ಮನೋರಂಜನೆ

ಕೈ ಮೇಲೆ ಸುಮಲತಾ ಹಚ್ಚೆ ಹಾಕಿಸಿಕೊಂಡ ಅಜಯ್‌

Pinterest LinkedIn Tumblr


ಅಜಯ್‌ ರಾವ್‌ ಮತ್ತು ಸುಮಲತಾ ಅಂಬರೀಷ್‌ ‘ತಾಯಿಗೆ ತಕ್ಕ ಮಗ’ ಸಿನಿಮಾದಲ್ಲಿ ಒಟ್ಟಾಗಿ ನಟಿಸುತ್ತಿದ್ದಾರೆ. ಈ ಸಿನಿಮಾಗಾಗಿಯೇ ಅಜಯ್‌ ತಮ್ಮ ಕೈ ಮೇಲೆ ಸುಮಲತಾ ಅವರ ಹಚ್ಚೆಯನ್ನು ಹಾಕಿಸಿಕೊಂಡಿದ್ದಾರೆ. ಇದೊಂದು ತಾಯಿ ಮತ್ತು ಮಗನ ಬಾಂಧವ್ಯವನ್ನು ಹೊಂದಿರುವ ಸಿನಿಮಾವಾಗಿದ್ದು, ಶಶಾಂಕ್‌ ನಿರ್ದೇಶನದಲ್ಲಿ ಚಿತ್ರ ಮೂಡಿ ಬಂದಿದೆ.

‘ತಾಯಿಗೆ ತಕ್ಕ ಮಗನೇ ಆಗಿರುತ್ತಾನೆ ಕಥಾ ನಾಯಕ. ಹಾಗಾಗಿ ಅವನಿಗೆ ತಾಯಿಯೇ ಸರ್ವಸ್ವ. ಈ ಕಾರಣಕ್ಕಾಗಿಯೇ ಹಚ್ಚೆ ಹಾಕಿಸಿಕೊಂಡಿರುತ್ತಾನೆ. ಇದು ಕಥೆಯ ಭಾಗವಾಗಿ ಬರುತ್ತದೆ. ಅವನು ತನ್ನ ತಾಯಿಯನ್ನು ಎಷ್ಟು ಪ್ರೀತಿಸುತ್ತಾನೆ ಎನ್ನುವುದನ್ನು ಸಿನಿಮಾದಲ್ಲಿಯೇ ನೋಡಬೇಕು’ ಅಂತಾರೆ ನಿರ್ದೇಶಕ ಶಶಾಂಕ್‌.

ಅಜಯ್‌ ಇದೇ ಮೊದಲ ಬಾರಿಗೆ ಹೊಸ ಬಗೆಯ ಪಾತ್ರ ಮಾಡಿದ್ದಾರೆ. ಇವರಿಗೆ ನಾಯಕಿಯಾಗಿ ಆಶಿಕಾ ರಂಗನಾಥ್‌ ಪಾತ್ರ ನಿರ್ವಹಿಸಿದ್ದಾರೆ.

Comments are closed.