
ಎಲ್ಲವೂ ಸುಸೂತ್ರವಾಗಿ ನಡೆದಿದ್ದರೆ ಈಗಾಗಲೆ ಬಾಲಿವುಡ್ ನಟ ಸಲ್ಮಾನ್ ಖಾನ್ ಜತೆಗೆ ಸುದೀಪ್ ತೆರೆಹಂಚಿಕೊಳ್ಳಬೇಕಾಗಿತ್ತು. ‘ಟೈಗರ್ ಜಿಂದಾ ಹೈ’ ಚಿತ್ರದಲ್ಲಿ ಸುದೀಪ್ ನಟಿಸಲಿದ್ದಾರೆ ಎಂಬ ಸುದ್ದಿ ಸಾಕಷ್ಟು ಸದ್ದು ಮಾಡಿತ್ತು. ಇದೀಗ ಬಾಲಿವುಡ್ ವಲಯದಿಂದ ಮತ್ತೊಂದು ಸುದ್ದಿ ಹರಿದುಬಂದಿದೆ.
‘ದಬಾಂಗ್ 3’ ಚಿತ್ರದಲ್ಲಿ ಸುದೀಪ್ ಅಭಿನಯಿಸಲು ಬಾಲಿವುಡ್ನಿಂದ ಆಫರ್ ಬಂದಿದೆ ಎನ್ನುತ್ತಿವೆ ಮೂಲಗಳು. ಈಗಾಗಲೆ ತೆಲುಗಿನ ‘ಸೈರಾ’ ಚಿತ್ರದಲ್ಲಿ ಮೆಗಾ ಸ್ಟಾರ್ ಚಿರಂಜೀವಿ ಜತೆ ಅಭಿನಯಿಸಿರುವ ಸುದೀಪ್ಗೆ ದಬಾಂಗ್ 3 ಚಿತ್ರದಲ್ಲಿ ಮುಖ್ಯಪಾತ್ರ ಸಿಕ್ಕಿದೆಯಂತೆ.
ಸದ್ಯಕ್ಕೆ ದಬಾಂಗ್ 3 ಚಿತ್ರದಲ್ಲಿ ಸುದೀಪ್ ಅಭಿನಯಿಸಲಿದ್ದಾರೆ ಎಂಬ ಸುದ್ದಿ ಅಧಿಕೃತವಾಗಿ ಅಲ್ಲದಿದ್ದರೂ ಬಾಲಿವುಡ್ ವಲಯದಲ್ಲಿ ಕೇಳಿಬಂದಿದೆ. ವಿಶೇಷ ಎಂದರೆ ಈ ಚಿತ್ರದಲ್ಲಿ ಸುದೀಪ್ ಅವರದು ವಿಲನ್ ರೋಲ್ ಎನ್ನುತ್ತಿವೆ ಮೂಲಗಳು.
ಇಂಟರೆಸ್ಟಿಂಗ್ ವಿಚಾರ ಎಂದರೆ ಸುದೀಪ್ ಅವರಿಗೆ ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಖಾನ್ ಆತ್ಮೀಯ ಗೆಳೆತನ ಇದೆ. ಈ ಗೆಳೆತನವೇ ದಬಾಂಗ್ 3 ಚಿತ್ರದತನಕ ಕರೆದೊಯ್ದಿದೆ. ಒಟ್ಟಾರೆ ಈ ಸುದ್ದಿಯ ಸತ್ಯಾಸತ್ಯತೆ ತಿಳಿಯಬೇಕಾದರೆ ಇನ್ನೂ ಸ್ವಲ್ಪ ದಿನಗಳ ಕಾಲ ಕಾಯಲೇಬೇಕು.
ಸುದೀಪ್ ಈ ಹಿಂದೆಯೇ ಹಲವಾರು ಬಾಲಿವುಡ್ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ರಣ್, ಫೂಂಕ್ 2, ರಕ್ತ ಚರಿತ್ರ 1, 2 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
Comments are closed.