ಕೌಲಾಲ್ಂಪುರ: ಚೀನಾವು ವಿಶ್ವದ ಅತಿದೊಡ್ಡ ಜನಸಂಖ್ಯೆ ಮತ್ತು ಎರಡನೆಯ ಅತಿದೊಡ್ಡ ಆರ್ಥಿಕತೆಯನ್ನು ಹೊಂದಿರಬಹುದು, ಆದರೆ ಅವರಿನ್ನೂ ಕ್ರಿಕೆಟ್ ಕೂಸುಗಳೇ ಎನ್ನುವುದು ಮತ್ತೆ ಸಾಬೀತಾಗಿದೆ. ನೇಪಾಳದೆದುರು ಹೀನಾಯವಾಗಿ ಸೋಲುವ ಮೂಲಕ ಇದು ಇನ್ನೊಮ್ಮೆ ಸಾಬೀತಾಗಿದೆ.
ಮಲೇಷಿಯಾದಲ್ಲಿ ನಡೆದ ವಿಶ್ವಕಪ್ ಟ್ವೆಂಟಿ 20 ಅರ್ಹತಾ ಸುತ್ತಿನಲ್ಲಿ ಚೀನಾ ಕೇವಲ 26 ರನ್ ಗಳಿಸುವಷ್ಟರಲ್ಲಿ ಸರ್ವಪತನವನ್ನು ಕಂಡಿದೆ.ನೇಪಾಳವು ಒಟ್ಟು 11 ಬಾಲ್ ಗಳಲ್ಲಿ ಚೀನಾವನ್ನು ಸೋಲಿನ ದಡ ಮುಟ್ಟಿಸಿದೆ.
ಪಂದ್ಯಾವಳಿಯಲ್ಲಿ ಚೀನಾದ ಪರ ಇದುವೇ ಕಳಪೆ ಪ್ರದರ್ಶನವೇ ಎಂದರೆ ಅಲ್ಲ, ಇದಕ್ಕೆ ಮುನ್ನ ಚೀನಾ ಥಾಯ್ ಲ್ಯಾಂಡ್, ಭೂತಾನ್ ಹಾಗೂ ಮ್ಯಾನ್ಮಾರ್ ಗಳೆದುರಿಗೆ ಸಹ ಪರಾಜಿತವಾಗಿದೆ. ಅದೂ ಕೂಡ ಆಯಾ ತಂಡಗಳು ಕ್ರಮವಾಗಿ 35, 45 ಹಾಗೂ 48 ರನ್ ಗಳಿಸಿದ್ದಾಗಲೂ ಚೀನಾಗೆ ಅವುಗಳನ್ನು ಎದುರಿಸಲಾಗಲಿಲ್ಲ.
ಟಿ20 ಇತಿಹಾಸದಲ್ಲಿ 2016 ರಲ್ಲಿ ಶ್ರೀಲಂಕಾ ವಿರುದ್ಧ ಮೂರು ವಿಕೆಟ್ ನಷ್ಟಕ್ಕೆ ಆಸ್ಟ್ರೇಲಿಯಾ 263 ರನ್ ಗಳಿಸಿದ್ದು ಇದುವರೆಗಿನ ಸಾಧನೆಯಾಗಿದ್ದು ಚೀನಾ ಈ ಮಟ್ಟಕ್ಕೆ ಬರಲು ಇನ್ನಷ್ಟು ವರ್ಷಗಳ ಪ್ರಯತ್ನ ನಡೆಸಬೇಕು.
ನೇಪಾಳ ವಿರುದ್ಧದ ಪಂದ್ಯದಲ್ಲಿ ಚೀನಾ ಪರವಾಗಿ ಆರಂಭಿಕ ಬ್ಯಾಟ್ಸ್ಮನ್ ಯಾನ್ ಹಾಂಗ್ಜಿಯಾಂಗ್ ಗರಿಷ್ಠ 11 ರನ್ ಗಳಿಸಿಕೊಟ್ಟರು. ಇದಲ್ಲದೆ ಒಂಬತ್ತು ಹೆಚ್ಚುವರಿ ರನ್ ಗಳು ಚೀನಾಗೆ ದೊರೆತದ್ದು ಅವರಿಗೆ ಸಾಕಷ್ಟು ಲಾಭವಾಗಿ ಪರಿಣಮಿಸಿದೆ. ಲ್ಲದೆ ಐಪಿಎಲ್ ಬೌಲರ್ ಆಗಿರುವ ಸಂದೀಪ್ ಲಮಿಖಾನೆ ನಾಲ್ಕು ರನ್ ಗಳಿಗೆ ಮೂರು ವಿಕೆಟ್ ಕಬಳಿಸಿ ಮೆರೆದಿದ್ದಾರೆ.
ಎಂಟು ಚೀನಾ ಆಟಗಾರರ ಪೈಕಿ ಓರ್ವರಾದ ಕುನ್ ಟಿಯಾನ್ಸನ್ಡಕ್ ಔಟಾದರೆ ನೇಪಾಳದ ಬಿನೋದ್ ಭಂಡಾರಿ 24 ರನ್ ಸಿಡಿಸಿದರೆ ತಂಡವು ಒಂದೇ ಒಂದು ವಿಕೆಟ್ ನಷ್ಟವಿಲ್ಲದೆ 29 ರನ್ ಗಳಿಸಿ ವಿಜಯವಾಗಿದೆ.
ಚೀನಾ ಕ್ರಿಕೆಟ್ ಮಂಡಳಿಯು ಅತ್ಯಂತ ಚಿಕ್ಕದಾದ ಇತಿಹಾಸವನ್ನು ಹೊಂದಿದೆ. ಚೀನಾವು ಏಷ್ಯನ್ ಗೇಮ್ಸ್ 2010ರಲ್ಲಿ ಪ್ರಥಮ ಬಾರಿಗೆ ಅಂತರಾಷ್ಟ್ರೀಯ ಮಟ್ಟದ ಪಂದ್ಯಗಳಲ್ಲಿ ಪಾಲ್ಗೊಂಡಿದೆ.
Comments are closed.