ರಾಷ್ಟ್ರೀಯ

ಸರಗಳ್ಳರನ್ನು ಹಿಡಿದರೆ 50,000 ಬಹುಮಾನ!

Pinterest LinkedIn Tumblr


ಚನ್ನೈ: ತಮಿಳುನಾಡಿನ ಶಾಸಕರೊಬ್ಬರು ತನ್ನ ಕ್ಷೇತ್ರದಲ್ಲಿ ಸರಗಳ್ಳತನ ಹೆಚ್ಚಾಗಿರುವುದನ್ನು ನಿಯಂತ್ರಿಸಲು ನೂತನ ತಂತ್ರ ಹೂಡಿದ್ದಾರೆ. ಅದೇನಪ್ಪಾ ಅಂದುಕೊಂಡ್ರಾ ಈ ಸುದ್ದಿನ ಓದಿ.

ತಮಿಳುನಾಡಿನ ಆಡಳಿತರೂಢ ಎಐಎಡಿಎಂಕೆ ಪಕ್ಷದ ಶಾಸಕ ಆರ್‌.ಕನಗರಾಜ್ ತನ್ನ ಕ್ಷೇತ್ರವಾದ ಸುಲುರ್‌ನಲ್ಲಿ ಸರಗಳ್ಳತನ ಮಾಡಿದವರನ್ನು ಹಿಡಿದುಕೊಟ್ಟವರಿಗೆ 50,000 ರೂಪಾಯಿ ಬಹುಮಾನ ಘೋಷಿಸಿದ್ದಾರೆ.

ಕ್ಷೇತ್ರದಲ್ಲಿ ಸರಗಳ್ಳರ ಹಾವಳಿ ಹೆಚ್ಚಾಗಿತ್ತು. ಹೀಗಾಗಿ ಸರಗಳ್ಳತನ ನಿಯಂತ್ರಿಸಲು ಬಹುಮಾನ ಘೋಷಿಸಿದ್ಧೇನೆ. ಇದರಿಂದ ಕಳ್ಳತನ ನಿತಯಂತ್ರಣಕ್ಕೆ ಬರಲಿದ್ದು, ಸ್ಥಳೀಯರು ಸಹ ಜಾಗೃತೆಯಿಂದ ಇರುತ್ತಾರೆ. ಅಲ್ಲದೇ ಕಳ್ಳತನಕ್ಕೆ ಕಡಿವಾನ ಹಾಕಿದಂತಾಗುತ್ತದೆ ಎಂದು ಶಾಸಕ ಕನಗರಾಜ್ ಹೇಳಿದ್ದಾರೆ.

ಕಳ್ಳರ ಕುರಿತು ಪೊಲೀಸರಿಗೆ ಮಾಹಿತಿ ನೀಡಿ, 5,000 ರೂಪಾಯಿ ಬಹುಮಾನ ಗೆ್ಲ್ಲಿ ಎಂದು ಜನರಿಗೆ ಮನವಿ ಮಾಡಿದ್ದಾರೆ.

ಆದರೆ, ಪ್ರತಿಪಕ್ಷದ ನಾಯಕರು ಶಾಸಕ ಕನಗರಾಜ್ ಅವರ ಈ ಕ್ರಮವನ್ನು ಟೀಕಿಸಿದ್ದಾರೆ. ಇದೊಂದು ಕಮಗರಾಜ್ ಅವರ ಬೇಜವಾಬ್ದಾರಿ ಹೇಳಿಕೆ ಎಂದು ಪೀಪಲ್ಸ್ ಯೂನಿಯನ್ ಆಫ್ ಸಿವಿಲ್ ಲಿಬರ್ಟೀಸ್ (ಪಿ.ಯು.ಸಿ.ಎಲ್) ಯುನಿಯನ್ ಆಫ್ ಇಂಡಿಯಾದ ರಾಷ್ಟ್ರೀಯ ಕಾರ್ಯದರ್ಶಿ ವಿ.ಸುರೇಶ್‌ ಟೀಕಿಸಿದ್ದಾರೆ. ಈ ರೀತಿ ಬಹುಮಾನ ಘೋಷಣೆ ಮಾಡಿರುವುದರಿಂದ ಅಮಾಯಕ ವಲಸೆ ಕಾರ್ಮಿಕರ ಮೇಲೆ ಹಲ್ಲೆಯಾಗುವ ಸಾಧ್ಯತೆಗಳಿವೆ ಎಂದು ಮತ್ತೊಬ್ಬ ನಾಯಕ ಟೀಕಿಸಿದ್ದಾರೆ.

Comments are closed.