ಮನೋರಂಜನೆ

ಮಂಡ್ಯದಲ್ಲಿ ನಟ ಹರ್ಷ ಮೇಲೆ ಹಲ್ಲೆ ನಡೆಸಿ ಗೃಹಬಂಧನದಲ್ಲಿಟ್ಟ ಹೋಟೆಲ್ ನೌಕರರು

Pinterest LinkedIn Tumblr

ಮಂಡ್ಯ: ರಾಜಾಹುಲಿ, ಗಜಪಡೆ ಚಿತ್ರದ ಖ್ಯಾತಿಯ ನಟ ಹರ್ಷ ಮೇಲೆ ಹೋಟೆಲ್ ವೊಂದರ ಕೆಲಸಗಾರರು ಹಲ್ಲೆ ಮಾಡಿ, ಗೃಹ ಬಂಧನಲ್ಲಿಟ್ಟಿದ್ದ ಘಟನೆ ಮಂಡ್ಯದಲ್ಲಿ ನಡೆದಿದೆ.

ಮೂಲಗಳ ಪ್ರಕಾರ ನಾಗಮಂಗಲದ ಹೋಟೆಲ್ ಒಂದರಲ್ಲಿ ಗುರುವಾರ ಈ ಘಟನೆ ನಡೆದಿದ್ದು, ಸ್ನೇಹಿತನ ಮದುವೆಗೆ ಮೈಸೂರಿಗೆ ತೆರಳಿದ್ದ ನಟ ಹರ್ಷ ಮತ್ತು ಸ್ನೇಹಿತರ ಜೊತೆ ಮೈಸೂರಿನಿಂದ ವಾಪಸ್ ಬರುವಾಗ ಹಲ್ಲೆ ನಡೆಸಲಾಗಿದೆ.

ಮಂಡ್ಯ ಜಿಲ್ಲೆಯ ನಾಗಮಂಗಲದ ಬೆಳ್ಳೂರು ಕ್ರಾಸ್ ಬಳಿಯ ಹೋಟೆಲ್‌ನಲ್ಲಿ ಹರ್ಷ ಮತ್ತು ಸ್ನೇಹಿತರು ಕಾರು ನಿಲ್ಲಿಸಿ ಊಟಕ್ಕೆ ತೆರಳಿದ್ದರು. ಊಟ ಸರ್ವ್ ಮಾಡುವ ವಿಚಾರಕ್ಕೆ ಮಾತಿನ ಚಕಮಕಿ ನಡೆದಿದ್ದು, ಹೋಟೆಲ್ ಹುಡುಗರು ಹಾಗೂ ಹರ್ಷ ಸ್ನೇಹಿತ ಮಧ್ಯೆ ಗಲಾಟೆ ನಡೆದಿದೆ. ಈ ಸಂದರ್ಭ ಮಾತು ಮಿತಿ ಮೀರಿ ಹೋಟೆಲ್ ಹುಡುಗರು ನಟ ಹರ್ಷ ಮೇಲೆ ಹಲ್ಲೆ ನಡೆಸಿದ್ದಾರೆ.

ಅಲ್ಲದೆ ಹರ್ಷ ಹಾಗು ಸ್ನೇಹಿತರನ್ನು ಹೋಟೆಲ್ ಹುಡುಗರು ಅಲ್ಲಿಯೇ ಕೂಡಿಹಾಕಿದ್ದರು ಎಂದು ತಿಳಿದುಬಂದಿದೆ. ಘಟನೆ ಬಳಿಕ ರಾಜಿ ಸಂಧಾನ ನಡೆಸಸಲಾಗಿದ್ದು, ನಟ ಹರ್ಷ ಮತ್ತು ಸ್ನೇಹಿತರು ದೂರು ದಾಖಲಿಸದೇ ಮನಗೆ ತೆರಳಿದ್ದಾರೆ ಎಂದು ತಿಳಿದುಬಂದಿದೆ.

ರಾಜಾಹುಲಿ, ಗಜಪಡೆ ಸಹಿತ ಹಲವು ಸಿನಿಮಾಗಳಲ್ಲಿ ನಟಿಸಿರುವ ನಟ ಹರ್ಷ, ಇತ್ತೀಚೆಗಷ್ಟೇ ನಟ ಹರ್ಷ ಚಿಕ್ಕಮಗಳೂರಿನಲ್ಲಿ ರೂಪದರ್ಶಿ ಐಶ್ವರ್ಯ ಜೊತೆಗೆ ವಿವಾಹ ನಿಶ್ಚಿತಾರ್ಥವಾಗಿತ್ತು.

Comments are closed.