ಮನೋರಂಜನೆ

“ಮೀಟೂ” ಅಭಿಯಾನವನ್ನು ಬೆಂಬಲಿಸಿ ತಮ್ಮ ನಿರ್ಮಾಣ ಸಂಸ್ಥೆಯ ಮುಂದಿನ ಚಿತ್ರ ನಿರ್ಮಾಣ ಕೈಬಿಟ್ಟ ಅಮೀರ್ ಖಾನ್!

Pinterest LinkedIn Tumblr

ನವದೆಹಲಿ: ಬಾಲಿವುಡ್ ಮೇರು ನಟರಲ್ಲಿ ಒಬ್ಬರಾದ ಆಮೀರ್​ ಖಾನ್​ ದೇಶದೆಲ್ಲೆಡೆ ಸದ್ದು ಮಾಡುತ್ತಿರುವ “ಮೀಟೂ” ಅಭಿಯಾನವನ್ನು ಬೆಂಬಲಿಸಿ ತಮ್ಮ ನಿರ್ಮಾಣ ಸಂಸ್ಥೆಯ ಮುಂದಿನ ಯೋಜನೆ ಕೈಬಿಟ್ಟಿದ್ದಾರೆ.

ನಿರ್ದೇಶಕ ಸುಭಾಷ್​ ಕಪೂರ್​ ಸಾರಥ್ಯದಲ್ಲಿ ಗುಲ್ಶನ್​ ಕುಮಾರ್​ ಜೀವನಾಧಾರಿತ ಚಿತ್ರ ನಿರ್ಮಾಣಕ್ಕೆ ಕೈಹಾಕಿದ್ದ ನಟ ಈಗ ಈ ಯೋಜನೆ ಕೈಬಿಟ್ಟಿದ್ದಾಗಿ ಘೋಷಿಸಿದ್ದಾರೆ. ಸುಭಾಷ್​ ಕಪೂರ್ ವಿರುದ್ಧ ನಟಿ ಗೀತಿಕಾ ತ್ಯಾಗಿ ಲೈಂಗಿಕ ಕಿರುಕುಳ ಆರೋಪ ಮಾಡಿದ್ದ ಹಿನ್ನೆಲೆಯಲ್ಲಿ ಅಮೀರ್ ಪತ್ನಿ ಕಿರಣ್​ ರಾವ್​ ತಾವು “ಮೀಟೂ” ಚಲವಳಿಯನ್ನು ಬೆಂಬಲಿಸಿ ತಮ್ಮ ಮುಂದುಇನ ಚಿತ್ರ ನಿರ್ಮಾಣವನ್ನು ಸ್ಥಗಿತಗೊಳಿಸಿದ್ದೇವೆ ಎಂದು ಹೇಳಿದ್ದಾರೆ.

ಈ ಕುರಿತಂತೆ ನಟ ಅಮೀರ್ ಟ್ವಿಟ್ಟರ್ ನಲ್ಲಿ ಸ್ಪಷ್ಟನೆ ನೀಡಿದ್ದು ಲೈಂಗಿಕ ಕಿರುಕುಳ ಮತ್ತು ಅಸಭ್ಯ ವರ್ತನೆ ಸಹಿಸಲು ಸಾಧ್ಯವಿಲ್ಲ, ನಾನು ನಿರ್ಮಾಣ ಮಾಡಲು ಉದ್ದೇಶಿಸಿದ್ದ ಚಿತ್ರದಲ್ಲಿ ಕೆಲಸ ಮಾಡುವ ಓರ್ವ ವ್ಯಕ್ತಿಯ ಮೇಲೆ ಇತೀಚೆಗೆ ಲೈಂಗಿಕ ಕಿರುಕುಳ ಆರೋಪ ಕೇಳಿ ಬಂದಿದೆ. ಹಿಗಾಗಿ ಣಾನು ನನ್ನ ಉದ್ದೇಶಿಸ್ತ ಚಿತ್ರ ನಿರ್ಮಾಣವನ್ನು ಕೈಬಿಡುತ್ತಿದ್ದೇನೆ ಎಂದಿದ್ದಾರೆ.

ಅಮೀರ್ ಖಾನ್ ಅವರ ಈ ನಿರ್ಧಾರವನ್ನು ಗೀತಾ ತ್ಯಾಗಿ ಸ್ವಾಗತಿಸಿದ್ದು “ಇದು ಶ್ಲಾಘನೀಯವಾಗಿದೆ ಮತ್ತು ನಾವು ಬಯಸುವ ರೀತಿಯ ಬೆಂಬಲ ಇದರಿಂದ ಸಿಗಲಿದೆ. ಇನ್ನೂ ಹೆಚ್ಚು ಹೆಚ್ಚು ಮಹಿಳೆಯರು ತಮಗಾದ ಅನುಭವವನ್ನು ಧೈರ್ಯವಾಗಿ ಹೇಳೀಕೊಳ್ಳಬಹುದು” ಎಂದು ಟ್ವೀಟ್ ಮಾಡಿದ್ದಾರೆ.

Comments are closed.