದ ಹಿಂದೂ ಸಮಾಜವೂ ಮಂದಿರ ನಿರ್ಮಿಸಲು ಉಗ್ರ ಹೋರಾಟ ಕೈಗೊಳ್ಳಲು ಅಂದಿನ ಆರೆಸ್ಸೆಸ್ ಶ್ರಮ ಸಹಕಾರಿಯಾಗಿತ್ತು ಎನ್ನುತ್ತಾರೆ ಸಂಘದ ಮುಖಂಡರು.

ಇನ್ನು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಪ್ರಕರಣದಲ್ಲಿ ಸುಪ್ರೀಂಕೋರ್ಟ್​​ ನಡೆ ಹಿಂದೂ ಸಮಾಜಕ್ಕೆ ಭಾರೀ ಬೇಸರ ತರಿಸಿದೆ. ನಮ್ಮ ಭಾವನೆಗಳಿಗೆ ಧಕ್ಕೆಯಾಗಿದೆ. ರಾಮಮಂದಿರವನ್ನು ಭಾರತದಲ್ಲಿ ಅಲ್ಲದೇ ಪಾಕಿಸ್ತಾನದಲ್ಲಿ ಕಟ್ಟಲು ಸಾಧ್ಯವೇ ಎಂದು ಪರಿವಾರದ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ಧಾರೆ. ಜೊತೆಗೆ ಸುಪ್ರೀಂಕೋರ್ಟ್​ ಹಿಂದೂ ಸಮಾಜದಪರ ತೀರ್ಪು ನೀಡಬೇಕೆಂದು ಆಗ್ರಹಿಸಿದೆ.

ಈ ಹಿಂದೆಯೇ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಅಲಹಾಬಾದ್ ಹೈಕೋರ್ಟ್ ತೀರ್ಪೊಂದನ್ನು ನೀಡಿದೆ. ಈ ತೀರ್ಪಿನ ವಿರುದ್ಧವಾಗಿ ಈಗಾಗಲೇ ಸಲ್ಲಿಸಲಾದ ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್ ವಿಚಾರಣೆ ನಡೆಸಬೇಕಿದೆ. ವಿಚಾರಣೆ ನಡೆಸಿ ಒಂದು ಮಹತ್ವದ ತೀರ್ಪು ನೀಡಬೇಕಿದೆ ಎನ್ನಲಾಗಿದೆ.

ಏನಿದು ಕೇಸ್​​: ಒಂದು ಕಾಲದಲ್ಲಿಮೊಘಲ್ ದೊರೆ ಬಾಬರ್ ಅವರು ಅಯೋಧ್ಯಾದಲ್ಲಿ 1528ರಲ್ಲಿ ಬಾಬ್ರಿ ಮಸೀದಿ ನಿರ್ಮಿಸಿದ್ದರು. ಆದರೆ, ಹಿಂದೂ ಸಂಘಟನೆಗಳು ಡಿಸೆಂಬರ್ 06, 1992 ರಂದು ಬಾಬ್ರಿ ಮಸೀದಿಯನ್ನು ಕೆಡವಿದರು ಎಂಬ ಆರೋಪ ಕೇಳಿ ಬಂದಿದೆ. ಹೀಗಾಗಿ ಈ ವಿವಾದಿತ ಸ್ಥಳದಲ್ಲಿ ರಾಮ ಮಂದಿರ ನಿರ್ಮಿಸಲು ಹಿಂದೂಪರ ಸಂಘಟನೆಗಳು ಮುಂದಾಗಿದ್ದು, ಇದಕ್ಕೆ ಮುಸ್ಲಿಂ ಸಂಘಟನೆಗಳು ವಿರೋಧ ವ್ಯಕ್ತಪಡಿಸುತ್ತಿವೆ.

ಅಲಹಬಾದ್​​ ಹೈಕೋರ್ಟ್​​ ತೀರ್ಪು: ಈ ಪ್ರಕರಣಕ್ಕೆ ಸಂಬಂಧಿಸಿದಂತೆ 2010 ರಲ್ಲಿ ಅಯೋಧ್ಯೆ ಜಮೀನನ್ನು ಮೂರು ಭಾಗಗಳಾಗಿ ವಿಂಗಡಿಸಿ ಎಂದು ಅಲಹಾಬಾದ್ ಹೈಕೋರ್ಟ್ ತೀರ್ಪು ನೀಡಿತ್ತು. ಅಲ್ಲದೇ ಅಯೋಧ್ಯೆಯಲ್ಲಿನ ವಿವಾದಿತ ಜಾಗ(2.77 ಎಕರೆ)ದ ಮೇಲೆ ಹಿಂದೂ(ರಾಮ್ ಲಲ್ಲಾ), ಮುಸ್ಲಿಂ(ಸುನ್ನಿ ವಕ್ಫ್ ಮಂಡಳಿ) ಹಾಗೂ ನಿರ್ಮೋಹಿ ಅಖಾರಕ್ಕೆ ಸಮಾನವಾದ ಅಧಿಕಾರವಿದೆ ಎಂದು ಹೈಕೋರ್ಟ್ ತೀರ್ಪು ನೀಡಿತ್ತು. ಆದರೆ ಈ ತೀರ್ಪನ್ನು ವಿರೋಧಿಸಿ ಹಿಂದೂಪರ ಸಂಘಟನೆಗಳು ಸುಪ್ರೀಂಕೋರ್ಟ್​​ಗೆ ಮೇಲ್ಮನವಿ ಸಲ್ಲಿಸಿದ್ಧಾರೆ.

Comments are closed.