ಮನೋರಂಜನೆ

ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಿಂದ ಮುಕ್ತನಾಗುವವರೆಗೂ ವಾಪಸ್ಸಾಗುವುದಿಲ್ಲ: ‘ಅಮ್ಮ’ಗೆ ನಟ ದಿಲೀಪ್ ಹೇಳಿಕೆ !

Pinterest LinkedIn Tumblr

ಕೊಚ್ಚಿ: ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಿಂದ ಮುಕ್ತನಾಗುವವರೆಗೂ ಮಲಯಾಳಂ ಚಲನಚಿತ್ರ ಕಲಾವಿದರ ಸಂಘ(ಅಮ್ಮ)ಕ್ಕೆ ವಾಪಸ್ಸಾಗುವುದಿಲ್ಲ ಎಂದು ಆರೋಪ ಎದುರಿಸುತ್ತಿರುವ ನಟ ದಿಲೀಪ್ ಕಲಾವಿದರ ಸಂಘಕ್ಕೆ ತಿಳಿಸಿದ್ದಾರೆ.

ಖ್ಯಾತ ನಟಿಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಎದುರಿಸುತ್ತಿರುವ ನಟ ದಿಲೀಪ್ ಮತ್ತೆ ಕಲಾವಿದರ ಸಂಘಕ್ಕೆ ಅಧ್ಯಕ್ಷರಾಗುವುದಕ್ಕೆ ಮೂವರು ನಟಿಯರು ತೀವ್ರ ವಿರೋಧ ವ್ಯಕ್ತಪಡಿಸಿ, ಈ ಕುರಿತು ಚರ್ಚಿಸಲು ತುರ್ತು ಸಭೆ ಕರೆಯುವಂತೆ ಒತ್ತಾಯಿಸಿದ್ದರು.

ಅಧ್ಯಕ್ಷರಾಗುವುದಕ್ಕೆ ವಿರೋಧ ವ್ಯಕ್ತವಾಗುತ್ತಿದ್ದಂತೆಯೇ ಕಲಾವಿದರ ಸಂಘದ ಕಾರ್ಯದರ್ಶಿ ಎಡವೆಲ ಬಾಬುಗೆ ಪತ್ರ ಬರೆದಿದ್ದು, ಭಾನುವಾರದಂದು ನಡೆದ ಕಾರ್ಯಕಾರಿಣಿ ಸಮಿತಿ ಸಭೆಯಲ್ಲಿ ತಮ್ಮನ್ನು ಅಮಾನತುಗೊಳಿಸಲು ಕೈಗೊಂಡಿರುವ ನಿರ್ಣಯ ಕಾನೂನಾತ್ಮಕವಲ್ಲ ಎಂದು ಹೇಳಿದ್ದಾರೆ. ಸಭೆಯಲ್ಲಿ ಕೈಗೊಂಡ ನಿರ್ಣಯಗಳ ಬಗ್ಗೆ ನನಗೆ ಸಂತಸವಿದೆ. ಆದರೆ ನಾನು ತಪ್ಪೇ ಮಾಡದ ವಿಷಯಕ್ಕೆ ನನ್ನ ವಿರುದ್ಧ ಆರೋಪ ಹೊರಿಸಲಾಗಿದೆ. ನಾನು ಆರೋಪ ಮುಕ್ತನಾಗುವವರೆಗೆ ಕಲಾವಿದರ ಯಾವುದೇ ಸಂಘದಲ್ಲೂ ಸಕ್ರಿಯನಾಗಿರಲು ಬಯಸುವುದಿಲ್ಲ, ಕಲಾವಿದರ ಸಂಘದಲ್ಲಿ ನನ್ನ ಹೆಸರು ಉಲ್ಲೇಖಿಸಿ ಟೀಕಾ ಪ್ರಹಾರ ನಡೆಸಿರುವುದು ನನಗೆ ನೋವುಂಟುಮಾಡಿದೆ, ಕಲಾವಿದರ ಸಂಘಕ್ಕೆ ಆಯ್ಕೆಯಾಗಿರುವ ಹೊಸ ಸಮಿತಿಗೆ ನಾನು ಶುಭಕೋರುತ್ತೇನೆ ಎಂದು ಪತ್ರದಲ್ಲಿ ದಿಲೀಪ್ ತಿಳಿಸಿದ್ದಾರೆ.

Comments are closed.