ಮನೋರಂಜನೆ

ಮಹಾರಾಷ್ಟ್ರ ನಂತರ ಹೈದ್ರಾಬಾದ್​ನಲ್ಲೂ ಮಲ್ಟಿಪ್ಲೆಕ್ಸ್​ಗಳಿಗೆ ಕಡಿವಾಣ!

Pinterest LinkedIn Tumblr


ಹೈದ್ರಾಬಾದ್: ಎಂಆರ್​ಪಿ ಬೆಲೆಗಿಂತ ಹೆಚ್ಚಿನ ಬೆಲೆಗೆ ಪ್ಯಾಕ್ಟ್​ ಸರಕುಗಳನ್ನ ಮಾರಾಟ ಮಾಡಿದರೆ ಕಠಿಣ ಕ್ರಮ ಜರುಗಿಸುವುದಾಗಿ ತೆಲಂಗಾಣ ಸರ್ಕಾರ, ಮಲ್ಟಿಪ್ಲೆಕ್ಸ್ ಮತ್ತು ಥಿಯೇಟರ್​ಗಳಿಗೆ ಕಠಿಣ ಆದೇಶ ಮಾಡಿದೆ.

ಮಲ್ಟಿಪ್ಲೆಕ್ಸ್ ಮತ್ತು ಥಿಯೇಟರ್ ಮಾಲೀಕರು, ಕ್ಯಾಟೀನ್ ಅಸೋಸಿಯೇಶನ್ ಸದಸ್ಯರ ಜೊತೆ ಸಭೆ ನಡೆಸಿದ ಕಾನೂನು ಇಲಾಖೆ ಈ ನಿರ್ಧಾರ ಯಾವುದೇ ತಿಂಡಿಯನ್ನ ಎಂ್​ಆರ್​ಪಿ ಬೆಲೆಗೆ ಮಾರಾಟ ಮಾಡುವಂತೆ ಕಟ್ಟಪ್ಪಣೆ ಮಾಡಿದೆ. ಸೆಪ್ಟೆಂಬರ್ 1ರಿಂದ ಆಹಾರದ ಪೊಟ್ಟಣಗಳ ಮೇಲೆ ಬೆಲೆ ಮುದ್ರಿಸುವುದು ಕಡ್ಡಾಯ ಮಾಡಿ ಆದೇಶಿಸಲಾಗಿದೆ.

ಎಂಆರ್​ಪಿ ಬೆಲೆಗಿಂತಲೂ ಅಧಿಕ ಬೆಲೆ ಮಾರಾಟ ಮಾಡುವುದು ಕಾನೂನು ಬಾಹಿರ. ಪ್ಯಾಕಿಂಗ್ ಮಾಡದ ಆಹಾರಗಳಾದ ಪಾಪ್ ಕಾರ್ನ್, ಐಸ್ ಕ್ರೀಂನಂತಹ ಪದಾರ್ಥಗಳನ್ನ ಸ್ಮಾಲ್, ಮೀಡಿಯಂ, ಜಂಬೋ ಮಾದರಿಯಲ್ಲಿ ಮಾರುವಂತಿಲ್ಲ. ಅಳತೆ ಮತ್ತು ತೂಕ ಫಲಕಗಳಲ್ಲಿ ಕಾಣುವಂತಿರಬೇಕು ಎಂದು ಆದೇಶಿಸಲಾಗಿದೆ.

ಇದೇ 24ರವರೆಗೆ ಆಹಾರ ಪದಾರ್ಥಗಳ ಮೇಲೆ ಬೆಲೆ ಮತ್ತು ತೂಕದ ಸ್ಟಿಕರ್ ಹಾಕಲು ಅವಕಾಶವಿದೆ. ಸೆಪ್ಟೆಂಬರ್ 1ರ ಬಳಿಕ ಕಡ್ಡಾಯವಾಗಿ ಪೊಟ್ಟಣಗಳ ಮೇಲೆ ಬೆಲೆ ಮತ್ತು ಅಳತೆಯನ್ನ ಮುದ್ರಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಇತ್ತೀಚೆಗೆ ತಾನೆ, ಮಹಾರಾಷ್ಟ್ರ ಸರ್ಕಾರ ಮಲ್ಟಿಪ್ಲೆಕ್ಸ್​ಗಳಿಗೆ ಮನೆಯ ಆಹಾರ ಕೊಂಡೊಯ್ಯಲು ಅವಕಾಶ ಕಲ್ಪಿಸಿ ಆದೇಶ ನೀಡಿತ್ತು. ಜೊತೆಗೆ ದುಬಾರಿ ಬೆಲೆಗೆ ಆಹಾರ ಪದಾರ್ಥಗಳ ಮಾರಾಟಕ್ಕೂ ಸದ್ಯದಲ್ಲೇ ಕಡಿವಾಣ ಹಾಕುವುದಾಗಿ ಸರ್ಕಾರ ತಿಳಿಸಿತ್ತು. ಇದೀಗ, ತೆಲಂಣಗಾಣ ಸರ್ಕಾರ ಸಹ ಅದೇ ಹಾದಿಯಲ್ಲಿ ತೀರ್ಮಾನ ಕೈಗೊಂಡಿದೆ. ಕರ್ನಾಟಕದಲ್ಲೂ ಮಲ್ಟಿಪ್ಲೆಕ್ಸ್​ಗಳಲ್ಲಿ ಆಹಾರ ಪದಾರ್ಥಗಳನ್ನ ದುಬಾರಿ ಬೆಲೆಗೆ ಮಾರಲಾಗುತ್ತಿದ್ದು, ಸರ್ಕಾರ ಈ ಬಗ್ಗೆ ಕ್ರಮಕ್ಕೆ ಮುಂದಾಗಬೇಕಿದೆ.

Comments are closed.