ರಾಷ್ಟ್ರೀಯ

ರೈಲಿನಲ್ಲೇ ಅವಳಿ ಮಕ್ಕಳಿಗೆ ಜನ್ಮ ನೀಡಿದ ಮಹಿಳೆ ! ಚಪ್ಪಾಳೆ, ಹರ್ಷೋದ್ಘಾರ ಕೂಗುವ ಮೂಲಕ ಮಹಿಳಗೆ ಶುಭಾಷಯ ಕೋರಿದ ಪ್ರಯಾಣಿಕರು

Pinterest LinkedIn Tumblr

ಥಾಣೆ: ರೈಲಿನಲ್ಲಿ ಮಹಿಳೆಯೊಬ್ಬರು ಅವಳಿ ಮಕ್ಕಳಿಗೆ ಜನ್ಮ ನೀಡಿದ ಘಟನೆ ನಡೆದಿದ್ದು, ಪ್ರಯಾಣಿಕರು ಚಪ್ಪಾಳೆ ತಟ್ಟಿ, ಹರ್ಷೋದ್ಘಾರ ಕೂಗುವ ಮೂಲಕ ಮಹಿಳಗೆ ಶುಭಾಷಯ ಕೋರಿದ್ದಾರೆ.

ಹೆರಿಗೆ ಬಗ್ಗೆ ಮಾಹಿತಿ ತಿಳಿದ ರೈಲ್ವೆ ಅಧಿಕಾರಿಗಳು ಕೂಡಲೇ ಕಲ್ಯಾಣ ನಗರ ಸ್ಟೇಷನ್ ಬಳಿ ರೈಲು ನಿಲ್ಲಿಸಿದ್ದು, ನಂತರ ಆಸ್ಪತ್ರೆಗೆ ದಾಖಲಿಸಲಾಗಿದೆ. ತಾಯಿ ಹಾಗೂ ಮಕ್ಕಳು ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಸ್ಟೇಷನ್ ಮೇಲ್ವಿಚಾರಕ, ಕೇಂದ್ರ ರೈಲ್ವೆ ವೈದ್ಯಕೀಯ ತಂಡ ಹಾಗೂ ರೈಲ್ವೆ ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ಸಲ್ಮಾ ತಬಸುಂ ಎಂಬ ಮಹಿಳೆ ಒಂದು ಹೆಣ್ಣು ಹಾಗೂ ಒಂದು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

ಭಾನುವಾರ ಬೆಳಗಿನ ಜಾವ ಮುಬೈ-ವಿಶಾಖಪಟ್ಟಣಂ ಎಕ್ಸ್‌ಪ್ರೆಸ್ ರೈಲು ಹತ್ತಿದ್ದ ತಬಸುಂಗೆ ಕೆಲವು ಸಮಯದ ನಂತರ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಅವಳಿ ಮಕ್ಕಳು ಜನಿಸಿದೆ. ಮಾಹಿತಿ ತಿಳಿದ ನಂತರ ಮಹಿಳೆಯನ್ನು ರೈಲ್ವೆ ಅಧಿಕಾರಿಗಳ ಸಹಾಯದಿಂದ ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ರೈಲ್ವೆ ಅಧಿಕಾರಿ ಮಾಹಿತಿ ನೀಡಿದ್ದಾರೆ.

Comments are closed.